ಮೂಡುಬಿದಿರೆ ಎಕ್ಸಲೆಂಟ್ ವಿಜ್ಞಾನ, ವಾಣಿಜ್ಯ ಕಾಲೇಜಿಗೆ ಪಿಯುಸಿಯಲ್ಲಿ ದಾಖಲೆಯ ಫಲಿತಾಂಶ: ಯುವರಾಜ್ ಜೈನ್

Spread the love

ಮೂಡಬಿದಿರೆ: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಮೂಡಬಿದಿರೆ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಅಭೂತಪೂರ್ವ ಯಶಸ್ಸ ಅನ್ನು ದಾಖಲಿಸಿದೆ. ಕಾಲೇಜಿನ ಒಟ್ಟು 32 ವಿದ್ಯಾರ್ಥಿಗಳು ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದ ಮೊದಲ 10 ರ‍್ಯಾಂಕ್‌ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಸಂಸ್ಥೆಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅವರು ತಿಳಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ತನ್ಮಯಿ ಎ ಕೋಟಿ – 597, ನಕ್ಷಾ ವಿಜೀತ್ ಪಟೇಲ್ – 593,ಗೋಕುಲ್ ಎಂ – 593, ಪೂರ್ವಿ ಪಿ ಶೆಟ್ಟಿ – 593, ವರುಣ್ ಆರ್ – 593, ಸಾತ್ವಿಕ್ ದತ್ತ ಬೋಯ – 592, ಹಂಸಿಕಾ ಎಚ್ ಎಸ್ – 592, ಸಮರ್ಥ ಕೆ. ಎಸ್ – 592, ಶ್ಯಾಮಕಲ್ಯಾಣ್ ಬೆಣ್ಣೂರು – 592, ತರುಣಿಕಾ ಎಸ್ – 592, ಎಂ ಆರ್ ಅಶ್ಮಿತಾ ರಾಮ್ – 591, ಸ್ವರೂಪ ಎಂ. ಸಜ್ಜನಶೆಟ್ಟಿ – 591, ಕುಸುಮಾ ಎಸ್ – 591, ಭಾರ್ಗವ್ ಎಸ್ ಭಟ್ – 590, ಹಿಮವಂತ್ ಪಿ – 590, ಗುರುಚರಣ್ ಎಂ ಶೆಟ್ಟಿ – 590, ಹಿಮೇಶ್ ಶಂಕರ್ – 590, ಹೇಮಾ ಯು – 589, ಸಂಜನಾ ಹಳ್ಳದಮನಿ – 589, ರಿತಿಶಾ ಜೈರಾಮ್ ಕೊಚ್ರೇಕರ್ – 589, ನಿಖಿಲ್ ಎಸ್ ಎಸ್ – 589, ಲಾಕ್ಷ ವೈ – 589 ಅಂಕ ಗಳಿಸಿದ್ದಾರೆ ಎಂದು ತಿಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಕೆ.ಎಚ್. ಅದಿತಿ ಭೂಷಣ್ 597, ಶೇಕ್ ಮೊಹಮ್ಮದ್ ರಮೀಜ್ 595, ಸುವಿತ್ ಭಂಡಾರಿ 594, ಶ್ರಾವಣಿ ಎಂ 594, ಸುಹಾನ ಸಚಿನ್ 593, ಶಮಂತ್ ಕೆ. ಎಂ 592, ಹೃತಿಕ್ ಎಂ. ಎನ್ 592, ಹರ್ಷಿತ್ ಕಲಾಲ್ 592, ವಿಕ್ರಮ್ 592, ಕಾರ್ತಿಕ್ ಸುರೇಶ್ ಅಗಡಿ 591 ಅಂಕ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಕಾಲೇಜಿನ ಆಧುನಿಕ ಗುರುಕುಲ ಪದ್ಧತಿ, ನಿರಂತರ ಪರಿಶ್ರಮ ಮತ್ತು ವಿದ್ಯಾರ್ಥಿಗಳ ಛಲ ಈ ಯಶಸ್ಸಿಗೆ ಕಾರಣ. ಕೇವಲ ಅಂಕಗಳಿಗಾಗಿ ಮಾತ್ರವಲ್ಲದೆ, ಜ್ಞಾನ ಮತ್ತು ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತಿದ್ದೇವೆ. ಈ ಸಾಧನೆ ನಮ್ಮ ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕನ್ನಡಿ. ಸಂಸ್ಥೆಯ ಈ ಸಾಧನೆಗೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕರು ವಿದ್ಯಾರ್ಥಿಗಳನ್ನು ಮತ್ತು ಅವರ ಪೋಷಕರನ್ನು ಅಭಿನಂದಿಸುವುದಾಗಿ ತಿಳಿಸಿದ್ದಾರೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *