ಪಿಯು ಫಲಿತಾಂಶ: ಉಡುಪಿ, ದ.ಕ ಪಾಲಾದ ರ‍್ಯಾಂಕ್, ಸಿಎಫ್ ಎಎಲ್ ನ ಪ್ರಿನ್ಸಿಲ್ಲಾ ಕಾರ್ಡೋಜ, ಆಳ್ವಾಸ್ ಕಾಲೇಜಿನ ದಿಶಾ ಟಾಫರ್

Spread the love

ಮಂಗಳೂರು: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ನಿರೀಕ್ಷೆಯಂತೆ ಉಡುಪಿ ಮತ್ತು ದಕ್ಷಿಣ ಕನ್ನಡದ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ಮುಂದೇ ಇದ್ದಾರೆ. ಉಡುಪಿ ಜಿಲ್ಲೆಗೆ ಶೇ 96.39 ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಶೇ 96.35 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಶೇ 92.34 ಮತ್ತು ಉತ್ತರ ಕನ್ನಡ ಶೇ 91.78 ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ಆಕಾಶಭವನದ ಸಿಎಫ್ ಎಲ್ ಪಿಯು ಕಾಲೇಜಿನ ಪ್ರಿನ್ಸಿಲ್ಲಾ ಕಾರ್ಡೋಜ (599 ಅಂಕ) ರಾಜ್ಯದಲ್ಲಿಯೇ ಟಾಪರ್ ಆಗಿ ಸಾಧನೆ ಮಾಡಿದ್ದಾರೆ. 12 ಮಂದಿ ತಲಾ 598 ಅಂಕ ಪಡೆದು ಗರಿಷ್ಠ ಅಂಕದ ಸಾಧನೆ ಮಾಡಿದ್ದಾರೆ. ಪುತ್ತೂರಿನ ವಿವೇಕಾನಂದ ಕಾಲೇಜಿನ ಅಭಿರಾಮ್ ಭಟ್, ಬೆಂಗಳೂರಿನ ಬೇಸ್ ಪಿಯು ಕಾಲೇಜಿನ ಆಂಜೆಲ್ ತಿವಾರಿ, ಹುಕ್ಕೇರಿ ಮೊರಾರ್ಜಿ ದೇಸಾಯಿ ಶಾಲೆ ಅಂಕಿತ್ ಕರಟಗಿ, ಮೂಡುಬಿದಿರೆಯ ನ್ಯೂ ವೈಬ್ರಂಟ್ ಪಿಯು ಕಾಲೇಜಿನ ಧನುಷ್ ಗುತ್ತಿ, ಮಂಗಳೂರಿನ ಸಿಎಫ್ ಎಲ್ ಪಿಯು ಕಾಲೇಜಿನ ಮೀನಾಕ್ಷಿ ಉನ್ನಿತ್ತಾನ್, ಮಂಗಳೂರಿನ ಎಕ್ಸ್ ಪರ್ಟ್ ಪಿಯು ಕಾಲೇಜಿನ ನಂದನ್ ನಾಯಕ್, ಆಳ್ವಾಸ್ ಮೂಡುಬಿದಿರೆಯ ರಕ್ಷಿತಾ, ಕುಂದಾಪುರ ಜನತಾ ಪಿಯು ಕಾಲೇಜಿನ ರಶ್ಮಿ, ಬೆಂಗಳೂರಿನ ಆಕ್ಸ್ ಫರ್ಡ್ ಪಿಯು ಕಾಲೇಜಿನ ಸಾಯಿ ರಾಘವ್, ಎಕ್ಸ್ ಪರ್ಟ್ ಪಿಯು ಕಾಲೇಜಿನ ಸಮನ್ಯು ಎಸ್. ಶೆಟ್ಟಿ, ಗಂಗಾವತಿ ವಿದ್ಯಾನಿಕೇತನ ಪಿಯು ಕಾಲೇಜಿನ ಯು. ಶ್ರಾವಣಿ, ಮಂಗಳೂರಿನ ಶಾರದಾ ಪಿಯು ಕಾಲೇಜಿನ ವೈಭವಿ ಕರ್ಕೇರ ತಲಾ 598 ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಬೆಂಗಳೂರಿನ ಶ್ರೀರಾಮಪುರದ ಮಹಾವೀರ ಜೈನ್ ಪಿಯು ಕಾಲೇಜಿನ ಅದಿತಿ ಎ. ಬಾಪು ಮತ್ತು ಮೂಡುಬಿದಿರೆ ಆಳ್ವಾಸ್ ಕಾಲೇಜಿನ ದಿಶಾ 600 ಕ್ಕೆ 600 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಅಗ್ರಶ್ರೇಣಿ ಗಳಿಸಿದ್ದಾರೆ. ಬೆಳಗಾವಿಯ ಗೋಗ್ಟೆ ಪಿಯು ಕಾಲೇಜಿನ ಧ್ವನಿ ಕುಲ್ಕರ್ಣಿ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಾಚೆಲ್ ಡಿಸೋಜ ತಲಾ 599 ಅಂಕ ಪಡೆದಿದ್ದಾರೆ. ಬೆಂಗಳೂರಿನ ಜಯನಗರ ಜೈನ್ ಪಿಯು ಕಾಲೇಜಿನ ದೇವಳಾಪುರ ವೈಷ್ಣವಿ, ಕಾರ್ಕಳ ಕ್ರಿಯೇಟಿವ್ ಪಿಯು ಕಾಲೇಜಿನ ಪ್ರೇರಣಾ, ಚನ್ನಸಂದ್ರ ಆರ್ ಎನ್ ಎಸ್ ಪಿಯು ಕಾಲೇಜಿನ ಸಹನಾ, ಜಯನಗರದ ಟ್ರಾನ್ಸೆಂಡ್ ಪಿಯು ಕಾಲೇಜಿನ ಶ್ರುತಿ, ಜಯನಗರ ಜೈನ್ ಪಿಯು ಕಾಲೇಜಿನ ಸ್ನೇಹಾ, ಮಂಗಳೂರಿನ ಮ್ಯಾಪ್ಸ್ ಪಿಯು ಕಾಲೇಜಿನ ವೃಷಾ ತಲಾ 598 ಅಂಕ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ಬಳ್ಳಾರಿಯ ಕೊಟ್ಟೂರಿನ ಇಂದು ಪಿಯು ಕಾಲೇಜಿನ ಅರ್ಚನಾ ಡಿ. ಎಂ ಹಾಗೂ ಸಂಗೀತಾ ಪಾಟೀಲ್ ಮತ್ತು ಕಲಬುರಗಿಯ ವಿಜಿ ಪಿಯು ಕಾಲೇಜಿನ ಸೃಷ್ಟಿ ತಲಾ 598 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಸುಳ್ಯದ ಶಾರದಾ ಮಹಿಳಾ ಪಿಯು ಕಾಲೇಜಿನ ಫಾತಿಮಾ ಶಾಹ್ಲಾ 595 ಅಂಕ ದಾಖಲಿಸಿದ್ದಾರೆ.

📢 To advertise on this website please call +91 99808 75054    |    ಸುದ್ದಿ ಹಾಗೂ ಜಾಹೀರಾತು ನೀಡಲು ಸಂಪರ್ಕಿಸಿ +91 99808 75054

Leave a Reply

Your email address will not be published. Required fields are marked *