ಕೆನರಾ ಕಾಲೇಜಿನಲ್ಲಿ ರಾಜ್ಯ ಮಟ್ಟದ ರಣನೀತಿ ಸಮ್ಮೇಳನಕ್ಕೆ ಚಾಲನೆ, ಡಿಜಿಟಲ್ ಯುಗದಲ್ಲಿ ಸಮ್ಮೇಳನ ಸಹಕಾರಿ: ಪ್ರಸನ್ನ ಶೆಣೈ

3002

ಮಂಗಳೂರು: ನಗರದ ಕೆನರಾ ಕಾಲೇಜಿನ (ಸ್ನಾಯತ್ತ) ವಾಣಿಜ್ಯ ಸ್ನಾತಕೋತ್ತರ ವಿಭಾಗದ ವತಿಯಿಂದ ವರ್ಚುವಲ್ ವಿಸ್ತಾಸ್ ಆಫ್ ಭಾರತ್ ಅನ್ ಲಾಕಿ೦ಗ್ ಇ೦ಡಿಯಾಸ್ ಕ್ರಿಯೇಟಿವ್ ಕ್ಯಾಪಿಟಲ್ ಥ್ರೋ ಡಿಜಿಟಲ್ ಟ್ವಿನ್ಸ್ ಸ್ಮಾರ್ಟ್ ಬಿಜಿ಼ನೆಸ್ ಸ್ಟ್ರಾಟಜಿ ಎಂಬ ವಿಷಯದ ಮೇಲೆ ರಾಜ್ಯ ಮಟ್ಟದ ಒಂದು ದಿನದ ಸಮ್ಮೇಳನ ಯಶಸ್ವಿಯಾಗಿ ನಡೆಯಿತು.

ಈ ಸಮ್ಮೇಳನದಲ್ಲಿ ವಿವಿಧ ಕಾಲೇಜುಗಳ ಯುಜಿ ಹಾಗೂ ಪಿಜಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾಲೇಜಿನ ಯುಜಿ ವಿದ್ಯಾರ್ಥಿಗಳಿಗಾಗಿ ಅಂತರ ತರಗತಿ ವಾಣಿಜ್ಯ ಮತ್ತು ನಿರ್ವಹಣಾ ಫೆಸ್ಟ್- ರಣನೀತಿ 2026 ಅನ್ನು ಆಯೋಜಿಸಲಾಯಿತು.

ಸ್ನಾತಕೋತ್ತರ ವಿಭಾಗದ ಸಂಯೋಜಕಿ ಸ್ವಾತಿ ನಾಯಕ್ ಅವರು ಕಾರ್ಯಕ್ರಮದ ಉದ್ದೇಶ ಮತ್ತು ರೂಪುರೇಷೆಗಳ ಕುರಿತು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಅವರು ಅಧ್ಯಕ್ಷೀಯ ಭಾಷಣದಲ್ಲಿ, ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡು ಬೆಳವಣಿಗೆ ಸಾಧಿಸಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಸಿಎ ಪ್ರಸನ್ನ ಶೆಣೈ, ಇಂದಿನ ಡಿಜಿಟಲ್ ಯುಗದಲ್ಲಿ ಸಮ್ಮೇಳನ ಅತ್ಯಂತ ಸಹಕಾರಿ ಆಗಿದೆ. ತಾಂತ್ರಿಕ ಅಧಿವೇಶನವನ್ನು ನಡೆಸಿ, ನಾವಿನ್ಯ, ಸ್ಮಾರ್ಟ್ ಆ್ಯಪ್‌ಗಳು ಹಾಗೂ ಆಧುನಿಕ ವ್ಯವಹಾರ ತಂತ್ರಗಳ ಕುರಿತು ವಿವರ ಮಾಹಿತಿಯನ್ನು ಹಂಚಿಕೊಂಡರು.

ಈ ಅಧಿವೇಶನವು ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಆಗಿತ್ತು. ಸಮ್ಮೇಳನದ ಅಂಗವಾಗಿ ನಡೆದ ಪ್ಯಾನೆಲ್ ಪೇಪರ್ ಪ್ರಸ್ತುತಿಗಳಲ್ಲಿ ವಿವಿಧ ಕಾಲೇಜುಗಳಿಂದ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಂದ ಒಟ್ಟು 35 ಸಂಶೋಧನಾ ಪ್ರಬಂಧಗಳು ಮಂಡಿಸಲ್ಪಟ್ಟವು. ಇವು ಸಮಕಾಲೀನ ವ್ಯವಹಾರ ಮತ್ತು ಡಿಜಿಟಲ್ ಪರಿವರ್ತನೆಗೆ ಸಂಬಂಧಿಸಿದ ವಿಭಿನ್ನ ವಿಷಯಗಳನ್ನು ಒಳಗೊಂಡಿದ್ದವು. ಅಂದು ನಡೆದ ರಣನೀತಿ 2026 ಫೆಸ್ಟ್ , ಪದವಿ ವಿದ್ಯಾರ್ಥಿಗಳಲ್ಲಿ ಕಾರ್ಯಾತ್ಮಕ ಕಲಿಕೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಅಳವಡಿಸಲು ಉತ್ತೇಜಿಸಿದವು.

ಸಮಾರೋಪದಲ್ಲಿ ಸಮ್ಮೇಳನದ ಸಂಯೋಜಕಿಯಾದ ಶ್ವೇತಾ ಪೈ ಎಂ. ಹಾಗೂ ಫೆಸ್ಟ್ ಸಂಯೋಜಕಿ ಸ್ನೇಹಾ ಪೈ ಅವರು ವಿವಿಧ ಸ್ಪರ್ಧೆಗಳ ವಿಜೇತರನ್ನು ಘೋಷಿಸಿದರು. ಸಮಾರೋಪದಲ್ಲಿ ಮುಖ್ಯ ಅತಿಥಿಗಳಾದ ಸಿಎ ವೃ೦ದಾ ಕೊನ್ನ‌ರ್, ಪ್ರೊಪ್ರೈಟರ್ ಕೊನ್ನರ್ ಅವರು ವಿದ್ಯಾರ್ಥಿಗಳಿಗೆ ಧನಾತ್ಮಕ ಮನೋಭಾವವನ್ನು ಅಳವಡಿಸಿಕೊಂಡು ಡಿಜಿಟಲ್ ಯುಗದ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಳ್ಳಲು ಪ್ರೇರೇಪಿಸಿದರು ಮತ್ತು ವಿಜೇತ ಸ್ಪರ್ಧಿಗಳಿಗೆ ಬಹುಮಾನಗಳನ್ನು ವಿತರಿಸಿದರು.

ಕಾಲೇಜಿನ ಸಂಚಾಲಕ ಸಿಎ ಎಂ. ಜಗನ್ನಾಥ ಕಾಮತ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ವಿಭಾಗದ ಶ್ರಮವನ್ನು ಶ್ಲಾಘಿಸಿ, ಇಂತಹ ಚಿಂತನಾತ್ಮಕ ಕಾರ್ಯಕ್ರಮಗಳನ್ನು ಮುಂದುವರೆಸಲು ಪ್ರೋತ್ಸಾಹಿಸಿದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma