ಆಹಾರ ನೀಡುವುದು ಕೂಡ ಶ್ರೇಷ್ಠದಾನ: ಜಿಲ್ಲಾ ಸರ್ಜನ್ ಡಾ. ಅಶೋಕ್

WhatsApp Image 2026 03 25 at 4.28.10 PM1

ಉಡುಪಿ: ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಅಸಾಂಕ್ರಮಿಕ ರೋಗಗಳ ಘಟಕ .ಎನ್.ಸಿ.ಡಿ ಜಿಲ್ಲಾ ಆಸ್ಪತ್ರೆ ಉಡುಪಿ ಎನ್.ಸಿ. ಡಿ ವಿಭಾಗ ಜಿಲ್ಲಾ ಆಸ್ಪತ್ರೆ ಎಆರ್ ಟಿ ಕೇಂದ್ರ ಹಾಗೂ ಮಾಕ್ಸ್ ಫಾರ್ ದ ಹಂಗ್ರಿ ಫೌಡೇಶನ್ ವತಿಯಿಂದ ಜಿಲ್ಲಾ ಆಸ್ಪತ್ರೆ ಉಡುಪಿಯಲ್ಲಿ 65 ಬಡ ರೋಗಿಗಳಿಗೆ ಆಹಾರ ಕಿಟ್ ಗಳನ್ನು ನೀಡಲಾಯಿತು.

2502

ಆಹಾರದ ಕೀಟಗಳಲ್ಲಿ 10 ಕೆಜಿ ಅಕ್ಕಿ ಹಾಗೂ ತೊಗರಿ ಬೆಳೆ ರಾಗಿ, ಕಡಲೆ, ಹುರುಳಿ ಕಾಳು, ಅವಲಕ್ಕಿ, ರವೆ, ಗೋದಿ, ಹೆಸರು ಕಾಳು ಇದ್ದವು. ಮಕ್ಕಳಿಗೆ ನೋಟ್ ಬುಕ್ ಸಹ ವಿತರಣೆ ಮಾಡಲಾಯಿತು.
ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ ಅವರು ಈ ವೇಳೆ ಮಾತನಾಡಿ, ಈ ತರಹದ ‌ಕಾರ್ಯಗಳಿಂದ ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ಬಹಳಷ್ಟು ಉಪಯೋಗ ಆಗುತ್ತೆ. ದಾನಗಳಲಿ ಶೇಷ್ಠ, ರಕ್ತದಾನ ಅಂತ ಹೇಳುತ್ತಾರೆ. ಅದೇ ರೀತಿ ಒಬ್ಬರಿಗೆ ಆಹಾರ ನೀಡುವುದು ಸಹ ಅತ್ಯಂತ ಮಾಹಾದಾನ‌ ಎಂದು ಹೇಳಿದರು.

ಮಾಕ್ಸ್ ಸಂಸ್ಥೆಯ ಸಂಚಾಲಕ ನಿಧಿ ಅವರು ಮಾತಾನಾಡಿ, ಜಿಲ್ಲಾ ಸರ್ಜನ್ ಡಾ. ಅಶೋಕ್ ಅವರ ಮನವಿಯಂತೆ ನಾವು ಈಗಾಗಲೇ ಕ್ಯಾನ್ಸರ್ ರೋಗಿಗಳಿಗೆ ಹಾಗೂ ಕ್ಷಯ ರೋಗಿಗಳಿಗೆ ಈ ಹಿಂದೆ ಆಹಾರ ಕಿಟ್ ವಿತರಿಸಿದ್ದೇವೆ. ಈ ಕಾರ್ಯಕ್ರಮವು ಸರ್ಜನ್ ಸಹಕಾರ ಮತ್ತೆ ಕೋರಿಕೆಯತೆ ನಾವು 65 ಬಡ ರೋಗಿಗಳಿಗೆ ಮಾಕ್ಸ್ ಸಂಸ್ಥಾಪಕ ಗ್ರ್ಯಾಂಡ್ ಮಾಸ್ಟರ್ ಚೋವಾ ಕೋಕ್ ಸುಯಿ ಅವರ ಸವಿನೆನಪಿಗಾಗಿ ನೀಡುತ್ತಿದೇವೆ ಎಂದರು.

ಎಆರ್ ಟಿ ಕೇಂದ್ರದ ವೈದ್ಯಕೀಯ ಅಧಿಕಾರಿ ಡಾ. ಶ್ರೀನಾಥ್ ಅವರು ಆಹಾರ ಕಿಟ್ ಗಳನ್ನು ನೀಡಿದ್ದಕ್ಕಾಗಿ ಎಲ್ಲ ಸಿಬ್ಬಂದಿ ಪರವಾಗಿ ಧನ್ಯವಾದ ಸಲ್ಲಿಸಿದರು. ಎಆರ್ ಟಿ ಕೇಂದ್ರದ ಎಲ್ಲ ಸಿಬ್ಬಂದಿ ಇದ್ದರು. ಕಾರ್ಯಕ್ರಮವನ್ನು ಮನು ಎಸ್ ಬಿ ಆಪ್ತಸಮಾಲೋಚಕರು ಅವರು ನಿರೂಪಿಸಿ, ವಂದಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma