
ಅಹ್ಮದಾಬಾದ್: ಟೀಂ ಇಂಡಿಯಾ ತಂಡವು ಟಿ 20 ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಪಾರಮ್ಯ ಮೆರೆಯುವ ಮೂಲಕ ಮತ್ತೊಂದು ಕ್ರಿಕೆಟ್ ಇತಿಹಾಸಕ್ಕೆ ಸಾಕ್ಷಿ ಆಗಿದೆ. ಅಹ್ಮದಬಾದಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಕ್ಕೂ ಹೆಚ್ಚು ಕ್ರಿಕೆಟ್ ಅಭಿಮಾನಿಗಳ ನಡುವೆ ಸೂರ್ಯಕುಮಾರ್ ಯಾದವ್ ನೇತೃತ್ವದ ಪಡೆ ನ್ಯೂಜಲ್ಯಾಂಡ್ ಪಡೆಯನ್ನು ಮಕಾಡೇ ಮಲಗಿಸಿದೆ.

ಜಸ್ ಪ್ರೀತ್ ಬುಮ್ರಾ ಅವರು ಅಕ್ರಮ ಬೌಲಿಂಗ್ ದಾಳಿಗೆ ಪದರುಗುಟ್ಟಿದೆ ನ್ಯೂಜಲ್ಯಾಂಡ್ ಟೀಂ ಪಡೆ ಕಕ್ಕಾಬಿಕ್ಕಿ ಆಯಿತು. ಒಬ್ಬರಂತೆ ಒಬ್ಬರು ಪೇವಿಲಿಯನ್ ಪರೇಡ್ ನಡೆಸಿದರು. ಯಾದವ್ ತಂಡದ ಆಟಗಾರರು 256 ಬಾರಿ ರನ್ ಗಳ ಟಾರ್ಗೆಟ್ ನೀಡಿತು. ನ್ಯೂಜಲ್ಯಾಂಡ್ ತಂಡದ ಬ್ಯಾಟಿಂಗ್ ದಾಂಡಿಗರು 19 ಓವರ್ ಗಳಲ್ಲಿ ಎಲ್ಲ ವಿಕೆಟ್ ನಷ್ಟಕ್ಕೆ 159 ರನ್ ದಾಖಲಿಸಿದರು. 96 ರನ್ ಗಳ ಅಂತರದ ವಿಜಯವನ್ನು ಟೀಂ ಇಂಡಿಯಾ ದಾಖಲಿಸಿ ಐಸಿಸಿ ಟ್ರೋಫಿಗೆ ಮುತ್ತೀಕ್ಕಿತು.



