ಉ.ಕ ಜಿಲ್ಲೆಯಲ್ಲಿ ಇಂದಿನಿಂದ ಮನೆಗಳ ಗಣತಿ ಕಾರ್ಯ:  ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

Spread the love

ಕಾರವಾರ: ಭಾರತೀಯ ಜನಗಣತಿ ಪ್ರಯುಕ್ತ ಮನೆಗಳ ಪಟ್ಟಿ ಮತ್ತು ಮನೆಗಳ ಗಣತಿ ಕಾರ್ಯವು ಇದೇ 16 ರಿಂದ ಮೇ15 ರವರೆಗೆ ನಡೆಯಲಿದ್ದು, ಕಾರ್ಯಕ್ಕೆ ಗಣತಿದಾರರು ಮನೆ-ಮನೆಗೆ ಭೇಟಿ ನೀಡಲಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 3216 ಮನೆ ಪಟ್ಟಿಯ ಬ್ಲಾಕ್‌ಗಳಿದ್ದು, ಈ ಬ್ಲಾಕ್‌ಗಳಿಗೆ 3255 ಗಣತಿದಾರರು ಹಾಗೂ 586 ಮೇಲ್ವಿಚಾರಕರಿಗೆ ಗಣತಿ ಕಾರ್ಯವನ್ನು ನಿರ್ವಹಿಸಿಲು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಪ್ರಧಾನ ಗಣತಿ ಅಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮನೆಗಳಿಗೆ ಭೇಟಿ ನೀಡಿದಾಗ ಸಾರ್ವಜನಿಕರು ಮಾಹಿತಿಯನ್ನು ಒದಗಿಸಿ ಗಣತಿ ಕಾರ್ಯ ಯಶಸ್ವಿಗೊಳಿಸಬೇಕು. ಸಾರ್ವಜನಿಕರು ನೀಡಿದ ಮಾಹಿತಿ ಸುರಕ್ಷಿತ ಹಾಗೂ ಗೌಪ್ಯವಾಗಿ ಉಳಿಯುತ್ತದೆ. ಈ ಗಣತಿ ಮಾಹಿತಿಯನ್ನು ರಾಷ್ಟ್ರ ನಿರ್ಮಾಣಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma