ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

WhatsApp Image 2026 03 27 at 3.45.59 PM

ಬೆಂಗಳೂರು: ಇಲ್ಲಿನ ಬೆಂಗಳೂರಿನ ಯಲಹಂಕದಲ್ಲಿರುವ ವಿಸ್ತಾರವಾದ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ ಆರ್‌ ಪಿ ಎಫ್) ಆವರಣದಲ್ಲಿ ಮೂರು ಎಕರೆ ವಿಸ್ತೀರ್ಣದ ನೂತನ ಕೆರೆ ನಿರ್ಮಿಸಲಾಗಿದೆ. ಸಾಮಾಜಿಕ ಜವಾಬ್ದಾರಿ ಮತ್ತು ಸಾಂಸ್ಥಿಕ ಪಾಲುದಾರರ ನೇತೃತ್ವದ ಮೂರು ತಿಂಗಳ ಯೋಜನೆ ಈಗ ಸಂಪೂರ್ಣಗೊಂಡಿದೆ.

ಆಟೋಮೊಟಿವ್ ತಂತ್ರಜ್ಞಾನದಲ್ಲಿ, ಮುಂಚೂಣಿಯಲ್ಲಿರುವ ಟೆಕಿಯಾನ್ ಸಂಸ್ಥೆ ಮತ್ತು ಬ್ಲೂ ಡಾಟ್ ಪ್ರತಿಷ್ಠಾನದ ನೇತೃತ್ವದಲ್ಲಿ, ಹಾಗೂ ಇತರೆ ಕಂಪನಿಗಳ ಸಹಭಾಗಿತ್ವದೊಂದಿಗೆ, ಒಂದು ಕಾಲದಲ್ಲಿ ಕೆಸರು ಮತ್ತು ಮಣ್ಣಿನಿಂದ ಹೂಳು ತುಂಬಿದ್ದ ತೀವ್ರ ಹದಗೆಟ್ಟ ಪರಿಸ್ಥಿತಿಯ ಚಿಕ್ಕ ಕೆರೆಯನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಹಿಂದೆ ನಿರ್ಲಕ್ಷ್ಯಕ್ಕೊಳಗಾಗಿದ್ದ ಈ ಸ್ಥಳ ಈಗ ಆರಂಭದಿಂದಲೇ ಅಚ್ಚುಕಟ್ಟಾಗಿ ವಿನ್ಯಾಸಗೊಂಡ ಸಮೃದ್ಧ ಪರಿಸರ ವ್ಯವಸ್ಥೆ ಹೊಂದಿದೆ. “ಈ ಸಹಭಾಗಿತ್ವದ ಕಾರ್ಯದಿಂದ ನಮ್ಮ ಯಲಹಂಕ ಸಿ ಆರ್‌ ಪಿ ಎಫ್ ಆವರಣದಲ್ಲಿ ಮೂರು ಏಕರೆ ವ್ಯಾಪ್ತಿಯಲ್ಲಿ ಜೀವಂತ ಕೆರೆಯೊಂದು ನಿರ್ಮಾಣವಾಗಿದೆ, ಇದು ಜೈವಿಕ ವೈವಿಧ್ಯತೆ ಮತ್ತು ಸ್ಥಳೀಯ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಿದೆ ಎಂದು ಕೇಂದ್ರ ಮೀಸಲು ಪೊಲೀಸ್ ಪಡೆ ಉಪ ಮಹಾನಿರೀಕ್ಷಕ ಪದ್ಮಕುಮಾರ್ ಹೇಳಿದರು.

WhatsApp Image 2026 03 27 at 3.46.00 PM WhatsApp Image 2026 03 27 at 3.46.00 PM1 WhatsApp Image 2026 03 27 at 3.46.00 PM2

ಈ ಯೋಜನೆಯು ದೀರ್ಘಕಾಲದ ಸ್ಥಿರತೆಯ ವೈಜ್ಞಾನಿಕ ಕ್ರಮಗಳನ್ನು ಒಳಗೊಂಡಿದೆ, ಉದಾಹರಣೆಗೆ ನಿಶ್ಚಿತ ಆಳ ಮತ್ತು ನೀರಿನ ಸಾಮರ್ಥ್ಯ ಹೆಚ್ಚಿಸಲು ಕೆಸರನ್ನು ತೆಗೆಯುವುದು, ಮಳೆ ನೀರನ್ನು ಗರಿಷ್ಠವಾಗಿ ಸಂಗ್ರಹಿಸಲು ಕುಸಿತ ಪ್ರದೇಶದ ಸುಧಾರಣೆಗಳನ್ನು ಮಾಡುವುದು. ಪಕ್ಷಿಗಳು ಹಾಗೂ ವನ್ಯಜೀವಿಗಳಿಗೆ ಸಹಾಯ ಮಾಡಲು ಸ್ಥಳೀಯ ಸಸ್ಯಗಳನ್ನು ನೆಡಲಾಯಿತು. “ಪಕ್ಷಿಗಳು ಮತ್ತು ಪ್ರಾಣಿಗಳಿಗೆ ಹೊಸ ವಾಸಸ್ಥಾನವಾಗಲು ನಾವು ವೈಜ್ಞಾನಿಕವಾಗಿ ಈ ಕೆರೆಯನ್ನು ನಿರ್ಮಿಸಿದ್ದೇವೆ, ಪರಿಸರ ಸಮತೋಲನ ಕಾಪಾಡಲು ನಮ್ಮ ಪ್ರಾಥಮಿಕ ಗಮನ ಸಂಪೂರ್ಣ ಸ್ಥಳೀಯ ಸಸ್ಯಗಳ ಮೇಲೆ ಇರಿಸಿದೆ ಎಂದು ಬ್ಲೂಡಾಟ್‌ ಪ್ರತಿಷ್ಠಾನ ಸಂಸ್ಥಾಪಕ ಹಾಗೂ ನಿರ್ದೇಶಕ ಹರ್ಷ ತೇಜ್ ಹೇಳಿದರು.

ಈ ಯೋಜನೆ ಟೆಕಿಯಾನ್ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಯ ವಿಜಯನ್ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಬಿನು ಮೆಥ್ಯೂ ನೇತೃತ್ವದಲ್ಲಿ ನಡೆದ ಗಿಡ ನೆಡುವ ಕಾರ್ಯದಿಂದ ಆಚರಿಸಲಾಯಿತು. ಪರಿಸರಬದ್ಧತೆಯ ಭಾಗವಾಗಿ, ಟೆಕಿಯಾನ್ ತನ್ನ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ಮೂಲಕ ಪ್ರತಿ ವರ್ಷ ಒಂದೊಂದು ಕೆರೆಯನ್ನು ಜೀರ್ಣೋದ್ಧಾರ ಮಾಡುವ ಉದ್ದೇಶಿಸಿದೆ. 4 ವರ್ಷಗಳಲ್ಲಿ, ನಾವು ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಆರು ಕೆರೆಗಳನ್ನು ಜೀರ್ಣೋದ್ಧಾರ ಮಾಡಿದ್ದೇವೆ ಎಂದು ಟೆಕಿಯಾನ್‌ ಸಂಸ್ಥೆಯ ಹಿರಿಯ ನಿರ್ದೇಶಕ ಅರವಿಂದ ಗೌಡ ಹೇಳಿದರು.

ನೈಸರ್ಗಿಕ ಜಲಮೂಲಗಳು ತೀವ್ರ ಒತ್ತಡದಲ್ಲಿರುವ ನಗರ ಪ್ರದೇಶಗಳಲ್ಲಿ ಇಂತಹ ಯೋಜನೆಗಳು ಅತ್ಯಂತ ಮುಖ್ಯವೆಂದು ಗಮನಿಸಿದ ಸಿ ಆರ್‌ ಪಿ ಎಫ್ ಅಧಿಕಾರಿಗಳು ಈ ಕಾರ್ಯವನ್ನು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ಕೆರೆ ಮುಂಬರುವ ಮಳೆಗಾಲದಲ್ಲಿ ಹರಿಯುವ ನೀರನ್ನು ಸಂಗ್ರಹಿಸಲು ಈಗ ಸಜ್ಜಾಗಿದೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma