ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಲಶೋತ್ಸವ ಸಂಭ್ರಮ: ಸೂರಜ್ ರಾಘವನ್

0301

ಮಂಗಳೂರು: ಅತ್ತಾವರ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಇದೇ 19 ರಿಂದ 23 ರವರೆಗೆ ಪ್ರತಿಷ್ಠಾ ಬ್ರಹ್ಮಲಶೋತ್ಸವ ಸಂಭ್ರಮ ನಡೆಯಲಿದೆ ಎಂದು ಅಯ್ಯಪ್ಪ ಸ್ವಾಮಿ ಭಕ್ತ ಸಮಿತಿ ಅಧ್ಯಕ್ಷ ಸೂರಜ್ ರಾಘವನ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪುರಾಣ ಪ್ರಸಿದ್ದಿ ಪಡೆದಿರುವ ಈ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಸುಮಾರು 2.50 ಕೋಟಿಗೂ ಅಧಿಕ ವೆಚ್ಚದಲ್ಲಿ ದೇವಸ್ಥಾನ ಅಭಿವೃದ್ಧಿ ಕಾರ್ಯಗಳು ನಡೆಸಲಾಗಿದೆ. ಮೈದಾನದಲ್ಲಿ ದೇವರ ಭಾವಚಿತ್ರ ಇಟ್ಟು ಪೂಜೆ ನಡೆಸಲಾಗುತ್ತಿತ್ತು. ಪ್ರಸ್ತುತ ಇರುವ ಗುಡಿಯ ದುರಸ್ತಿ ಕಾರ್ಯ ನಡೆದು ನೂತನ ಅಯ್ಯಪ್ಪ ಸ್ವಾಮಿ ದೇವಾಲಯ ನಿರ್ಮಾಣಗೊಳ್ಳಲಿದೆ ಎಂದರು.

ಅಯ್ಯಪ್ಪ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಕ್ಷಿತಿ ಮಂಗ್ಳೂರು ಅವರು ಮಾತನಾಡಿ, ಬ್ರಹ್ಮಕಲಶೋತ್ಸವದ ಭಾಗವಾಗಿ ಹೊರೆಕಾಣಿಕೆ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಅಯ್ಯಪ್ಪ ಭಕ್ತ ಸಮಿತಿ ಕಾರ್ಯಾಧ್ಯಕ್ಷ ಗೋಕುಲ್ ದಾಸ್ ಅವರು ಮಾತನಾಡಿ, ಸಾವಿರಾರು ಮಾಲಾಧಾರಿಗಳು ಈ ಕ್ಷೇತ್ರದಲ್ಲಿ ಮಾಲೆ ಹಾಕಿ ಶಬರಿಮಲೆ ಯಾತ್ರೆ ಮಾಡಿದ್ದು, ವಿಶೇಷವಾಗಿ ಈ ಕಾರ್ಯಕ್ರಮಕ್ಕೆ ಪಂದಳ ರಾಜಾ ವಂಶಸ್ಥ ನಾರಾಯಣ ವರ್ಮಾ ತಾಂಬುರಾನ್ ಬರುವುದು ವಿಶೇಷ ಆಗಿದೆ ಎಂದರು.

ಅಯ್ಯಪ್ಪ ಭಕ್ತಿ ಸಮಿತಿ ಕಾರ್ಯಾಧ್ಯಕ್ಷ ಮುರಳೀಧರ್, ಅಯ್ಯಪ್ಪ ಸ್ವಾಮಿ ಬ್ರಹ್ಮ ಕಳಸ ಸಮಿತಿ ಅಧ್ಯಕ್ಷ ರಾಜರತ್ನ ಸನಿಲ್ , ಸ್ವಾಗತ ಸಮಿತಿಯ ಗೌರವ ಕಾರ್ಯದರ್ಶಿ ಜನಾರ್ದನ್ ಅತ್ತಾವರ, ಅಯ್ಯಪ್ಪ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಎ. ಇದ್ದರು.
ಡಾ. ಮಾಲತಿ ಶೆಟ್ಟಿ ಮಾಣೂರು ನಿರೂಪಿಸಿ , ಸ್ವಾಗತಿಸಿ, ವಂದಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma