ಕಾರವಾರ: ರಾಜ್ಯದ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ಮೆಟ್ರಿಕ್ ಟನ್ ಗೆ ರೂಪಾಯಿ 50 ರಂತೆ ಪ್ರೋತ್ಸಾಹ ಧನವನ್ನು ನೀಡಲು ಹಾಗೂ ನಿಗದಿ ಪಡಿಸಿದ ಕಾರ್ಖಾನೆಯವರು ರೈತರಿಗೆ ಪ್ರತಿ ಮೆಟ್ರಿಕ್ ಟನ್ಗೆ ರೂ.50 ರಂತೆ ಹೆಚ್ಚುವರಿ ಒಟ್ಟು ರೂಪಾಯಿ 100 ರಂತೆ ಮೊತ್ತವನ್ನು ಪಾವತಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಗೆ ಆಯುಕ್ತರು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರಾಜ್ಯದ ರೈತರಿಗೆ ಫೆ. 15 ರೊಳಗೆ ಅರೆದಿರುವ ಕಬ್ಬಿನ ಪ್ರಮಾಣಕ್ಕೆ ಉತ್ತರ ಕನ್ನಡ ಜಿಲ್ಲೆಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ನೇರವಾಗಿ ಪಾವತಿಸುವಂತೆ ರೂ. 5,57,39,531 ಹಾಗೂ ಫೆ.15 ರ ನಂತರ ಅವಧಿಗೆ ಅರೆದಿರುವ ಕಬ್ಬಿನ ಪ್ರಮಾಣಕ್ಕೆ ರೂ 59055 ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಅವರು ಅರೆದಿರುವ ಒಟ್ಟು 11,15,971.72 ಮೆಟ್ರಿಕ್ ಟನ್ಗೆ ಒಟ್ಟು 14,082 ರಾಜ್ಯದ ರೈತರಿಗೆ ಪ್ರತಿ ಮೆಟ್ರಿಕ್ ಟನ್ ಗೆ ರೂ.50 ರಂತೆ ಒಟ್ಟು ರೂ.5,57,98,586 ಗಳನ್ನು ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಬಿಡುಗಡೆ ಮಾಡಲಾಗಿದೆ. ಸರ್ಕಾರದ ಆದೇಶದಂತೆ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯು ಪ್ರತಿ ಮೆಟ್ರಿಕ್ ಟನ್ ಗೆ ರೂ.50 ರಂತೆ ಸರ್ಕಾರದಿಂದ ಬಿಡುಗಡೆಯಾದ ರೂ 5,57,98,586 ಗಳನ್ನು ಹಾಗೂ ಕಾರ್ಖಾನೆಯಿಂದ ಪಾವತಿಸಬೇಕಾದ ಪ್ರತಿ ಟನ್ಗೆ ರೂ.50 ರಂತೆ ರೂ 5,57,98,586 ಹಣವನ್ನು ಎರಡನ್ನು ಸೇರಿಸಿ 14082 ರೈತರಿಗೆ ಪ್ರತಿ ಮೆಟ್ರಿಕ್ ಟನ್ ಗೆ ರೂ 100 ರಂತೆ ರೂ.11,15,97,172 ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ ಎಂದು ಇಐಡಿ ಸಕ್ಕರೆ ಕಾರ್ಖಾನೆ ಅವರು ವರದಿ ಮಾಡಿದ್ದಾರೆ. ಆದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಇ ಐ ಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರು ಹಣ ಪಾವತಿ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.





