ಬೆಂಗಳೂರು: ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಆಗಿದ್ದು, ಶೇ 94.10 ರಷ್ಟು ಫಲಿತಾಂಶ ದಾಖಲೆ ಆಗಿದೆ. ಈ ಬಾರಿ ಕೂಡ ದಕ್ಷಿಣ ಕನ್ನಡ ಜಿಲ್ಲೆ ರಾಜ್ಯ ಮಟ್ಟದಲ್ಲಿಯೇ ಫಸ್ಟ್, ಉಡುಪಿ ಜಿಲ್ಲೆಗೆ ಎರಡನೇ ಸ್ಥಾನ, ಉತ್ತರ ಕನ್ನಡ ಜಿಲ್ಲೆ ಮೂರನೇ ಸ್ಥಾನ ಗಳಿಸಿದೆ. ಕರಾವಳಿ ಜಿಲ್ಲೆಗಳು ಫಲಿತಾಂಶದಲ್ಲಿ ಮತ್ತೆ ಪ್ರಾಭಲ್ಯ ಮೆರೆದಿವೆ.
ಶೇ 98.40 ರಷ್ಟು ದಕ್ಷಿಣ ಕನ್ನಡ ಜಿಲ್ಲೆ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ 98.18 ಉಡುಪಿ ಹಾಗೂ ಉತ್ತರ ಕನ್ನಡ ಶೇ 98.09 ರಷ್ಟು ಫಲಿತಾಂಶ ದಾಖಲಿಸಿವೆ. ಶೇ 85. 06 ರಷ್ಟು ಫಲಿತಾಂಶ ದಾಖಲಿಸಿರುವ ಕಲಬುರಗಿ ಜಿಲ್ಲೆ ಕೊನೆ ಸ್ಥಾನದಲ್ಲಿದೆ ಎಂದು ಮಂಡಳಿಯ ಪ್ರಕಟಣೆ ತಿಳಿಸಿದೆ.
ವಿದ್ಯಾರ್ಥಿಗಳು ಫಲಿತಾಂಶವನ್ನು karresults.nic.in ನಲ್ಲಿ ಅಥವಾ https://karresults.nic.in Karnataka One Mobile App ಮೂಲಕ ಪಡೆಯಬಹುದು. ಜತೆಗೆ ವಿದ್ಯಾರ್ಥಿಗಳ ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗೆ ವಾಟ್ಸ್ ಆ್ಯಪ್/ಎಸ್ ಎಂಎಸ್ ಮೂಲಕ ಫಲಿತಾಂಶದ ಮಾಹಿತಿ ರವಾನಿಸಲಾಗಿದೆ ಎಂದು ತಿಳಿಸಿದೆ.
ಈ ವರ್ಷ ಪ್ರಥಮ ಬಾರಿ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯನ್ನು ಡಿಜಿಲಾಕರ್ ನಲ್ಲೂ ಅಪ್ ಲೋಡ್ ಮಾಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿಯನ್ನು https://www.digilocker.gov.in ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಮಾರ್ಚ್ 18ರಿಂದ ಏಪ್ರಿಲ್ 2 ರವರೆಗೆ ರಾಜ್ಯದಾದ್ಯಂತ 2870 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಒಟ್ಟು 8,66,046 ನೋಂದಣಿ ಮಾಡಿಕೊಂಡಿದ್ದರು. 8,56,516 ಮಂದಿ ಪರೀಕ್ಷೆ ಬರೆದಿದ್ದರು.
ಜಿಲ್ಲಾವಾರು ಫಲಿತಾಂಶ
ದಕ್ಷಿಣ ಕನ್ನಡ ಜಿಲ್ಲೆ- 98.40
ಉಡುಪಿ – 98.18
ಉತ್ತರ ಕನ್ನಡ- 98.09
ಹಾಸನ- 97.51
ಮಂಡ್ಯ- 97.45
ಶಿರಸಿ- 97.21
ಹಾವೇರಿ- 96.87
ಕೊಡಗು- 96.70
ಶಿವಮೊಗ್ಗ- 96.56
ವಿಜಯನಗರ- 96.39
ಬೆಂಗಳೂರು ಗ್ರಾಮಾಂತರ – 95.84
ಧಾರವಾಡ – 95.59
ಕೋಲಾರ- 95.50
ಬಾಗಲಕೋಟೆ- 95.42
ಬೆಂಗಳೂರು ಉತ್ತರ- 95.34
ಗದಗ- 95.24
ಚಿಕ್ಕಮಗಳೂರು- 94.99
ಬೆಳಗಾವಿ – 94.75
ದಾವಣಗೆರೆ- 94.64
ಮೈಸೂರು- 94.50
ರಾಯಚೂರು- 94.41
ವಿಜಯಪುರ- 94.17
ಚಿಕ್ಕೋಡಿ- 94.09
ಬಳ್ಳಾರಿ- 93.36
ಕೊಪ್ಪಳ- 93.10
ರಾಮನಗರ- 92.83
ಚಿತ್ರದುರ್ಗ- 92.25
ಬೀದರ್- 92.18
ತುಮಕೂರು- 92.04
ಚಾಮರಾಜನಗರ- 91.89
ಯಾದಗಿರಿ- 91.89
ಬೆಂಗಳೂರು ದಕ್ಷಿಣ- 91.65
ಚಿಕ್ಕಬಳ್ಳಾಪುರ- 90.88
ಮಧುಗಿರಿ- 90.26
ಕಲಬುರಗಿ-85.06





