ನವದೆಹಲಿ: ಮಧ್ಯ ಏಷ್ಯಾದಲ್ಲಿ ಸಂಘರ್ಷ ಮುಂದುವರೆದಿರುವ ಹಿನ್ನೆಲೆ ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಂಘರ್ಷದ ದೀರ್ಘಾವಧಿಯ ಪರಿಣಾಮಗಳಿಗೆ ನಾವು ಸಿದ್ಧರಾಗಿರಬೇಕು ಎಂದು ಕರೆ ನೀಡಿದ್ದಾರೆ.
ಈ ಯುದ್ಧದಿಂದ ಜಗತ್ತಿನಲ್ಲಿ ಸೃಷ್ಟಿಯಾದ ಕಠಿಣ ಪರಿಸ್ಥಿತಿಗಳು ದೀರ್ಘಕಾಲದವರೆಗೆ ಶಾಶ್ವತ ಪರಿಣಾಮಗಳನ್ನು ಬೀರುವ ಸಾಧ್ಯತೆಯಿದೆ. ಕೋವಿಡ್ 19 ಸಾಂಕ್ರಾಮಿಕದ ಸಮಯದಲ್ಲಿ ನಾವು ಇಂತಹ ಅನೇಕ ಸವಾಲುಗಳನ್ನು ಎದುರಿಸಿದ್ದೇವೆ. ಈಗ ನಾವು ಅವುಗಳನ್ನು ಮತ್ತೆ ಎದುರಿಸಲು ಸಿದ್ಧರಾಗಿರಬೇಕು. ನಾವು ಪ್ರತಿಯೊಂದು ಸವಾಲನ್ನು ತಾಳ್ಮೆ, ಸಂಯಮ ಮತ್ತು ಶಾಂತಿಯಿಂದ ಎದುರಿಸಬೇಕಾಗಿದೆ, ಇದು ನಮ್ಮ ಗುರುತು, ಇದು ನಮ್ಮ ಶಕ್ತಿ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.





