ಪಿಯುಸಿ ಪರೀಕ್ಷೆಯಲ್ಲಿ ವೈಭವಿ, ವೈಷ್ಣವಿ ಸಹೋದರಿಯರ ಸಾಧನೆ, ಶಾಸಕ ಡಾ. ಭರತ್ ಶೆಟ್ಟಿ ಸನ್ಮಾನ

1102

ಮಂಗಳೂರು: ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಹೊಸಬೆಟ್ಟು ನಿವಾಸಿಗಳಾದ ಸುರೇಶ್ ಕರ್ಕೇರ ಶಕುಂತಲಾ ದಂಪತಿ ಅವಳಿ ಪುತ್ರಿಯರಾದ ವೈಭವಿ ಎಸ್. ಕರ್ಕೇರ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಕ್ಕೆ 598 ಅಂಕ ಪಡೆದು 2 ನೇ ರ‍್ಯಾಂಕ್, 590 ಅಂಕ ಪಡೆದ ವೈಷ್ಣವಿ ಎಸ್. ಕರ್ಕೇರ 10 ನೇ ರ‍್ಯಾಂಕ್ ಪಡೆದಿದ್ದು ಅವರ ಸಾಧನೆ ಗುರುತಿಸಿ ಮಂಗಳೂರು ಉತ್ತರದ ಶಾಸಕ ಡಾ.ವೈ ಭರತ್ ಶೆಟ್ಟಿ ಅವರು ವಿದ್ಯಾರ್ಥಿನಿಯರ ನಿವಾಸಕ್ಕೆ ತೆರಳಿ ಅಭಿನಂದಿಸಿ, ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಗಂಗಾಧರ ಗುರಿಕಾರ ಹೊಸಬೆಟ್ಟು , ಶರತ್ ಎಲ್ ಕರ್ಕೇರ ಅಧ್ಯಕ್ಷರು ವೀರ ಮಾರುತಿ ವ್ಯಾಯಾಮ ಶಾಲೆ,ಹೊಸಬೆಟ್ಟು, ಮಹಾ ಶಕ್ತಿಕೇಂದ್ರ ಅಧ್ಯಕ್ಷರಾದ ದಿನಕರ್ ಇಡ್ಯಾ, ಸುನೀಲ್ ಕುಳಾಯಿ, ಮಂಡಲ ಕಾರ್ಯದರ್ಶಿ ಪುಷ್ಪರಾಜ್ ಮುಕ್ಕ ನಿಕಟ ಪೂರ್ವ ಮನಪಾ ಸದಸ್ಯರಾದ ಶೋಭಾ ರಾಜೇಶ್, ಶ್ವೇತಾ ಪೂಜಾರಿ, ನಯನ ಕೋಟ್ಯಾನ್, ವಾರ್ಡ್ ಅಧ್ಯಕ್ಷರು ರಾಜೇಶ್ ಮುಕ್ಕ, ಕಾರ್ಯದರ್ಶಿ ಅನಂತ್ ರಾಜ್, ಪಕ್ಷದ ಅನನ್ಯಾ ಜವಾಬ್ದಾರಿಯುತ ಕಾರ್ಯಕರ್ತರು ಭಾಗವಹಿಸಿದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma