ಬಂಟ್ವಾಳ ಕ್ಷೇತ್ರಕ್ಕೆ 2028 ಕ್ಕೆ ಮತ್ತೆ ರಮಾನಾಥ ರೈ ಅಭ್ಯರ್ಥಿ, ಅವರನ್ನು ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ

 

ಬಂಟ್ವಾಳ: 2028 ಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಅಧಿಕಾರದಲ್ಲಿ ಇದ್ದಾಗ ಕಂಬಳಕ್ಕೆ ಯಾವ ವಿಧದಲ್ಲಿ ಪ್ರೋತ್ಸಾಹ ನೀಡಬೇಕೋ ಅದಕ್ಕೆ ಪ್ರೋತ್ಸಾಹ ನೀಡುತ್ತೇವೆ. ಕಂಬಳಕ್ಕೆ ಹಣಕಾಸಿನ ನೆರವು ನೀಡುತ್ತೇವೆ. ರಮಾನಾಥ ರೈ ಅವರನ್ನು ಸೋಲಿಸಿದ್ದು ಬೇಸರ ತಂದಿದೆ, ಮುಂದಿನ ಚುನಾವಣೆಯಲ್ಲಿ ಅವರೇ ಅಭ್ಯರ್ಥಿ ಆಗಲಿದ್ದು, ಅವರನ್ನು ಮತ್ತೆ ಗೆಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಬಂಟ್ವಾಳದ ನಾವೂರು ಕೂಡಿಬೈಲು ಎಂಬಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಶನಿವಾರ ನಡೆದ ಮುಡೂರು – ಪಡೂರು ಜೋಡುಕರೆ ಬಂಟ್ವಾಳ ಕಂಬಳದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಮಾನಾಥ ರೈ ಅವರು ಶಾಸಕ, ಸಚಿವರಾಗಿದ್ದಾಗ ಬಂಟ್ವಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದರೂ, ಜನರು ಅವರನ್ನು ಸೋಲಿಸಿದ್ದು ನೋವಿನ ಸಂಗತಿ ಆಗಿದೆ. ಇನ್ನೊಂದು ಸಾರಿ ಅವರು ಸ್ಪರ್ಧೆ ಮಾಡಲಿದ್ದು, 2028ಕ್ಕೆ ಮತ್ತೆ ಅಭ್ಯರ್ಥಿ ಆಗುತ್ತಾರೆ ಎಂದರು.

ಬೆಂಜನಪದವಿನಲ್ಲಿ 10 ಕೋಟಿ ಮಂಜೂರಿ ಆಗಿತ್ತು, ಅದನ್ನು ಅನುಷ್ಠಾನ ಮಾಡಲು ಸಾಧ್ಯ ಆಗಿಲ್ಲ. ಮತ್ತೊಮ್ಮೆ ಕ್ರೀಡಾಂಗಣ ನಿರ್ಮಾಣಕ್ಕೆ ನನಗೆ ಅವಕಾಶವನ್ನು ಮಾಡಿಕೊಡಬೇಕು ಎಂದು ಪ್ರಾಸ್ತಾವಿಕ ಮಾತನಾಡಿದ ಮಾಜಿ ಸಚಿವ, ಕಂಬಳ ಸಮಿತಿ ಗೌರವಾಧ್ಯಕ್ಷ ರಮಾನಾಥ ರೈ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಈ ಬಾರಿ ಕ್ರೀಡಾಂಗಣ ನಿರ್ಮಾಣಕ್ಕೆ ನೆರವು ನೀಡುವುದಾಗಿ ಹೇಳಿದರು.

ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿ ಡಾ.ಸಂತೋಷ್ ಗುರೂಜಿ, ಎಂ ಎಲ್ ಸಿ ಸಲೀಮ್ ಆಹ್ಮದ್, ಐವನ್ ಡಿಸೋಜ, ಶಾಸಕ ಅಶೋಕ್ ರೈ , ಟಿ.ಡಿ.ರಾಜೇಗೌಡ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿವಿಧ ನಿಗಮದ ಅಧ್ಯಕ್ಷರಾದ ಲಾವಣ್ಯ ಬಲ್ಲಾಳ್, ಟಿ.ಎಂ ಶಹೀದ್ ತೆಕ್ಕಿಲ್, ಮಮತಾ ಡಿ.ಎಸ್. ಗಟ್ಟಿ, ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಸಹಿತ ಪ್ರಮುಖರು ಇದ್ದರು. ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಸ್ವಾಗತಿಸಿದರು.

  1.  

Leave a Reply

Your email address will not be published. Required fields are marked *