ಚೆನ್ನೈ: ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 22ನೇ ಐಪಿಎಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಮಾಡಿದ್ದ ಸಿಎಸ್‌ಕೆ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ 2ನೇ ಗೆಲುವು ದಾಖಲಿಸಿದೆ.
ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ 48 ರನ್, ಡೆವಾಲ್ಡ್ ಬ್ರೆವಿಸ್ 41, ಆಯುಷ್ ಮ್ಹಾತ್ರೆ 38 ರನ್ ಪೇರಿಸಿದರು. ನೂರ್ ಅಹ್ಮದ್ ಅಬ್ಬರದ ಬೌಲಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ 32 ರನ್‌ಗಳ ಅಂತರದ ಜಯ ದಾಖಲಿಸಿದೆ.
ಕೆಕೆಆರ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 160 ರನ್ ಗಳಿಸಿ ಹೀನಾಯ ಸೋಲು ಕಂಡಿತು.
ಕೆಕೆಆರ್ ಪರ ರಮಣ್‌ದೀಪ್ ಸಿಂಗ್ 35, ರೋವ್‌ಮನ್ ಪೊವೆಲ್ (ಔಟಾಗದೆ) 31, ನಾಯಕ ಅಂಜಿಕ್ ರಹಾನೆ 28 , ರಘುವಂಶಿ 27 ರನ್ ಗಳಿಸಿದರು.





