ಮೂಡುಬಿದಿರೆ ಎಕ್ಸ್ ಲೆಂಟ್ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿಯಲ್ಲಿ ಶೇ 100 ಫಲಿತಾಂಶ, ದಾಖಲೆಯ ರ‍್ಯಾಂಕ್: ಅಧ್ಯಕ್ಷ ಯುವರಾಜ್ ಜೈನ್

WhatsApp Image 2026 04 26 at 12.15.04 PM

ಮೂಡುಬಿದಿರೆ: ಎಕ್ಸಲೆಂಟ್ ಮೂಡುಬಿದಿರೆ ಶಾಲೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತ್ಯುತ್ತಮ 10 ರ‍್ಯಾಂಕ್‌ಗಳಲ್ಲಿ 9 ಮಂದಿ ವಿದ್ಯಾರ್ಥಿಗಳು ರ‍್ಯಾಂಕ್‌ಗಳನ್ನು ಪಡೆದು ಸತತ 6 ನೇ ಬಾರಿ ಶೇ 100 ಫಲಿತಾಂಶ ಪಡೆದು ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದು ಎಕ್ಸಲೆಂಟ್ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ಅಧ್ಯಕ್ಷ ಯುವರಾಜ್ ಜೈನ್ ತಿಳಿಸಿದ್ದಾರೆ.

ಸಚಿನ್ ಡಿ ನಾಯ್ಕ್ 622 (4ನೇ ರ‍್ಯಾಂಕ್), ನಕ್ಷತ್ರ ವಿ – 620 (6 ನೇ ರ‍್ಯಾಂಕ್), ಗಗನ್ ಪಾಟೀಲ್ – 618( 8 ನೇ ರ‍್ಯಾಂಕ್), ದೇವಾನಂದ ಹನುಮಂತ ಗೌಡ ಬಿರಾದಾರ್ – 618(8 ನೇ ರ‍್ಯಾಂಕ್), ಅನ್‌ಮೋಲ್ ಆರ್ ಪಾಟೀಲ್ – 618( 8 ನೇ ರ‍್ಯಾಂಕ್), ಪ್ರತೀಕ್ ಸಂಗ್ರೀಷಿ – 617 (9 ನೇ ರ‍್ಯಾಂಕ್), ಸಿ ಹರಿಪ್ರೀತ್ ವಿ ಪೈ – 616( 10 ನೇ ರ‍್ಯಾಂಕ್), ಆರ್ಯನ್ ಕುಮಾರ್ ಹಳ್ಳಿ – 616(10 ನೇ ರ‍್ಯಾಂಕ್), ಆಕಾಂಕ್ಷ್ ಎಮ್ ಜೈನ್ – 616 ( 10 ನೇ ರ‍್ಯಾಂಕ್) ಗಳನ್ನು ಗಳಿಸುವ ಮೂಲಕ ಸಂಸ್ಥೆಯ ಸಂಸ್ಕಾರಭರಿತ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿ ಆಗಿದೆ. ಈ ಸಾಧನೆಯಲ್ಲಿ 23 ಮಂದಿ ವಿದ್ಯಾರ್ಥಿಗಳು 610 ಕ್ಕಿಂತ ಹೆಚ್ಚು, 45 ಮಂದಿ ವಿದ್ಯಾರ್ಥಿಗಳು 600 ಕ್ಕಿಂತ ಹೆಚ್ಚು ಅಂಕ ದಾಖಲಿಸಿದ್ದಾರೆ ಎಂದರು.

53 ವಿದ್ಯಾರ್ಥಿಗಳು ಶೇ 95 ಕ್ಕಿಂತ ಹೆಚ್ಚು, 112 ವಿದ್ಯಾರ್ಥಿಗಳು ಶೇ 90 ಕ್ಕಿಂತ ಹೆಚ್ಚು ಹಾಗೂ 151 ವಿದ್ಯಾರ್ಥಿಗಳು ಶೇ 85 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿ ಪಡೆದು ಸಾಧನೆ ಮೆರೆದಿದ್ದಾರೆ. ವಿಷಯವಾರು ಸಾಧನೆಯಲ್ಲಿ ವಿದ್ಯಾರ್ಥಿಗಳು ಮೈಲುಗಲ್ಲು ಸ್ಥಾಪಿಸಿದ್ದು, ಸಂಸ್ಕೃತದಲ್ಲಿ 45 ಮಂದಿ ವಿದ್ಯಾರ್ಥಿಗಳು ಕನ್ನಡದಲ್ಲಿ 44, ಹಿಂದಿಯಲ್ಲಿ 31, ಗಣಿತದಲ್ಲಿ 11, ಸಮಾಜ ವಿಜ್ಞಾನದಲ್ಲಿ 8 ಮತ್ತು ವಿಜ್ಞಾನ ವಿಷಯದಲ್ಲಿ 2 ಮಂದಿ ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳು ಮತ್ತು ಪ್ರಥಮ ಭಾಷೆ ಇಂಗ್ಲಿಷ್‌ನಲ್ಲಿ 13 ಮಂದಿ ವಿದ್ಯಾರ್ಥಿಗಳು 125 ಅಂಕಗಳಿಗೆ 124 ಅಂಕ ಪಡೆದು ಸಾಧನೆ ಮಾಡಿದ್ದಾರೆ ಎಂದರು.

141 ವಿದ್ಯಾರ್ಥಿಗಳು 100ಕ್ಕೆ 100 ಅಂಕ ಪಡೆಯುವ ಮೂಲಕ ಸಂಸ್ಥೆಗೆ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಶಿಸ್ತುಬದ್ದ ಅಭ್ಯಾಸ, ಪರಿಶ್ರಮ, ಬೋಧಕ ಸಿಬ್ಬಂದಿ ಮಾರ್ಗದರ್ಶನದಿಂದ ಈ ಯಶಸ್ಸು ಲಭಿಸಿದೆ. ಈ ಯಶಸ್ಸಿಗೆ ಶ್ರಮಿಸಿದ ಎಲ್ಲ ವಿದ್ಯಾರ್ಥಿಗಳಿಗೆ, ಅವರ ಪೋಷಕರಿಗೆ ಹಾಗೂ ಬೋಧಕ ವರ್ಗಕ್ಕೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅವರು ವಿದ್ಯಾರ್ಥಿಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ. ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್ ಹಾಗೂ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

Moodbidri: Excellent School, Moodbidri, has once again demonstrated its academic excellence by securing a 100% pass rate in the SSLC examinations for the sixth consecutive year. Notably, nine students from the institution have secured positions among the top 10 ranks, highlighting the school’s consistent high performance.

Chairman of the Excellent Group of Institutions, Yuvaraj Jain, stated that this achievement reflects the institution’s commitment to quality education.

Among the top performers, Sachin D. Naik scored 622 marks, securing 4th rank. Nakshatra V. scored 620 marks (6th rank), while Gagan Patil, Devanand Hanumant Gouda Biradar, and Anmol R. Patil each scored 618 marks, securing 8th rank. Prateek Sangrishi scored 617 marks (9th rank). C. Haripreeth V. Pai, Aryan Kumar Halli, and Akanksh M. Jain scored 616 marks each, securing 10th rank.

The school reported that 23 students scored above 610 marks, while 45 students scored above 600 marks.

In terms of overall performance, 53 students secured above 95%, 112 students scored above 90%, and 151 students achieved more than 85%, earning distinction.

Subject-wise, students delivered exceptional results. A total of 45 students scored full marks in Sanskrit, 44 in Kannada, 31 in Hindi, 11 in Mathematics, 8 in Social Science, and 2 in Science. In First Language English, 13 students scored 124 out of 125 marks.

Overall, 141 students scored perfect 100 marks in various subjects, bringing further recognition to the institution.

The chairman credited the success to students’ disciplined study habits, hard work, and the guidance of the teaching staff. He extended congratulations to the students, their parents, and the faculty for their contributions to this achievement.

Secretary Rashmita Jain expressed happiness over the students’ accomplishments. Headmaster Shivaprasad Bhat and the teaching staff also congratulated the students on their success.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma