ಮಂಗಳೂರು: ವಿಶ್ವ ಅಸ್ತಮಾ ದಿನದ ಅಂಗವಾಗಿ ಮಂಗಳೂರಿನ ಇಂಡಿಯಾನಾ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್ ಸ್ಟಿಟ್ಯೂಟ್ ನಲ್ಲಿ ಮೇ 4 ರಿಂದ ಮೇ 9 ರವರೆಗೆ ಉಚಿತ ಅಸ್ತಮಾ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಅಸ್ತಮಾ ಸಂಬಂಧಿತ ಕಾಯಿಲೆಗಳ ಗುರುತಿಸುವುದು ಮತ್ತು ಚಿಕಿತ್ಸೆಗಳನ್ನು ನೀಡಲಾಗುತ್ತದೆ ಎಂದು ಇಂಡಿಯಾನಾ ಹಾಸ್ಪಿಟಲ್ ಅಂಡ್ ಹಾರ್ಟ್ ಇನ್ ಸ್ಟಿಟ್ಯೂಟ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಕೀರ್ತನ್ ಗಣಪತಿ ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ವಯಸ್ಸಿನ ಜನರಿಗೆ ಸರಿಯಾದ ಚಿಕಿತ್ಸೆ ಮತ್ತು ತಪಾಸಣೆಗಾಗಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಮತ್ತು ರೋಗಿಗಳಿಗೆ ಅನುಕೂಲವಾಗುವಂತೆ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಶಿಬಿರವು ಮೇ 5ರಂದು ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಅಸ್ತಮಾ ತಪಾಸಣೆ ಚಿಕಿತ್ಸೆಯ ಸೇವೆ ನೀಡಲಾಗುತ್ತದೆ. ಚಿಕಿತ್ಸೆ ಶಿಬಿರದ ವೇಳೆ ಶ್ವಾಶಕೋಶ ತಜ್ಞರಿಂದ ಸಮಾಲೋಚನೆ ಸಂಪೂರ್ಣ ಉಚಿತ ಆಗಿರಲಿದೆ. ಇನ್ನು ಸ್ಪೈರೋಮೆಟ್ರಿ ಪರೀಕ್ಷೆಗೆ ಶೇ 50 ರಿಯಾಯಿತಿ ನೀಡಲಾಗುತ್ತದೆ. ಸ್ಪೈರೋಮೆಟ್ರಿ ಒಂದು ಮುಖ್ಯ ಪರೀಕ್ಷೆ ಆಗಿದ್ದು, ಅಸ್ತಮಾ ತೀವ್ರತೆ ಮತ್ತು ಪರಿಣಾಮಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಉಚಿತ ಚಿಕಿತ್ಸೆ ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರೂ ನೋಂದಣಿಗೆ ಈ ಮೊಬೈಲ್ 6361687385 ಸಂಖ್ಯೆಗೆ ಕರೆ ಮಾಡಬಹುದು ಎಂದರು.
ಉಸಿರಾಟ ತೊಂದರೆ ಇರುವವರು, ಕೆಮ್ಮು ಅಥವಾ ಅಸ್ತಮಾ ಇರುವವರು, ಮತ್ತು ಪುನ್ ಪುನ್ ಉಸಿರಾಟದ ಸಮಸ್ಯೆ ಅನುಭವಿಸುವವರು, ಧೂಮಪಾನಿಗಳು ಹಾಗೂ ಧೂಮಪಾನದ ಪರಿಣಾಮದಿಂದ ಉಂಟಾಗುವ ಸಮಸ್ಯೆಗಳನ್ನು ಹೊಂದಿರುವವರು ಈ ಉಚಿತ ಶಿಬಿರದಲ್ಲಿ ಪಾಳ್ಗೊಳ್ಳಬಹುದು. ಅಸ್ತಮಾ ಮತ್ತು ಅಲರ್ಜಿ ಸಂಬಂಧಿತ ಸಮಸ್ಯೆಗಳನ್ನು ಗುರುತಿಸಲು ಹಾಗೂ ಚಿಕಿತ್ಸೆಗಾಗಿ ವಿವಿಧ ಪರೀಕ್ಷೆಗಳು ಲಭ್ಯ ಇದ್ದು, ಫೋರ್ಸ್ಡ್ ಅಸಿಲೇಷನ್ ಟೆಕ್ನಿಕ್ , ಫ್ರ್ಯಾಕ್ಷನಲ್ ಎಕ್ಸ್‌ಹೇಲ್ಡ್ ನೈಟ್ರಿಕ್ ಆಕ್ಸೈಡ್ ಮತ್ತು ಸ್ಕಿನ್ ಪ್ರಿಕ್ ಟೆಸ್ಟ್ ಸೇರಿದಂತೆ ಹಲವು ಪರೀಕ್ಷೆಗಳು ನಡೆಸಲಾಗುತ್ತದೆ ಎಂದರು.





