ಗರ್ಭಕಂಠದ ಕ್ಯಾನ್ಸರ್ ತಡೆಗೆ ಉ.ಕ ಜಿಲ್ಲೆಯ 14,835 ಹೆಣ್ಮಕ್ಕಳಿಗೆ ಉಚಿತ ಎಚ್ ಪಿವಿ ಲಸಿಕೆ, ಅಭಿಯಾನ ಕುರಿತು ಜಾಗೃತಿ ಸಿಇಒ ಡಾ. ದಿಲೀಷ್ ಶಶಿ

 

ಕಾರವಾರ:  ಉತ್ತರ ಕನ್ನಡ ಜಿಲ್ಲೆಯಾದ್ಯಂತ 14 ರಿಂದ 15 ವರ್ಷದೊಳಗಿನ 14,835 ಹೆಣ್ಣುಮಕ್ಕಳಿಗೆ ಉಚಿತವಾಗಿ ಎಚ್.ಪಿ. ವಿ. ಲಸಿಕೆ ನೀಡಲು ಗುರಿ ಹೊಂದಲಾಗಿದ್ದು, ಈಗಾಗಲೇ ಜಿಲ್ಲೆಗೆ ಮೊದಲ ಹಂತದಲ್ಲಿ 5,300 ಲಸಿಕೆಗಳು ಆಗಮಿಸಿದ್ದು, ಜಿಲ್ಲೆಗೆ ಅಗತ್ಯ ಇರುವಷ್ಟು, ಸಂಖ್ಯೆಯಲ್ಲಿ ಲಸಿಕೆಯನ್ನು ಪೂರೈಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ದ ಆಗಿದ್ದು, ಈ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲು ಸಿದ್ದತೆಗಳನ್ನು ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ದಿಲೀಷ್ ಶಶಿ ಅವರು ತಿಳಿಸಿದರು.

ಎಚ್.ಪಿ.ವಿ. ಲಸಿಕೆ ನೀಡುವ ವಿಧಾನಗಳ ಬಗ್ಗೆ ಮತ್ತು ಲಸಿಕೆಯ ಪರಿಣಾಮಗಳ ಕುರಿತಂತೆ ಆರೋಗ್ಯ ಇಲಾಖೆಯ ಎಲ್ಲ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದ್ದು, ಈ ಲಸಿಕೆಯನ್ನು ಶಾಲೆಗಳಲ್ಲಿ ನೀಡದ ಕಾರಣ, ಮಕ್ಕಳು ತಮ್ಮ ಪೋಷಕರೊಂದಿಗೆ ಆರೋಗ್ಯ ಕೇಂದ್ರಗಳಿಗೆ ಆಗಮಿಸಿ ಲಸಿಕೆ ಪಡೆಯಬೇಕಾ ಗಿದ್ದು, ಲಸಿಕೆಯ ಮಹತ್ವ ಮತ್ತು ಇದನ್ನು ಪಡೆಯುವಂತೆ ಎಲ್ಲ
ಶಾಲೆಗಳಲ್ಲಿ ಶೀಘ್ರದಲ್ಲಿ ಪೋಷಕರ ಮತ್ತು ಶಿಕ್ಷಕರ ಸಭೆಯನ್ನು ಕರೆದು, ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಹ್ಯೂಮನ್ ಪ್ಯಾಪಿಲೋಮ ವೈರಸ್(ಎಚ್ ಪಿವಿ) ಸೋಂಕು ಗರ್ಭಕಂಠದ ಕ್ಯಾನ್ಸರ್ ಆಗಿ ಪರಿವರ್ತನೆ ಆಗಲಿದ್ದು, ಆರಂಭಿಕ ತಪಾಸಣೆಯ ಮೂಲಕ ಗರ್ಭಕಂಠದ ಕ್ಯಾನ್ಸರ್ ಅನ್ನು ಹೆಚ್ಚಾಗಿ ತಡೆಗಟ್ಟಬಹುದಾದರೂ, ಲಸಿಕಾ ಕಾರ್ಯಕ್ರಮವು ಎಚ್ ಪಿವಿ ಸೋಂಕು ಕ್ಯಾನ್ಸರ್ ಆಗಿ ಪರಿವರ್ತನೆ ಆಗುವ ಮೊದಲೇ ಅದನ್ನು ತಡೆಗಟ್ಟುವ ಮೂಲಕ ಕ್ಯಾನ್ಸರ್ ಸವಾಲ ಅನ್ನು ನೇರವಾಗಿ ಪರಿಹರಿಸಲಿದೆ. ಅಲ್ಲದೇ ಈ ಲಸಿಕೆಯು ಹೆಚ್.ಪಿ.ವಿ. ಯಿಂದ ಉಂಟಾಗುವ ಬಾಯಿ, ಗಂಟಲು, ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಗಳಿಂದಲೂ ರಕ್ಷಿಸುತ್ತದೆ. ಈಗಾಗಲೇ ವಿಶ್ವದ 160 ಕ್ಕೂ ಹೆಚ್ಚು ದೇಶಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದ್ದು, ಲಸಿಕೆಯ ನಂತರ ಎಚ್.ಪಿ.ವಿ. ಸೋಂಕಿನ ಪ್ರಮಾಣ, ಕ್ಯಾನ್ಸರ್ ಪೂರ್ವದ ಗಾಯಗಳು ಮತ್ತು ಗರ್ಭಕಂಠದ ಕ್ಯಾನ್ಸರ್ ಸಂಭವಿಸುವಿಕೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯಲ್ಲಿ 14 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಎಚ್.ಪಿ.ವಿ. ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಾಗೃತಿ ಕಾರ್ಯಕ್ರಮ ಆಯೋಜನೆಗೆ ಸಿದ್ದತೆ ಮಾಡಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಈ ಲಸಿಕಾ ಅಭಿಯಾನ ಆರಂಭ ಆಗಿದ್ದು, ಲಸಿಕೆ ಏಕಾಏಕಿ ಆಗಿ ನೀಡಲಾಗುವುದಿಲ್ಲ ಲಸಿಕೆ ಬಗ್ಗೆ ಮೊದಲು ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಮಕ್ಕಳ ಪೋಷಕರ ಒಪ್ಪಿಗೆ ಪಡೆದು ಲಸಿಕೆ ನೀಡಲಾಗುತ್ತದೆ. ಈಗಾಗಲೇ ಇಲಾಖೆ ಎಲ್ಲ ಸಿಬ್ಬಂದಿಗೆ ಲಸಿಕಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಭಾಗವಾಗಿ ಮಂಗಳವಾರ ಯೋಜನೆಗೆ ಚಾಲನೆ ನೀಡಲಾಗುತ್ತದೆ ಎಂದು  ತಿಳಿಸಿದರು.

ಜಿಲ್ಲೆಯಲ್ಲಿ 14 ರಿಂದ 15 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಎಚ್.ಪಿ.ವಿ. ಲಸಿಕೆ ನೀಡಲು ಈಗಾಗಲೇ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಷ್ ಶಶಿ ಅವರ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ
ನಡೆಸಿ, ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಗರ್ಭಕಂಠದ ಕ್ಯಾನ್ಸರ್ ಗೆ ಒಳಗಾಗುವುದನ್ನು ತಡೆಗಟ್ಟಲು ನೀಡಲಾಗುತ್ತಿರುವ ಈ ಲಸಿಕೆಯನ್ನು
ಜಿಲ್ಲೆಯ ಅರ್ಹ ಎಲ್ಲ ಹೆಣ್ಣುಮಕ್ಕಳು ಪಡೆಯುವ ಮೂಲಕ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್‌ಗೆ ಒಳಗಾಗುವುದರಿಂದ ರಕ್ಷಣೆ ಪಡೆಯಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ .ಶಂಕರ್ ರಾವ್ ತಿಳಿಸಿದ್ದಾರೆ.

Karwar: The target is to provide free H.P. V. vaccination to 14,835 girls between the ages of 14 and 15 across Uttara Kannada district. 5,300 vaccines have already arrived in the district in the first phase. The Health and Family Welfare Department is ready to supply the required number of vaccines to the district. Preparations and necessary arrangements have been made to administer this vaccine at the district hospital, taluk hospital, community health centers and selected primary health centers, said Zilla Panchayat CEO Dr. Dileesh Shashi.

All the doctors and nursing staff of the Health Department have been given necessary training on the methods of administering HPV vaccination and the effects of the vaccine. Since this vaccine is not given in schools, children should come to the health centers with their parents and get vaccinated. A meeting of parents and teachers has been called in all schools soon to discuss the importance of vaccination and to get it, he said, adding that the Education Department officials have been informed to inform about this in the meeting.

  1.  

Leave a Reply

Your email address will not be published. Required fields are marked *