ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮುಂಬೈ ಇಂಡಿಯನ್ ತಂಡದ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು.
ಪ್ರಭ್ಸಿಮ್ರನ್ ಸಿಂಗ್ ಅವರು 39 ಎಸೆತಗಳಲ್ಲಿ 80 ರನ್ ಕಲೆ ಹಾಕಿದರು. ಶ್ರೇಯಸ್ ಅಯ್ಯರ್ 66 ರನ್ ಪೇರಿಸಿ ತಂಡದ ಗೆಲುವಿಗೆ ನಿರ್ಣಾಯಕ ಪಾತ್ರ ವಹಿಸಿದರು. ಏಳು ವಿಕೆಟ್ ಗಳ ಅಂತರದಿಂದ ಮುಂಬೈ ಇಂಡಿಯನ್ ತಂಡವು ಸೋಲು ಕಂಡಿತು.
196 ರನ್ ಗುರಿ ಪಡೆದಿದ್ದ ಪಂಜಾಬ್ ತಂಡವು 16.3 ಓವರ್ ಗಳಲ್ಲಿ ಮೂರು ವಿಕೆಟ್ ಗಳ ನಷ್ಟಕ್ಕೆ 198 ರನ್ ಗಳಿಸಿತು. ಐದನೇ ಪಂದ್ಯದಲ್ಲಿ ನಾಲ್ಕು ತಂಡಗಳಲ್ಲಿ ಗೆಲುವು ದಾಖಲಿಸಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ. ಮುಂಬೈ ತಂಡವು ಸತತ ನಾಲ್ಕನೇ ಸೋಲಿನಿಂದ ಲಯ ಕಳೆದುಕೊಂಡಿದೆ.





