ಧಾರವಾಡ ಕೃಷಿ ವಿವಿ ಹಗರಣ, ರಾಜ್ಯಪಾಲರಿಂದ ತನಿಖೆಗೆ ಆದೇಶ: ಗಂಗಾಧರ ಕುಲಕರ್ಣಿ

ವಿವಿ

ಧಾರವಾಡ: ಕೃಷಿ ವಿಶ್ವವಿದ್ಯಾಲಯದಲ್ಲಿ ಹಲವಾರು ಹಗರಣಗಳು ಹಾಗೂ ಅಕ್ರಮಗಳು ನಡೆದಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಶಿವಸೇನಾ ಸಂಘಟನೆಯ ಆರೋಪಗಳ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕೃಷಿ ವಿಶ್ವ ವಿದ್ಯಾಲಯದಲ್ಲಿ ಪ್ರತಿಭಟನೆ, ಪತ್ರಿಕಾಗೋಷ್ಠಿ, ಮನವಿ ಇತ್ಯಾದಿ ಮೂಲಕ ಒತ್ತಾಯಿಸಿದ್ದರಿಂದ ರಾಜ್ಯಪಾಲರು ನಿವೃತ್ತ ನ್ಯಾಯಧೀಶರ ಮೂಲಕ ತನಿಖೆಗೆ ಆದೇಶ ನೀಡಿದ್ದು, ಹೋರಾಟಕ್ಕೆ ಸಂದ ಜಯ ಎಂದು ಶಿವಸೇನಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ ಕುಲಕರ್ಣಿ ತಿಳಿಸಿದರು.

ಈ ಹೋರಾಟದಲ್ಲಿ ಕೃಷಿ ವಿಶ್ವ ವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಗಟ್ಟಿ ಧ್ವನಿಯ ಹೋರಾಟ ಸಹ ಪ್ರಮುಖ ಪಾತ್ರವಹಿಸಿದ್ದು ವ್ಯವಸ್ಥಾಪಕ ಮಂಡಳಿ ಸದಸ್ಯರಿಗೂ ಅಭಿನಂದನೆ ಸಲ್ಲಿಸುವೆ. ಸರ್ಕಾರ, ರಾಜ್ಯಪಾಲರವರೆಗೂ ತಲುಪಿಸಿದ ಎಲ್ಲ ಹೋರಾಟಗಾರರಿಗೂ ಕೃತಜ್ಞತೆಗಳು, ಕೃಷಿ ವಿಶ್ವ ವಿದ್ಯಾಲಯ ಕಳಂಕಮುಕ್ತವಾಗಿ ರೈತರಿಗೆ, ಕೃಷಿ ವಿದ್ಯಾರ್ಥಿಗಳಿಗೆ ಭವಿಷ್ಯ ಕಲ್ಪಿಸಲು ಈ ಹೋರಾಟ ಮಾಡಿದೆ ಎಂದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma