ಮಂಗಳೂರು: ಇಲ್ಲಿನ ತಲಪಾಡಿ ಶಾರದಾ ಪಿಯು ಕಾಲೇಜು ಮತ್ತೊಮ್ಮೆ ತನ್ನ ಶೈಕ್ಷಣಿಕ ಶ್ರೇಷ್ಠತೆ ಸಾಬೀತುಪಡಿಸಿದ್ದು, ಪ್ರತಿಷ್ಠಿತ ಜೆಇಇ ಮುಖ್ಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಬಿ ಪುರಾಣಿಕ ತಿಳಿಸಿದ್ದಾರೆ.
ಜತೆಗೆ, ಕಾಲೇಜಿನ 19 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸಡ್ 2026 ಕ್ಕೆ ಅರ್ಹತೆ ಪಡೆದಿದ್ದು, ಸಂಸ್ಥೆಯ ಗುಣಮಟ್ಟದ ಬೋಧನೆ ಹಾಗೂ ಸ್ಪರ್ಧಾತ್ಮಕ ತರಬೇತಿಗೆ ಇದು ಸಾಕ್ಷಿಯಾಗಿದೆ. ಜೆಇಇ ಅಡ್ವಾನ್ಸ್ ಡ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಾದ ಪಿ.ಎಸ್. ಆಯುಷ್, ಶ್ರಾವಲ್ ನಾಯಕ್ ಟಿ, ಆದರ್ಶ್, ಪ್ರಜ್ವಲ್ ಪಿ. ಕಾಮತ್,ಕೆ. ಪ್ರಥಮ್
, ಪಾರ್ವತಿ ಸುರೇಶ್, ವರ್ಣಿತಾ ವಿ, ಸೇವಂತಿ, ವಿಕಾಸ್ ಎನ್ ಯು, ಆರ್.ಕೆ. ಅದ್ವಿಕಾ, ಶ್ರೇಯಾ ಬಲ್ಲಾಲ್, ರಚನಾ ಆರ್, ವಿಜಯ್, ಅಜಯ್, ಶ್ರೀಜಲ್ ಮೋಹನ್ ದಾಸ್, ಎಚ್ ಸ್ಕಂದ ರಾವ್, ಆದರ್ಶ್ ಹೆಗ್ಡೆ, ದಿಶಾ ಜಿ, ವೈಭವಿ ಸಾಧನೆ ಮಾಡಿದ್ದಾರೆ.
ಈ ಸಾಧನೆಗೆ ಕಾಲೇಜಿನ ನಿರ್ವಹಣಾ ಮಂಡಳಿ, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.





