ಬಾಗಲಕೋಟೆ ಉಪ ಚುನಾವಣೆ: 18 ಅಭ್ಯರ್ಥಿಗಳಿಂದ 26 ನಾಮಪತ್ರ ಸಲ್ಲಿಕೆ

Spread the love

ಬಾಗಲಕೋಟೆ: ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಸೋಮವಾರ ಒಟ್ಟು 13 ಮಂದಿ ಅಭ್ಯರ್ಥಿಗಳಿಂದ 19 ನಾಮಪತ್ರ ಸಲ್ಲಿಕೆಯಾಗಿವೆ. 18 ಅಭ್ಯರ್ಥಿಗಳು 26 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಸಂತೋಷ ಜಗಲಾಸರ ಅವರು ತಿಳಿಸಿದ್ದಾರೆ.

ಬಿಜೆಪಿಯ ವೀರಭದ್ರಯ್ಯ ಚರಂತಿಮಠ 3 ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಪಕ್ಷದ ಉಮೇಶ ಮೇಟಿ 4 ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಶಿವಪ್ಪ ಪಡಸಲಗಿ ಎರಡು ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಯಂಕಪ್ಪ ಕಮತಗಿ, ಅಬ್ದುಲ್ ರಜಾಕ್ ಬಾಳೀಕಾಯಿ, ಆಯುಬಖಾನ ಲಾಲಸಾಬ ಬಾಗೇವಾಡಿ, ಪರಶುರಾಮ ನೀಲನಾಯಕ, ಬಾಬುಷಾ ರೊಳ್ಳಿ, ಪ್ರಶಾಂತ ರಾವ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನಿಂದ ಗೋವಿಂದರಾಜ ಬಳ್ಳಾರಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ನಾಗರಾಜ ಕಲಕುಟಗರ, ಜನತಾ ಚಳವಳಿ ಭಾರತ ಪಕ್ಷದಿಂದ ತೇಜೋರಾಮ ಶೆಟ್ಟಿ, ಆಲ್ ಇಂಡಿಯಾ ಜನರಕ್ಷಾ ಪಾರ್ಟಿಯಿಂದ ಸಿದ್ದಪ್ಪಗೋಡಿ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮಾ. 20 ರಂದು 5 ಅಭ್ಯರ್ಥಿಗಳಿಂದ 7 ನಾಮಪತ್ರ ಸಲ್ಲಿಕೆ ಆಗಿದ್ದವು. ಹೀಗಾಗಿ ಇಲ್ಲಿಯವರೆಗೆ ಒಟ್ಟು 18 ಅಭ್ಯರ್ಥಿಗಳಿಂದ ಒಟ್ಟು 26 ನಾಮಪತ್ರಗಳು ಸಲ್ಲಿಕೆ ಆದಂತೆ ಆಗಿದೆ ಎಂದು ತಿಳಿಸಿದ್ದಾರೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *