Breaking News

ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಪಂಥಾಹ್ವಾನ ಕೊಟ್ಟ ಬಾವಾ

 

ಮಂಗಳೂರು:  ಡಾ. ಭರತ್ ಶೆಟ್ಟಿ ಅವರೇ ನೀವು ವೈದ್ಯರು ನಮ್ಮನ್ನು ಬಾವಲಿಗೆ ಹೊಲಿಕೆ ಮಾಡುತ್ತಿರಿ, ಸ್ವಲ್ಪವೂ ನಿಮಗೆ ಮಾನವೀಯತೆ ಇಲ್ಲವೇ.  ಬಾವಲಿ ರೂಪದಲ್ಲಿರುವುದಕ್ಕೆ ನಾನಿದ್ದೇನೆ ಎನ್ನುವುದೇ ಸಂತೋಷ.  ನೇಮ, ಕೋಲ, ದೇವಸ್ಥಾನದ ಪ್ರಸಾದ ಕಾಲಡಿಗೆ  ಹಾಕ್ತಾರೆ ಅಂದಿದ್ದೀರಿ. ದೇವರ ಪ್ರಸಾದ ಕಾಲಡಿಗೆ ಹಾಕಿದ್ದೇನೆಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿ. ನಾನು ಆ ರೀತಿ ಮಾಡಿಲ್ಲ ಎಂದು ಪ್ರಮಾಣ ಮಾಡುತ್ತೇನೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವಾ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ಅಮಾಯಕ ಜನರಿಗೆ ಮೋಸ ಮಾಡಬೇಡಿ, ಮೋಸ ಮಾಡಿ ಒಂದು ಬಾರಿ ಶಾಸಕರಾಗಿದ್ದಿರಿ, ಈಗ ಜನರಿಗೆ ನಿಮ್ಮ ಬಗ್ಗೆ ಅರ್ಥವಾಗಿದೆ. ಬಾಲ್ಯದಿಂದಲೂ ನನಗೆ ನಮ್ಮ ತಂದೆ– ತಾಯಿ ಸಂಸ್ಕಾರ ಕಲಿಸಿದ್ದಾರೆ. ಬೇರೆ ಧರ್ಮದ ಬಗ್ಗೆ ಗೌರವ ಕಲಿಸಿಕೊಟ್ಟಿದ್ದಾರೆ. ಭರತ್ ಶೆಟ್ಟಿ ಅವರೇ ನಿಮ್ಮನ್ನು ದೇಗುಲಕ್ಕೆ ಸಾಕಷ್ಟು ಬಾರಿ ಕರೆದಿದ್ದೇನೆ, ನೀವು ಬರಲಿಲ್ಲ. ನನ್ನ ಅವಧಿಯಲ್ಲಿ ದೇಗುಲಕ್ಕೆ ಇಟ್ಟಿದ್ದ 58 ಕೋಟಿ ಹಣವನ್ನು 40 ಕೋಟಿಯನ್ನು ವಾರ್ಡ್ ಗಳಿಗೆ ಹಂಚಿದ್ದೀರಿ. ನಿಮಗೆ ಹಿಂದುತ್ವದ ಬಗ್ಗೆ ಮಾತನಾಡಲು ಅರ್ಹತೆ ಇಲ್ಲ. ನಿಮ್ಮ ಪ್ರಚಾರಕ್ಕೆ ಹಿಂದುತ್ವ ಬಳಸುತ್ತಿದ್ದೀರಿ. ದೇವಸ್ಥಾನಕ್ಕೆ ಇಟ್ಟಿದ್ದ ಹಣವನ್ನು ಕಮಿಷನ್ ಆಸೆಗಾಗಿ ರಸ್ತೆಗಳಿಗೆ ಹಂಚಿಕೆ ಮಾಡಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

  1.  

ಎರಡು ವರ್ಷಗಳ ಹಿಂದೆ ಕಪಿಲಾ ಗೋಶಾಲೆಯನ್ನು ಒಡೆದು ದನಗಳು ಮೇಯುತ್ತಿದ್ದ ಜಾಗವನ್ನು ಕೋಸ್ಟ್ ಗಾರ್ಡ್ ಗೆ ಹಸ್ತಾಂತರ ಮಾಡಿದ್ದೀರಿ. ಶೆಡ್ ಒಡೆಯುವಾಗ ಅಲ್ಲಿದ್ದ ದನ, ಕರುಗಳು ಮಳೆಯಲ್ಲಿ ನೆನೆಯುತ್ತಿದ್ದವು. ಈಗ ಅವುಗಳಿಗೆ ಕುಡಿಯಲು ನೀರಿಲ್ಲದ ಸ್ಥಿತಿ ಇತ್ತು. ಈಗ ನಾನು ಬಾವಿ ತೋಡಿಸಿ ಕೊಡುತ್ತಿದ್ದೇನೆ. ಇವರಿಗೆ ಗೋವುಗಳ ಬಗ್ಗೆ ಕಾಳಜಿ ಇರುತ್ತಿದ್ದರೆ ಹೀಗೆ ಮಾಡುತ್ತಿದ್ರಾ ಎಂದು ಪ್ರಶ್ನಿಸಿದರು.  ದೇವರ ಪ್ರಸಾದ ಬಗ್ಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿ. ಯಾವುದೇ ದರ್ಗಾಕ್ಕೆ ಬೇಕಾದರೂ ನಾನು ಬರುತ್ತೇನೆ.  ನಾನಿದ್ದಾಗ ಎಷ್ಟು ಅನುದಾನ ದೇವಾಲಯಗಳಿಗೆ, ನಾರಾಯಣ ಗುರು ಮಂದಿರಗಳಿಗೆ ಕೊಟ್ಟಿದ್ದೇನೆ, ನೀವೆಷ್ಟು ಕೊಟ್ಟಿದ್ದೀರಿ ಎಂದು ಬಹಿರಂಗ ಚರ್ಚೆ ಬನ್ನಿ ಎಂದು ಪಂಥಾಹ್ವಾನ ನೀಡಿದರು.

ನಿಮ್ಮ ಹೊಟ್ಟೆ ತುಂಬಿಸಲು ಮುಸ್ಲಿಮರು ಬೇಕು. ನಿಮ್ಮ ಗುತ್ತಿಗೆಯನ್ನು ಮುಸ್ಲಿಂ ಗುತ್ತಿಗೆದಾರರಿಗೆ ಕೊಡುತ್ತಿರಿ, ಅದರ ಬಗ್ಗೆ ದಾಖಲೆ ಬೇಕಾದರೆ ನಾನು ತರುತ್ತೇನೆ.  ಕಮಿಷನ್ ಕೊಡಲು ಇವರಿಗೆ ಮುಸ್ಲಿಮರು ಬೇಕು. ಭಾಷಣದಲ್ಲಿ ಮುಸ್ಲಿಮರನ್ನು ತೆಗಳುತ್ತಾರೆ, ಪ್ರಚೋದನೆ ಮಾಡಿ ಓಟು ಪಡೆಯುವ ಕೆಲಸ ಮಾಡುತ್ತಿರಿ. ನಾನು ಯಾರಿಗಾದರೂ ಚೆಕ್ ಕೊಟ್ಟು ವಾಪಸ್ ಬಂದಿದ್ರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ. ಆಝಾನ್ ಕೂಗಿದರೆ ಮಕ್ಕಳಿಗೆ ತೊಂದರೆ ಆಗುತ್ತೆ ಎನ್ನುವ ಈಶ್ವರಪ್ಪ ಮಾತಿಗೆ ತಿರುಗೇಟು ಕೊಟ್ಟರು. ನೀವು ಸಮಾವೇಶ ಮಾಡುವಾಗ ಶಾಲೆ ಮಕ್ಕಳಿಗೆ ತೊಂದರೆ ಆಗುವುದಿಲ್ಲವಾ, ಧ್ವನಿವರ್ಧಕ ಯಾರು ಬಳಸಿದರೂ ಅದರಿಂದ ಸಮಸ್ಯೆ ಬರುವುದಿಲ್ಲವೇ ಎಂದು ಪ್ರಶ್ನಿಸಿದರು.

ಹ್ಯಾರಿಸ್ ಬೈಕಂಪಾಡಿ,

  1.  

Leave a Reply

Your email address will not be published. Required fields are marked *