ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಅಗ್ಗದ ರಿಯಾಯಿತಿ ಚಿಕಿತ್ಸೆಗೆ ಇಂಡಿಯಾನಾ ಆರೋಗ್ಯ ಗೋಲ್ಡ್ , ಪ್ರಿವಿಲೇಜ್ ಸಿಲ್ವರ್: ಡಾ. ಅಲಿ ಕುಂಬ್ಳೆ

0601

ಮಂಗಳೂರು: ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಇದೇ 8 ರಿಂದ 14 ರವರೆಗೆ ರೂಪಾಯಿ 399 ಬೆಲೆಯ ಇಂಡಿಯಾನಾ ಆರೋಗ್ಯ ಗೋಲ್ಡ್ ಕಾರ್ಡ್ ಅನ್ನು ರೂಪಾಯಿ 99 ಕ್ಕೆ ಹಾಗೂ ಏ7 ರಂದು ಎಲ್ಲ ಹೊರರೋಗಿಗಳು ಮತ್ತು ಒಳರೋಗಿಗಳಿಗೆ ಇಂಡಿಯಾನಾ ಪ್ರಿವಿಲೇಜ್ ಸಿಲ್ವರ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುತ್ತದೆ ಎಂದರು ಇಂಡಿಯಾನಾ ಆಸ್ಪತ್ರೆಯ ಅಧ್ಯಕ್ಷ ಡಾ. ಅಲಿ ಕುಂಬ್ಳೆ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾರ್ಡ್ ಹಲವು ರಿಯಾಯಿತಿ ಸೌಲಭ್ಯಗಳನ್ನು ಹೊಂದಿದ್ದು ರೋಗಿಗಳು ಇನ್-ಹೌಸ್ ವೈದ್ಯರ ಸಮಾಲೋಚನೆ ಶುಲ್ಕಗಳು ಮತ್ತು ಒಪಿ ಕಾರ್ಯ ವಿಧಾನಗಳಲ್ಲಿ ಶೇ 20 ರಷ್ಟು ರಿಯಾಯಿತಿ, ಇನ್-ಹೌಸ್ ಪ್ರಯೋಗಾಲಯ ಮತ್ತು ರೇಡಿಯಾಲಜಿ ಸೇವೆಗಳಲ್ಲಿ ಶೇ 15 ರಷ್ಟು ರಿಯಾಯಿತಿ, ವೈದ್ಯರ ಶುಲ್ಕಗಳು, ಔಷಧಿಗಳು ವಸ್ತುಗಳನ್ನು ಹೊರತುಪಡಿಸಿ ಐಪಿ ಸೇವೆಗಳಲ್ಲಿ ಶೇ 10 ರಷ್ಟು ರಿಯಾಯಿತಿ ಮತ್ತು ಒಪಿ ಔಷಧಿ ಶುಲ್ಕಗಳಲ್ಲಿ ಶೇ 5 ರಷ್ಟು ರಿಯಾಯಿತಿ ಸೌಲಭ್ಯವು ಈ ಕಾರ್ಡ್ ಮೂಲಕ ನೀಡಲಾಗುತ್ತದೆ ಎಂದರು.
0602 0601

ಇಂಡಿಯಾನಾ ಆಸ್ಪತ್ರೆಯ ನಿರ್ದೇಶಕ ಡಾ. ನಿಹಾಲ್ ಅಲಿ ಕುಂಬ್ಳೆ ಅವರು ಮಾತನಾಡಿ, ಆರೋಗ್ಯದ ಕಾಳಜಿ ನಮ್ಮಲ್ಲಿ ಅಗತ್ಯವಾಗಿ ಬೇಕಾಗುತ್ತದೆ. ವಿಶ್ವ ಅರೋಗ್ಯ ಸಂಸ್ಥೆಯು ಇದನ್ನೇ ಪ್ರತಿಪಾದನೆ ಮಾಡಿದ್ದು, ಇಂಡಿಯಾನಾ ಆಸ್ಪತ್ರೆಯು ಅರೋಗ್ಯ ಸಮಾಜದ ನಿರ್ಮಾಣದಲ್ಲಿ ತನ್ನದೇ ಆದ ಕೊಡುಗೆ ನೀಡುತ್ತಿದೆ, ಇಂಡಿಯಾನಾ ಆಸ್ಪತ್ರೆ ಕೈಗೆಟುಕುವ ವೆಚ್ಚದಲ್ಲಿ ಆರೈಕೆ ಮತ್ತು ಗುಣಮಟ್ಟದ ಚಿಕಿತ್ಸೆ ಒದಗಿಸಲು ಬದ್ಧವಾಗಿದೆ ಎಂದು ತಿಳಿಸಿದರು.

ಆಸ್ಪತ್ರೆಯಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದೇ ಕಾರಣದಿಂದ ಹೊರ ರೋಗಿಗಳು ಮತ್ತು ಒಳ ರೋಗಿಗಳಿಗೆ ಇಂಡಿಯಾನಾ ಪ್ರಿವಿಲೇಜ್ ಸಿಲ್ವರ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುತ್ತದೆ. ಯಾವುದೇ ದಾಖಲೆಗಳು ಅಗತ್ಯವಿಲ್ಲ, ಈ ಕಾರ್ಡ್ ಮೂಲಕ ಹಲವಾರು ರಿಯಾಯಿತಿ ಪಡೆಯಬಹುದಾಗಿದೆ. ಇನ್ನು 399 ಬೆಲೆಯ ಗೋಲ್ಡ್ ಆರೋಗ್ಯ ಕಾರ್ಡ್ ಅನ್ನು ಅಗ್ಗದ ದರದಲ್ಲಿ 99 ರೂಪಾಯಿಗೆ ನೀಡಲಾಗುತ್ತದೆ ಎಂದರು.

ಆಸ್ಪತ್ರೆಯ ಫಿಸಿಶಿಯನ್ ಹಾಗೂ ಡಯಾಬಿಟಾಲಜಿಸ್ಟ್ ಡಾ. ಆದಿತ್ಯ ಭಾರದ್ವಾಜ್ ಅವರು ಮಾತನಾಡಿ, ಆಸ್ಪತ್ರೆಗೆ ಬರುವ ರೋಗಿಗಳು ಈ ಕಾರ್ಡ್ ಅನ್ನು ಪಡೆಯಬಹುದು. ಒಬ್ಬ ವ್ಯಕ್ತಿಗೆ ಮಾತ್ರ ಕಾರ್ಡ್ ಸೌಲಭ್ಯಗಳು ಅನ್ವಯ ಆಗುತ್ತವೆ. ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಈ ಸೌಲಭ್ಯ ಪಡೆಯಬಹುದು. ಬೇಕಾದಲ್ಲಿ ಪ್ರತ್ಯೇಕ ಕಾರ್ಡ್ ಅನ್ನು ಪಡೆಯಬೇಕಾಗುತ್ತದೆ. ಕಾರ್ಡ್ ಚಿಕ್ಕದಾದರೂ ಸೌಲಭ್ಯ ದೊಡ್ಡದು. ಬಡರೋಗಿಗಳಿಗಾಗಿ ಇಂಡಿಯಾನಾ ಪ್ರಿವಿಲೇಜ್ ಸಿಲ್ವರ್ ಕಾರ್ಡ್ ಸಹಕಾರಿ ಆಗಲಿದೆ. ಇಂಡಿಯಾನಾ ಆರೋಗ್ಯ ಗೋಲ್ಡ್ ಕಾರ್ಡ್ ಹಾಗೂ ಇಂಡಿಯಾನಾ ಪ್ರಿವಿಲೇಜ್ ಸಿಲ್ವರ್ ಕಾರ್ಡ್ ಗಳ ಸೌಲಭ್ಯಗಳಲ್ಲಿ ಯಾವುದೇ ವ್ಯತ್ಯಾಸ ಇಲ್ಲ, ಎರಡು ಕಾರ್ಡ್ ಗಳಿಗೆ ಒಂದೇ ರೀತಿಯ ಆರೋಗ್ಯ ಸೇವೆಗಳು ಆಸ್ಪತ್ರೆಯಲ್ಲಿ ಲಭ್ಯ ಆಗಲಿವೆ ಎಂದರು.
ಸಂದರ್ಭದಲ್ಲಿ ಗೋಲ್ಡ್ ಕಾರ್ಡ್‌ನ ಪೋಸ್ಟರ್ ಅನಾವರಣಗೊಳಿಸಲಾಯಿತು.

ಇಂಡಿಯಾನ ಆಸ್ಪತ್ರೆಯ ಸೀನಿಯರ್ ಕನ್ಸಲ್ಟೆಂಟ್ ಇಂಟರ್ವೆನ್ಷನಲ್ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಡಾ. ಅಪೂರ್ವ ಶ್ರೀಜಯದೇವ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇ.ವಿಜಯ್ ಚಂದ್ರ ಇದ್ದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma