ಸಿರಸಿ: ಇಲ್ಲಿನ ನಗರಸಭೆಯ ನೂತನ ಆಡಳಿತಾಧಿಕಾರಿ ಆಗಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ನಗರ ಸಭೆಯ ಹಿಂದಿನ ಆಡಳಿತ ಸಮಿತಿಯ ಅವಧಿ ಪೂರ್ಣಗೊಂಡ ಹಿನ್ನೆಲೆ, ಸರ್ಕಾರದ ಆದೇಶದಂತೆ ಮಾರ್ಚ್ 23 ರಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯ ಅವರು ಸಿರಸಿ ನಗರಸಭೆಯ ಆಡಳಿತ ಅಧಿಕಾರವನ್ನು ವಹಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಮುಂದಿನ ಅವಧಿಯವರೆಗೆ ನಗರ ಸಭೆಯ ಆಡಳಿತ ಕಾರ್ಯಗಳನ್ನು ಜಿಲ್ಲಾಧಿಕಾರಿ ನಿರ್ವಹಿಸಲಿದ್ದಾರೆ.





