ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಇರಾನ್ ಇಸ್ರೇಲ್ ನಡುವೆ ಯುದ್ಧದ ಬಿಕ್ಕಟ್ಟು ಉಂಟಾಗಿರುವ ಹಿನ್ನಲೆಯಲ್ಲಿ ಎಲ್ ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ತಡೆಯಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.

ದೇಶದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಲು ಒಂದು ಸಿಲಿಂಡರ್ ಪಡೆದ ನಂತರ ಮುಂದಿನ ಬುಕ್ಕಿಂಗ್ಗೆ ಕನಿಷ್ಠ 21 ರಿಂದ 25 ದಿನಗಳ ಕಡ್ಡಾಯ ಅವಧಿ ವಿಧಿಸಲಾಗಿದೆ.
ಈ ಹಿಂದೆ 55 ದಿನಗಳಲ್ಲಿ ಬುಕ್ಕಿಂಗ್ ಮಾಡುತ್ತಿದ್ದ ಜನರು ಈಗ ಯುದ್ಧ ನೆಪದಿಂದ, ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ಕೆಲವೊಂದು ಪೋಸ್ಟ್ ಗಳ ಕಾರಣದಿಂದ ಹಲವರು 15 ದಿನಗಳಿಗೇನೆ ಸಿಲಿಂಡರ್ಗಳನ್ನು ಬುಕ್ ಮಾಡಲು ಪ್ರಾರಂಭಿಸಿದ ನಿದರ್ಶನಗಳು ಕಂಡು ಬರುತ್ತಿದೆ . ಇದನ್ನು ನಿಯಂತ್ರಿಸಲು ಹೊಸ ನಿಯಮ ಜಾರಿಗೆ ತರಲಾಗಿದೆ. ವಾಣಿಜ್ಯ ಬಳಕೆ ಸಿಲಿಂಡರ್ಗಳಿಗಿಂತ ಮನೆ ಬಳಕೆಯ ಗ್ರಾಹಕರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.



