ಮುಂಬೈ: ಭರ್ಜರಿ ಯಶಸ್ಸಿನತ್ತ ದಾಪುಗಾಲು ಹಾಕುತ್ತಿರುವುದರ ಜತೆಗೆ ಧುರಂಧರ್– 2 ಸಿನಿಮಾ, ಇದೀಗ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ರಣವೀರ್ ಸಿಂಗ್ ಅಭಿನಯದ ಸಿನಿಮಾ ಬಿಡುಗಡೆಗೊಂಡ ನಾಲ್ಕೇ ದಿನಗಳಲ್ಲಿ 450 ಕೋಟಿ ರೂಪಾಯಿ ದಾಖಲೆಯ ಗಳಿಕೆ ಕಂಡಿದ್ದು, ಬಾಲಿವುಡ್ ಸಿನಿಮಾ ರಂಗದಲ್ಲಿ ಹೊಸ ದಾಖಲೆಗಳತ್ತ ಹೆಜ್ಜೆ ಹಾಕಿದೆ.
ಮಾರ್ಚ್ 19 ರಂದು ತೆರೆಕಂಡಿರುವ ಚಿತ್ರಕ್ಕೆ ಪ್ರೀಮಿಯರ್ ಶೋಗಳಿಂದಲೇ ಭರ್ಜರಿ ಆರಂಭ ಸಿಕ್ಕಿತ್ತು. ಮೊದಲ ದಿನವೇ 43 ಕೋಟಿ ರೂಪಾಯಿ ಗಳಿಸಿದೆ. ನಂತರದ ದಿನಗಳಲ್ಲಿ 100 ಕೋಟಿಗೂ ಹೆಚ್ಚು ಸಂಗ್ರಹಿಸಿ ತನ್ನ ವೇಗವನ್ನು ಉಳಿಸಿಕೊಂಡಿದೆ. ಶುಕ್ರವಾರ ಮತ್ತು ಶನಿವಾರ ಉತ್ತಮ ದಾಖಲಯ ಗಳಿಕೆ ಕಂಡಿದ್ದು, ಭಾನುವಾರ ಮತ್ತಷ್ಟು ಹೆಚ್ಚಳ ಆಗಿದೆ.
ಚಿತ್ರಕ್ಕೆ ದೇಶದಾದ್ಯಂತ ಭಾರೀ ಪ್ರಮಾಣದ ಶೋಗಳು ಲಭ್ಯವಾಗಿದ್ದು, ಪ್ರತಿ ದಿನ ಸಾವಿರಾರು ಪ್ರದರ್ಶನಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಆರಂಭಿಕ ದಿನಗಳಿಂದಲೇ ಪ್ರೇಕ್ಷಕರನ್ನು ತನ್ನತ್ತ ಸೆಳೆದಿರುವುದು ಸಿನಿಮಾದ ಇನ್ನೊಂದು ವಿಶೇಷ





