ಟಿವಿ9 ಎಜುಕೇಷನ್ ಎಕ್ಸ್‌ಪೋ 2026; ​ಕೆ.ಎಲ್. ಡೀಮ್ಡ್ ಟು ಬಿ ಯೂನಿವರ್ಸಿಟಿ ಪ್ರಸ್ತುತಿ

Spread the love

ಬೆಂಗಳೂರು: ​ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಲು ಇದೊಂದು ಸುವರ್ಣಾವಕಾಶ! ಒಂದೇ ವೇದಿಕೆಯಲ್ಲಿ ರಾಜ್ಯ ಹಾಗೂ ದೇಶದ ಅಗ್ರಗಣ್ಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ತಜ್ಞರಿಂದ ನಿಮಗೆ ಮಾಹಿತಿ ಸಿಗಲಿದೆ.
​ಇದಕ್ಕಿಂತ ಮುಖ್ಯವಾಗಿ, ಆಯಾ ಕಾಲೇಜುಗಳ ಪ್ರತಿನಿಧಿಗಳ ಜತೆಗೆ ನೇರವಾಗಿ ಸಂವಾದ ಮಾಡಿ, ವಿದ್ಯಾರ್ಥಿಗಳಿಗೆ ಅಗತ್ಯ ಇರುವ ಮಾಹಿತಿ ಪಡೆಯುವುದಲ್ಲದೇ, ಅವರು ಸೇರುವ ಕೋರ್ಸ್‌ಗಳು ಹಾಗೂ ಪ್ರವೇಶ ಪ್ರಕ್ರಿಯೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದೊಂದು ಸುವರ್ಣ ಅವಕಾಶ. ಈ ಎಕ್ಸ್ ಪೋ ಅನ್ನು ಸಚಿವ ಸಂತೋಷ್ ಲಾಡ್ ಹಾಗೂ ಖ್ಯಾತ ನಿರ್ದೇಶಕ ಜೋಗಿ ಪ್ರೇಮ್, ನಾಯಕಿ ನಟಿ ರೀಷ್ಮಾ ನಾಣಯ್ಯ ಅವರು ಉದ್ಘಾಟಿಸಿ, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶುಭ ಹಾರೈಸಿ, ಟಿವಿ 9 ಎಜುಕೇಷನ್ ಎಕ್ಸ್ ಪೋ 2026 ಗೆ ಶುಭ ಕೋರಿದರು.

ಏ. 10, 11 ಹಾಗೂ 12 ರಂದು ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ​ ತ್ರಿಪುರವಾಸಿನಿ, ಪ್ಯಾಲೇಸ್ ಗ್ರೌಂಡ್, ಬೆಂಗಳೂರಿನಲ್ಲಿ ಎಕ್ಸ್ ಪೋ ನಡೆಯಲಿದೆ. ​ಪ್ರವೇಶ ಉಚಿತ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *