ಮನೆಗಳ ಟೆರೇಸ್ ರಕ್ಷಣೆಗೆ ಸೂಕ್ತ ಉತ್ಪನ್ನ ಡ್ಯಾಂಪ್ ಪ್ರೂಫ್: ಅಮಿತ್ ಸಿಂಗಲ್

WhatsApp Image 2026 04 22 at 3.05.33 PM

ಮಂಗಳೂರು: ದಕ್ಷಿಣ ಭಾರತದ ಪ್ರತೀ ಮನೆಗಳ ಟೆರೇಸ್‌ ಗಳು ಕೂಡ ಸಂಭ್ರಮದ ತಾಣ ಆಗಿರುತ್ತವೆ. ಟೆರೇಸ್ ಗಳಿಗೆ ಸೋರಿಕೆ ಅಥವಾ ಶಾಖದಿಂದ ತೊಂದರೆ ಆಗದಂತೆ ಇರಲು ಏಷ್ಯನ್ ಪೇಂಟ್ಸ್ ಡ್ಯಾಂಪ್ ಪ್ರೂಫ್ ಉತ್ಪನ್ನ ನೆರವಾಗಲಿದೆ. ಈ ಕುರಿತು ವಿಶೇಷ ಅಭಿಯಾನ ಬಿಡುಗಡೆ ಆಗಿದೆ ಎಂದು ಏಷ್ಯನ್ ಪೇಂಟ್ಸ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಮಿತ್ ಸಿಂಗಲ್ ಹೇಳಿದರು.

ಏಷ್ಯನ್ ಪೇಂಟ್ಸ್ ಡ್ಯಾಂಪ್ ಪ್ರೂಫ್ ಉತ್ಪನ್ನದ ಕುರಿತ ವಿನೂತನ ಸೂಪರ್ ಸ್ಟಾರ್ ಅಭಿಯಾನ ಬಿಡುಗಡೆ ಮಾಡಿ ಅವರು ಮಾತನಾಡಿದರು.

ದಕ್ಷಿಣ ಭಾರತದ ಮನೆಗಳ ಟೆರೇಸ್‌ ಗಳು ದೈನಂದಿನ ಚಟುವಟಿಕೆ ಮತ್ತು ಸಂಭ್ರಮಾಚರಣೆಯ ತಾಣಗಳು. ಆದರೆ ಮಳೆಗಾಲದಲ್ಲಿನ ನೀರಿನ ಸೋರಿಕೆ ಮತ್ತು ಬೇಸಿಗೆಯ ಸುಡುವ ತಾಪಮಾನ ಈ ಸಂಭ್ರಮಕ್ಕೆ ಅಡ್ಡಿಪಡಿಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಏಷ್ಯನ್ ಪೇಂಟ್ಸ್ ಡ್ಯಾಂಪ್ ಪ್ರೂಫ್ ಉತ್ಪನ್ನ ತಂದಿದೆ. ಜೊತೆಗೆ ವಿಶೇಷ ಅಭಿಯಾನ ಕೂಡ ಅನಾವರಣ ಮಾಡಲಾಗಿದೆ ಎಂದರು.

ಈ ಅಭಿಯಾನ ಚಿತ್ರದಲ್ಲಿ ‘ರೌಡಿ ಬೇಬಿ’ ಹಾಡಿನ ಧಾಟಿಯನ್ನು ಬಳಸಿಕೊಳ್ಳಲಾಗಿದ್ದು, ವಾಟರ್‌ ಫ್ರೂಫಿಂಗ್‌ ನಂತಹ ತಾಂತ್ರಿಕ ವಿಷಯವನ್ನು ಜನರಿಗೆ ಸುಲಭವಾಗಿ ಮತ್ತು ಆಕರ್ಷಕವಾಗಿ ತಲುಪಿಸುವ ಪ್ರಯತ್ನ ಮಾಡಲಾಗಿದೆ. ದಕ್ಷಿಣದ ಸಿನಿಮಾಗಳಲ್ಲಿ ನಟರು ಹೇಗೆ ಶಕ್ತಿಯುತವಾಗಿ ಮಿಂಚುತ್ತಾರೋ, ಹಾಗೆಯೇ ‘ಡ್ಯಾಂಪ್ ಪ್ರೂಫ್’ ಉತ್ಪನ್ನವನ್ನು ಈ ಜಾಹೀರಾತಿನಲ್ಲಿ ‘ವಾಟರ್‌ ಫ್ರೂಫಿಂಗ್ ನ ಸೂಪರ್‌ ಸ್ಟಾರ್’ ಎಂದು ಬಿಂಬಿಸಲಾಗಿದೆ ಎಂದರು.

ಮನೆ ಮಾಲೀಕರ ಪ್ರಮುಖ ಎರಡು ಸಮಸ್ಯೆಗಳಿಗೆ ಈ ‘ಡ್ಯಾಂಪ್ ಪ್ರೂಫ್’ ರಾಮಬಾಣವಾಗಿ ಕೆಲಸ ಮಾಡಲಿದೆ. ಎಷ್ಟೇ ಸೋರಿಕೆಯಾಗುತ್ತಿದ್ದರೂ ಅದರ ವಿರುದ್ಧ ಇದು ಬಲವಾದ ರಕ್ಷಣೆ ನೀಡುತ್ತದೆ. ಜೊತೆಗೆ ಇದರ ಸುಧಾರಿತ ಹೀಟ್-ರಿಫ್ಲೆಕ್ಟಿವ್ ಕೋಟಿಂಗ್ ತಂತ್ರಜ್ಞಾನವು ಮನೆಯ ಮೇಲ್ಮೈ ತಾಪಮಾನವನ್ನು ಸುಮಾರು 10 ಡಿಗ್ರಿ ಸೆಲ್ಸಿಯಸ್‌ ವರೆಗೆ ಕಡಿಮೆ ಮಾಡುತ್ತದೆ. ಇದರಿಂದ ತೀವ್ರ ಬೇಸಿಗೆಯಲ್ಲೂ ಮನೆ ತಂಪಾಗಿರುತ್ತದೆ. ದಕ್ಷಿಣ ಭಾರತದ ಹವಾಮಾನ ವೈಪರೀತ್ಯಗಳನ್ನು ಎದುರಿಸಲು ಈ ಸೂಪರ್‌ ಸ್ಟಾರ್ ಈಗ ಮಾರುಕಟ್ಟೆಯಲ್ಲಿ ಸನ್ನದ್ಧವಾಗಿದೆ ಎಂದರು.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma