ಬಾಗಲಕೋಟೆ: ಇಲ್ಲಿನ ಉಪ ಚುನಾವಣೆಯ ವಿಧಾನಸಭೆ ಕಣದಿಂದ ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ ಗುರುವಾರ 5 ಮಂದಿ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದ ಪರಿಣಾಮ 9 ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಉಳಿದುಕೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಜಗಲಾಸರ ಅವರು ತಿಳಿಸಿದ್ದಾರೆ.
ನಾಮಪತ್ರ ಪರಿಶೀಲನೆ ವೇಳೆ 14 ಅಭ್ಯರ್ಥಿಗಳ 26 ನಾಮಪತ್ರಗಳು ಕ್ರಮಬದ್ದ ಆಗಿದ್ದವು. ನಾಮಪತ್ರ ವಾಪಸ್ ಪಡೆಯಲು 26 ಕೊನೆ ದಿನ ಆಗಿತ್ತು. ಹೀಗಾಗಿ ಗೋವಿಂದ ಬಳ್ಳಾರಿ, ಅಬ್ದುಲ್ ರಜಾಕ ಬಾಳಿಕಾಯಿ, ಅಬ್ಯುಬ್ ಖಾನ್ ಲಾಲಸಾಬ ಬಾಗೇವಾಡಿ, ಪ್ರಶಾಂತ ಶರಣಪ್ಪ ರಾವ್, ಯಂಕಪ್ಪ ಬಾಪಣ್ಣ ಕಮತಗಿ ಚುನಾವಣೆ ಕಣದಿಂದ ಹಿಂದೆ ಸರಿದಿದ್ದಾರೆ.
ಕಾಂಗ್ರೆಸ್‍ನ ಉಮೇಶ ಹಲ್ಲಪ್ಪ ಮೇಟಿ, ಬಿಜೆಪಿ ಚರಂತಿಮಠ ವೀರಭದ್ರಯ್ಯ (ವೀರಣ್ಣ), ಉತ್ತಮ ಪ್ರಜಾಕೀಯ ಪಕ್ಷದ ಅಂತೋಷ ಸವ್ವಾಸ, ಜನತಾ ಚಳವಳಿ ಭಾರತ ಪಕ್ಷದ ತೇಜೋರಾಮಶೆಟ್ಟಿ ದೇವಾಂಗ, ಕರ್ನಾಟಕ ರಾಷ್ಟ್ರ ಸಮಿತಿ ನಾಗರಾಜ ಕಲಕುಟಗರ, ಬ್ಲೂ ಇಂಡಿಯಾ ಪಕ್ಷದ ಸಿದ್ದಪ್ಪ ಗೋಡಿ, ಪಕ್ಷೇತರರಾಗಿ ಆನಂದ ಜಕಾತಿ, ರವಿ ಪಡಸಲಗಿ ಅಂತಿಮ ಕಣದಲ್ಲಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.





