ಗೋಪಾಲಕೃಷ್ಣ ನಾಯಕ್ ಕೊಲೆ ಯತ್ನ ಪ್ರಕರಣ, ನಾಲ್ಕು ಮಂದಿ ಬಂಧನ, ತನಿಖೆಗೆ ನಾಲ್ಕು ತಂಡ ರಚನೆ: ಎಸ್ಪಿ ದೀಪನ್

Spread the love

ಕಾರವಾರ: ಅಂಕೋಲಾದಲ್ಲಿ ಬುಧವಾರ ಕಾಂಗ್ರೆಸ್ ಗೋಪಾಲಕೃಷ್ಣ ನಾಯಕ ಎಂಬುವವರ ಮೇಲೆ ನಡೆದ ಕೊಲೆಯ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ 4 ಮಂದಿಯನ್ನು ಬಂಧನ ಮಾಡಲಾಗಿದ್ದು, ಉಳಿದವರ ಬಂಧನಕ್ಕಾಗಿ ನಾಲ್ಕು ಪೊಲೀಸ್ ತಂಡವನ್ನು ರಚನೆ ಮಾಡಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್‌ ಅವರು ಗುರುವಾರ ತಿಳಿಸಿದ್ದಾರೆ.

ಈಗಾಗಲೇ 4 ಮಂದಿಯನ್ನು ಗೋವಾ ಗಡಿಭಾಗದ ಮಾಜಾಳಿ ಚೆಕ್ ಪೋಸ್ಟ್‌ನಲ್ಲಿ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳು ಜಾಕೀರ್, ನೈಜಲ್, ಸದ್ದಾಂ ಹಾಗೂ ಇರ್ಫಾನ್ ಎಂದು ಗುರುತಿಸಲಾಗಿದೆ. ಬಂಧಿತರು ಗೋವಾ ಮೂಲದವರಾಗಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದು. ಆರೋಪಿಗಳು ಆಗಾಗ್ಗೆ ಅಂಕೋಲಾಕ್ಕೆ ಬಂದು ಹೋಗುತ್ತಿದ್ದರೆಂಬ ಮಾಹಿತಿ ಲಭ್ಯ ಆಗಿದೆ. ಘಟನೆಯ ವೇಳೆ ಇಬ್ಬರು ನೇರವಾಗಿ ದಾಳಿ ನಡೆಸಿದ್ದು, ಇನ್ನೂ ನಾಲ್ವರು ಸುತ್ತಲು ಇದ್ದು ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೂ ದಾಳಿಗೆ ಬಳಿಸಿದ್ದ ಎರಡು ಬೈಕ್ ಹಾಗೂ ಕಾರ ಅನ್ನು ವಶಕ್ಕೆ ಪಡೆಯಲಾಗಿದೆ. ಗೋಪಾಲ ಕೃಷ್ಣ ನಾಯಕ ಅವರ ಮೇಲೆ ದಾಳಿ ನಡೆಸಲು ಸುಪಾರಿ ಪಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖೆ‌ ನಡೆಸಲಾಗುತ್ತಿದೆ. ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *