ಉಳ್ಳಾಲ: ತಾಲೂಕಿನ ತಾಳಿತಬೆಟ್ಟು ಗ್ರಾಮದಲ್ಲಿ ತಲಪಾಡಿ ಶಾರದಾ ಕಾಲೇಜಿನ ಎನ್ಎಸ್ಎಸ್ ಘಟಕದಿಂದ ಆಯೋಜಿಸಿದ್ದ 7 ದಿನಗಳ ವಿಶೇಷ ಶಿಬಿರದ ಉದ್ಘಾಟನೆಯನ್ನು ಬಗರ್ ಹುಕುಂ ಸಮಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ನಡೆಸಿ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಶಿಕ್ಷಣದ ಕುರಿತು ಶಿಬಿರಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾರದ ಸಮೂಹ ಸಂಸ್ಥೆಯ ನಿರ್ದೇಶಕ ಸಮೀರ್ ಪುರಾಣಿಕ ಅವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ ಮತ್ತು ವ್ಯಕ್ತಿತ್ವ ವಿಕಸನದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ತಾಳಿತಬೆಟ್ಟು ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸೋನಿತಾ ಕೆ ಅವರು ಮಾತನಾಡಿ, ಶಿಬಿರವು ಯುವ ವ್ಯಕ್ತಿಗಳಲ್ಲಿ ಸಮುದಾಯದ ತೊಡಗಿಸಿಕೊಳ್ಳುವಿಕೆ ತಂಡದ ಕೆಲಸ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ವೇದಿಕೆ ಆಗಿದೆ ಎಂದರು.
ಪ್ರಾಂಶುಪಾಲೆ ಡಾ. ಮೀನಾ ಜಿ. ಪಣಿಕ್ಕರ್ ಅವರು ಮಾತನಾಡಿ, ಎನ್ಎಸ್ಎಸ್ ಶಿಬಿರವು ಯಶಸ್ಸು ನಮ್ಮ ಪರಿಶ್ರಮದ ಮೇಲೆ ನಿಂತಿರುತ್ತದೆ ಪ್ರಯತ್ನ ಇದ್ದರೆ ಫಲವನ್ನು ಪಡೆಯಬಹುದು ಎಂದರು.
ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಮ್ಮರ್ ಎಂ ಬಿ., ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಶಾಲೆ ಹಿರಿಯ ಶಿಕ್ಷಕ ಮೊಹಮ್ಮದ್ ಐ ಹಾಗೂ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಚೆನ್ನಯ್ಯ ಹಾಗೂ ರೇಷ್ಮಾ ಪಿ. ವಿ ಇದ್ದರು. ವಿದ್ಯಾರ್ಥಿಗಳಾದ ಧ್ಯಾನ್ ನಿರೂಪಿಸಿ, ಮನ್ವಿತ ಹಾಗೂ ದೀಕ್ಷಾ ವಂದಿಸಿ ಕಾರ್ಯಕ್ರಮ ನಡೆಸಿಕೊಟ್ಟರು.





