ಬನವಾಸಿ: ಗೂಡ್ಸ್ , ಬೈಕ್ ನಡುವೆ ಭೀಕರ ಅಪಘಾತ, ಸವಾರ ಸ್ಥಳದಲ್ಲಿಯೇ ಸಾವು

ಅಪಘಾತ

ಸಿರಸಿ: ಗೂಡ್ಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತದಿಂದ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬನವಾಸಿ-ಸಿದ್ದಾಪುರ ಮುಖ್ಯ ರಸ್ತೆಯ ಸಮೀಪದ ಭಾಶಿ ಗ್ರಾಮದ ಭದ್ರಾಪುರ ಕ್ರಾಸ್ ಬಳಿ ನಡೆದಿದೆ.

ಸಾಗರ ತಾಲ್ಲೂಕಿನ ಕಾನ್ಲೆ, ಮಂದಗಳಲೆ ಗ್ರಾಮದ ಗುರುಮೂರ್ತಿ ಆನಂದಪ್ಪ ಛಲವಾದಿ (24) ಮೃತ ವ್ಯಕ್ತಿ. ಬನವಾಸಿ ಕಡೆಯಿಂದ ಚಂದ್ರಗುತ್ತಿ ಕಡೆಗೆ ಸಾಗುತ್ತಿದ್ದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹಲಸಿ ಗ್ರಾಮದ ನಿಯಾಜ್ ಮುನಿರ ಕಿತ್ತೂರು ಎಂಬ ಚಾಲಕನ ನಿರ್ಲಕ್ಷ್ಯತನದಿಂದ ಗೂಡ್ಸ್ ವಾಹ ಬೈಕ್ ಗೆ ಡಿಕ್ಕಿ ಹೊಡೆದಿದೆ.

ಘಟನಾ ಸ್ಥಳಕ್ಕೆ ಸಿಪಿಐ ಶಶಿಕಾಂತ್ ವರ್ಮ, ಪಿಎಸ್ಐ ಮಾಂತೇಶ ಕುಂಬಾರ, ರವೀಂದ್ರ ಬಿರಾದಾರ ಭೇಟಿ ನೀಡಿದ್ದರು. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *

© 2022–2026 Karavali Daily News. All Rights Reserved | Powered by webbrahma