ಸಿರಸಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಲತಿಕಾ ನಾಗೇಶ್ ಮೊಗೇರ 625 ಕ್ಕೆ 623 ಅಂಕ ಗಳಿಸಿ ರಾಜ್ಯಕ್ಕೆ 3 ನೇ ರ್ಯಾಂಕ್ ದಾಖಲಿಸಿದ್ದಾಳೆ. ಸಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ರ್ಯಾಂಕ್ ಪಡೆಯುವ ಮೂಲಕ ಎಲ್ಲ ಪ್ರೀತಿಗೆ ಪಾತ್ರಳಾಗಿದ್ದಾಳೆ. ಶಾಲೆ 8 ಮಂದಿ ವಿದ್ಯಾರ್ಥಿಗಳು ರಾಜ್ಯದ ಟಾಪ್ 10 ರಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಲತಿಕಾ ನಾಗೇಶ್ ಮೊಗೇರ 625 ಕ್ಕೆ 623, ಅಲಂಕೃತ ದೇವಸೂರ 620, ಪ್ರಥೀಕಾ ಹಸ್ಲರ್ 619, ಅಮಿತ್ ಆರ್ ಭಟ್ಟ 619, ನಿಖಿತಾ ಎಲ್ ಜಿ 619, ನಿಶ್ಚಲಾ ಮರಾಠೆ 617, ಅಮಿತ್ ಜಿ ಹೆಗಡೆ 617, ಸೌರವ್ ಅರ್ಗೆಕರ್ 617 ಪಡೆದಿದ್ದಾರೆ ಎಂದು ಶಾಲೆಯ ಪ್ರಕಟಣೆ ತಿಳಿಸಿದೆ.
ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಒಟ್ಟು 501 ಮಂದಿ ವಿದ್ಯಾರ್ಥಿಗಳಲ್ಲಿ 493 ವಿದ್ಯಾರ್ಥಿಗಳು ಉತ್ತೀರ್ಣರಾಗಿ, ಶೇ 98 .40 ದಾಖಲೆಯ ಫಲಿತಾಂಶ ದಾಖಲಿಸಿದ್ದಾರೆ.





