7 ರಂದು ಮಂಗಳೂರಿನಲ್ಲಿ ದೈವಜ್ಞ ಗುರುವಂದನಾ ಮಹೋತ್ಸವ: ವಿನೋದ್ ಕುಮಾರ್ ಶೇಟ್

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸೋದೆ ವಾದಿರಾಜ ಮಠದ ಪ್ರಮುಖ ಶಿಷ್ಯ ಸಮುದಾಯದ ದೈವಜ್ಞ ಬ್ರಾಹ್ಮಣ ಶಿಷ್ಯ ವೃಂದದ ವತಿಯಿಂದ ಇದೇ 7 ರಂದು ಮಂಗಳೂರಿನಲ್ಲಿ ದೈವಜ್ಞ ಗುರುವಂದನಾ ಮಹೋತ್ಸವವನ್ನು ಶರವು ಮಹಾಗಣಪತಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೋದೆ ವಾದಿರಾಜ ಮಠದ ದೈವಜ್ಞ ಬ್ರಾಹ್ಮಣ ಶಿಷ್ಯ ವೃಂದದ ಸಮಿತಿ ಕಾರ್ಯದರ್ಶಿ ಎಸ್. ವಿನೋದ್ ಕುಮಾರ್ ಶೇಟ್ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೋದೆ ಮಠಾಧೀಶ ವಿಶ್ವವಲ್ಲಭತೀರ್ಥ ಶ್ರೀ ಪಾದರಿಗೆ ಗುರುವಂದನಾ’ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಧ್ಯಾಹ್ನ 3 ಗಂಟೆಯಿಂದ ಡೊಂಗರಕೇರಿ ಕೆನರಾ ಹೈಸ್ಕೂಲ್ ವೃತ್ತದಿಂದ ಶರವು ಮಹಾಗಣಪತಿ ದೇವಸ್ಥಾನದವರೆಗೆ ವೈಭವದ ಶೋಭಾಯಾತ್ರೆ ಜರುಗಲಿದೆ. ಶೋಭಾಯಾತ್ರೆ ಡೊಂಗರಕೇರಿ ವೆಂಕಟರಮಣ ದೇವಸ್ಥಾನ, ನ್ಯೂ ಚಿತ್ರಾ ಟಾಕೀಸ್ ರಸ್ತೆ, ಉಮಾಮಹೇಶ್ವರೀ ದೇವಸ್ಥಾನ ಮಾರ್ಗವಾಗಿ ಶರವು ಮಹಾಗಣಪತಿ ದೇವಸ್ಥಾನಕ್ಕೆ ತಲುಪಲಿದೆ ಎಂದರು.

ಸಂಜೆ 6 ಗಂಟೆಗೆ ಭೂತರಾಜರ ಪೂಜೆ, ನಂತರ ವಿಶ್ವವಲ್ಲಭತೀರ್ಥ ಶ್ರೀಪಾದರಿಂದ ಆಶೀರ್ವಚನ ನಡೆಯಲಿದೆ. ಪಾದಪೂಜೆ ಸಮರ್ಪಣೆ ಕಾರ್ಯಕ್ರಮಮದಲ್ಲಿ ಸಮಾಜದ ಅನೇಕ ಗಣ್ಯರು, ಶಿಷ್ಟ ಭಕ್ತರು, ನಾಗರಿಕರು ಪಾಲ್ಗೊಳ್ಳಲಿದ್ದಾರೆ. 8. 30 ರಿಂದ ಪ್ರಸಾದ, ಅನ್ನಸಂತರ್ಪಣೆ ಜರುಗಲಿದೆ ಎಂದರು.

ಸೋದೆ ವಾದಿರಾಜ ಮಠದ ದೈವಜ್ಞ ಬ್ರಾಹ್ಮಣ ಶಿಷ್ಯ ವೃಂದದ ಸಮಿತಿಯ ಕಾರ್ಯನಿರ್ವಾಹಕ ಎಂ. ಪ್ರಶಾಂತ್ ಶೇಟ್ ಅವರು ಮಾತನಾಡಿ, ಭಾವಿಸಮೀರ ವಾದಿರಾಜ ಗುರುಸಾರ್ವಭೌಮ ಅನುಗ್ರಹಿತ ದೈವಜ್ಞ ಬ್ರಾಹ್ಮಣರು ಸಂಪನ್ನ ವೈದಿಕ ಪರಂಪರೆಯಲ್ಲಿ ಬಂದಿರುವ ದೈವಜ್ಞ ಬ್ರಾಹ್ಮಣ ಸಮುದಾಯದ ಸಾತ್ವಿಕ ಸದ್ಬಕ್ತ ಸಮುದಾಯ ಆಗಿದೆ. ಋಗ್ವೇದ ಕಾಲದ ವೈದಿಕ ಬ್ರಾಹ್ಮಣರಾದ ಸಮುದಾಯದ ಮಂದಿ ಜ್ಯೋತಿಷ್ಯ ಶಾಸ್ತ್ರ, ಸ್ವರ್ಣ ರಜತ ಸಾಮಗ್ರಿಗಳನ್ನು ಸುದ್ದೀಕರೀಸಿ ಯಜ್ಞಗಳಿಗೆ ಹವಿಸ್ ರೂಪದಲ್ಲಿ ಸಮರ್ಪಿಸುವ ಪರಿಣತರಾಗಿದ್ದರು ಎಂದರು.

ಧರ್ಮನಿಷ್ಠ ದೈವಜ್ಞ ಬ್ರಾಹ್ಮಣ ಸಮಾಜವನ್ನು ಉದ್ದರಿಸುವುದಕ್ಕಾಗಿ ವಿದ್ಯೆಯ ಅದೇವತೆಯಾದ ಹಯಗ್ರಿವ್ ದೇವರು ಸಾತ್ವಿಕ ಬ್ರಾಹ್ಮಣ ಸ್ವರ್ಣಕಾರನೊಬ್ಬನ ಮನೆಯಲ್ಲಿ ವಿಗ್ರಹ ರೂಪದಲ್ಲಿ ಅವತರಿಸಿ ತಮ್ಮ ಪ್ರಿಯ ಉಪಾಸಕರಾದ ಭಾವಿಸಮೀರ ವಾದಿರಾಜ ಗುರುಸಾರ್ವಭೌಮರಿಗೆ ಸ್ವಪ್ನದಲ್ಲಿ ಒಲಿದು ಅವರ ಮೂಲಕ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜಕ್ಕೆ ಮಾಧ್ವ ವೈಷ್ಣವ ದೀಕ್ಷೆಯನ್ನು ನೀಡಿ ಮಠದ ಮುಖ್ಯಸ್ಥರನ್ನಾಗಿ ಮಾಡಿದ್ದರು. ಅಂದಿನಿಂದ ಸಮಾಜದ ಹಯಗ್ರೀವ ದೇವರ, ವಾದಿರಾಜರ, ಭೂತರಾಜರ ಆರಾಧನೆಯನ್ನು ಮಾಡುತ್ತಾ ಬರುತ್ತಿದ್ದಾರೆ ಎಂದರು.

ಹಿನ್ನೆಲೆಯಲ್ಲಿ ಸಮಾಜ ವಾದಿರಾಜರ ಆರಾಧನೆ ಮತ್ತು ಸಂಸ್ಮರಣೆಯ ಸಲುವಾಗಿ ಪೀಠಾಧೀಶ ವಿಶ್ವವಲ್ಲಭತೀರ್ಥ ಶ್ರೀ ಪಾದರಿಗೆ ಜಿಲ್ಲೆಯ ಸಮಸ್ತ ದೈವಜ್ಞ ಬ್ರಾಹ್ಮಣ ಸಮಾಜ ಬಾಂಧವರಿಂದ ಕನಕಾಭೀಷೇಕ, ಪುಷ್ಪಾಭಿಷೇಕ ಮೂಲಕ ಭಕ್ತಿ ಗೌರವದ ಸಮರ್ಪಣೆ ಮಾಡಲಾಗುತ್ತದೆ ಎಂದರು.

ಅಧ್ಯಕ್ಷ ರವೀಂದ್ರ ಶೇಟ್, ಜತೆ ಕಾರ್ಯದರ್ಶಿ ಅನಿಲ್‌ ಸದಾನಂದ ಶೇಟ್, ವಿಶ್ವೇಶ್ವರ ಪೇಜಾವರ, ಕೋಶಾಧಿಕಾರಿ ಚಂದ್ರಕಾಂತ್ ಸಾನು, ಗಣೇಶ್ ಆರ್ ಶೇಟ್ , ಜತೆ ಕಾರ್ಯನಿರ್ವಾಹಕ ಎಂ, ನಿಶಾಂತ್ ಶೇಟ್, ಕೆ. ಧೀರಜ್ ಶೇಟ್ ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *