ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು ಮಿಂಚು ಸಹಿತ ಮಳೆ, ಕಾರವಾರ ನಗರದಲ್ಲಿ 21.2 ಮಿಲಿ ಮೀಟರ್ ಮಳೆ

Spread the love

ಕಾರವಾರ: ಸೋಮವಾರ ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಗುಡುಗು ಮಿಂಚು ಸೇರಿದಂತೆ ಮಳೆ ಸುರಿಯಿತು. ಪರಿಣಾಮ ಸೆಖೆಯ ಧಗೆಯಿಂದಾಗಿ ಕಂಗಾಲಾಗಿದ್ದ ಜನರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತೆ ಆಯಿತು. ‌ಘಟ್ಟದ ಕೆಲವೆಡೆ, ಕರಾವಳಿಯಲ್ಲಿ ಕೆಲವೆಡೆ ಮಳೆ ಸುರಿದಿದೆ. ‌

ಹಳಿಯಾಳ ತಾಲೂಕಿನ ಗೊಂಡಳ್ಳಿ 25 ಮಿಲಿ ಮೀಟರ್, ತಡರಗಾಂವ್ ದಲ್ಲಿ 15.5 , ಚಿಬ್ಬಲಗೇರಿ 21.5, ಕಾರವಾರ ನಗರ 21.2, ಕದ್ರಾ 9 ದಲ್ಲಿ , ಮುಡಗೇರಿ 7 ಎಂ ಎಂ , ದಾಂಡೇಲಿ ಅಂಬಿಕಾನಗರದಲ್ಲಿ ತಲಾ 18.5 ಮಿಲಿ ಮೀಟರ್ ಮಳೆ ಸುರಿದಿದೆ. ಹಳಿಯಾಳದ ಭುಜಕಂಚಿಹಳ್ಳಿಯಲ್ಲಿ 7.5, ಹಾವಗಿಯಲ್ಲಿ 6 ಮಿಲಿ ಮೀಟರ್ , ಬೆಳವಟಗಿಯಲ್ಲಿ 5 ಎಂ . ಎಂ. ಮಳೆ ಸುರಿದಿದೆ.‌

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *