ಬೆಂಗಳೂರು: ಸುಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ಡಿಕನ್ಸ್ ಸ್ಟ್ರಕ್ಟ್ ತನ್ನ ಬ್ರಾಂಡ್ ಪಾರ್ಟ್ ನರ್ ಆಗಿ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಘೋಷಣೆ ಮಾಡಿದೆ.
ರವಿಚಂದರ್ ಅವರ ಇನ್ ಸ್ಟಾಗ್ರಾಂ ರೀಲ್ ನಲ್ಲಿ ಸ್ಕಿನ್ ಕೇರ್ ಡಿಕನ್ಸ್ ಸ್ಟ್ರಕ್ಟ್ ಇತ್ತು. ಇದನ್ನು ಅಭಿಮಾನಿಗಳು ಗಮನಿಸಿದರು. ಬಳಿಕ ಇದು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿತು. ಇಂಟರ್ ನೆಟ್ ನಲ್ಲಿ ಸೆನ್ಸೇಷನ್ ಆದ ವಿಷಯ ಈಗ ಪಾರ್ಟ್ ನರ್ ಷಿಪ್ ಗೆ ಎಡೆ ಮಾಡಿಕೊಟ್ಟಿದೆ.

ಈ ಬಗ್ಗೆ ಸಂಸ್ಥೆಯ ಸಿಇಒ ಮಾಲಿನಿ ಅಡಪುರೆಡ್ಡಿ ಅವರು ಮಾತನಾಡಿ, ಜನರು ಸಹಜವಾಗಿ ಸ್ಪಂದಿಸಿ ಬ್ರಾಂಡ್ ಅನ್ನು ನೋಡಿದಾಗ ಅದನ್ನು ಮುಂದುವರೆಸಿಕೊಂಡು ಹೋಗುವುದು ನಮಗೆ ಸರಿ ಅನಿಸಿತು. ಅನಿರುದ್ಧ್ ಅವರು ನಮ್ಮ ಬ್ರಾಂಡಿಗೆ ಸರಿ ಹೊಂದುತ್ತಾರೆ. ಹೀಗಾಗಿ ಇಂಟರ್ ನೆಟ್ ನಲ್ಲಿ ಉಂಟಾದ ವಿಡಿಯೊ ಪ್ರಭಾವ ಸಹಯೋಗಕ್ಕೆ ಪ್ರೇರಣೆ ನೀಡಿತು ಎಂದರು.
ತಮ್ಮ ಹಿಟ್ ಹಾಡುಗಳ ಮೂಲಕ ಗಳಿಂದ ಯುವ ಜನರ ಮೇಲೆ ಅಪಾರ ಪ್ರಭಾವ ಬೀರಿರುವ ಅನಿರುದ್ಧ ರವಿಚಂದರ್ ಪ್ರೇಕ್ಷಕರಿಗೆ ಅವರ ಸ್ಟೈಲ್ ಮತ್ತು ವ್ಯಕ್ತಿತ್ವದಿಂದ ಇಷ್ಟವಾಗುತ್ತಾ ಬಂದಿದ್ದಾರೆ. ಈಗ ಪ್ರಸಿದ್ಧ ಸನ್ ಸ್ಕ್ರೀನ್ ಬ್ರಾಂಡ್ ಪಾರ್ಟನರ್ ಆಗಿ ಅವರು ಹೊರ ಹೊಮ್ಮಿದ್ದಾರೆ.





