ವಿ. ಕೆ. ಫಿಲ್ಮ್ಸ್ ವಿತರಣೆಯಲ್ಲಿ ಕಟ್ಟಾಳನ್; ಇದೇ 28 ಕ್ಕೆ ಚಿತ್ರ ಬಿಡುಗಡೆ

WhatsApp Image 2026 05 02 at 12.50.40 PM

ಬೆಂಗಳೂರು: ಮಾರ್ಕೋ ಚಿತ್ರದ ಯಶಸ್ಸಿನ ಬಳಿಕ, ಎ ಕ್ಯೂಬ್ಸ್ ಇಂಟರ್‌ನ್ಯಾಷನಲ್ ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರ ಕಟ್ಟಾಳನ್ ಅನ್ನು ಇದೇ 28 ರಂದು ಕರ್ನಾಟಕದಲ್ಲಿ ವಿ. ಕೆ. ಫಿಲ್ಮ್ಸ್ ವಿತರಣೆಯಲ್ಲಿ ಬಿಡುಗಡೆಗೆ ಮಾಡುತ್ತಿದೆ.

ಈಚೆಗೆ ಬಿಡುಗಡೆಯಾದ ಕನ್ನಡ ಟ್ರೈಲರ್ ತನ್ನ ಭವ್ಯತೆ, ದೃಶ್ಯ ಗುಣಮಟ್ಟ ಮತ್ತು ರೋಚಕ ಟೋನ್‌ನಿಂದ ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದು, ಕಟ್ಟಾಳನ್ ಅನ್ನು ಈ ಸೀಸನ್‌ನ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಸ್ಥಾಪಿಸಿದೆ.

ಶರೀಫ್ ಮುಹಮ್ಮದ್ ನಿರ್ಮಿಸಿರುವ ಈ ಚಿತ್ರದಲ್ಲಿ ಆ್ಯಂಟನಿ ವರ್ಗಿಸ್, ಸುನೀಲ್, ದುಶಾರಾ ವಿಜಯನ್, ಕಬೀರ್ ದುಹಾನ್ ಸಿಂಗ್ ಹಾಗೂ ಪಾರ್ಥ್ ತಿವಾರಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

WhatsApp Image 2026 05 02 at 12.57.52 PM WhatsApp Image 2026 05 02 at 12.57.53 PM

ಈ ಚಿತ್ರವನ್ನು ಪೌಲ್ ಜಾರ್ಜ್ ನಿರ್ದೇಶಿಸಿದ್ದು, ಸಂಗೀತವನ್ನು ರವಿ ಬಸ್ರೂರು ಸಂಯೋಜಿಸಿದ್ದಾರೆ. ಇದು ಚಿತ್ರದ ತೀವ್ರ ಕಥನಕ್ಕೆ ಶಕ್ತಿಶಾಲಿ ಸಂಗೀತಾನುಭವವನ್ನು ನೀಡುತ್ತದೆ.

ಎ ಕ್ಯೂಬ್ಸ್ ಎಂಟರ್ಟೈನ್ಮೆಂಟ್ಸ್ ವತಿಯಿಂದ ಪ್ರಸ್ತುತಪಡಿಸಲ್ಪಟ್ಟಿರುವ ಕಟ್ಟಾಳನ್, ಗಟ್ಟಿ ಕಥೆ ಹಾಗೂ ಉನ್ನತ ನಿರ್ಮಾಣ ಮೌಲ್ಯಗಳೊಂದಿಗೆ ಪ್ರೇಕ್ಷಕರಿಗೆ ಒಳ್ಳೆಯ ಸಿನೆಮಾ ಅನುಭವವನ್ನು ನೀಡಲು ಸಿದ್ಧವಾಗಿದೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma