ಮಂಗಳೂರು: ಇಲ್ಲಿ ತಡರಾತ್ರಿ ಬುಧವಾರ ಸುಮಾರು ಬೆಳಿಗ್ಗೆ 3.30 ಗಂಟೆಗೆ ಸುರಿದ ಭಾರಿ ಮಳೆ ಹಾಗೂ ಬೀಸಿದ ಬಿರುಗಾಳಿಯಿಂದಾಗಿ ಬೃಹತ್ ಅಶ್ವತ್ಥ ಮರವೊಂದರ ಗೆಲ್ಲು ಮುರಿದು ಬಿದ್ದ ಪರಿಣಾಮ ಎರಡು ಮನೆಗಳಿಗೆ ಹಾನಿ ಆಗಿದ್ದು, ಮೂರು ಬೈಕ್ ಗೆ ಹಾನಿ ಉಂಟಾಗಿದೆ.
ಬಿದ್ದ ಮರದ ಗೆಲ್ಲಿನ ಅಡಿಯಲ್ಲಿ ಸಿಕ್ಕು ಹಾಕಿಕೊಂಡಿದ್ದ ಎರಡು ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿವೆ. ಇದೇ ವೇಳೆ ಮರದ ಗೆಲ್ಲು ಬಿದ್ದ ಪರಿಣಾಮ ಎರಡು ಮನೆಗಳಿಗೆ ಭಾಗಶಃ ಹಾನಿ ಆಗಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ ಎಂದು ತಿಳಿದು ಬಂದಿದೆ.





