ಮಂಗಳೂರು: ಜೆಇಇ ಮೈನ್ ಪರೀಕ್ಷೆಯಲ್ಲಿ ತಲಪಾಡಿ ದೇವಿನಗರದ ಶಾರದಾ ಕಾಲೇಜಿನ ಉತ್ತಮ ಫಲಿತಾಂಶ ದಾಖಲಿಸಿ ಶೈಕ್ಷಣಿಕ ಮೇಲುಗೈ ಸಾಧಿಸಿದ್ದು, ವಿದ್ಯಾರ್ಥಿಗಳ ಸಾಧನೆಯನ್ನು ಶಾರದಾ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅವರು ಶ್ಲಾಘಿಸಿದ್ದಾರೆ.

ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಎಂಜಿನಿಯರಿಂಗ್ ಜೆಇಇ ಮೈನ್ ಪ್ರವೇಶ ಪರೀಕ್ಷೆಯಲ್ಲಿ ಕಾಲೇಜಿನ ಆರು ವಿದ್ಯಾರ್ಥಿಗಳು ಸಾಧನೆ ಮಾಡಿ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ. ಆದರ್ಶ್ – 97.3077, ಶ್ರಾವಲ್ ನಾಯ್ಕ್ ಟಿ – 96.6383, ಪಿ.ಎಸ್. ಆಯುಷ್ – 96.6363, ಪ್ರಜ್ವಲ್ ಪಿ. ಕಾಮತ್ – 95.0414, ಕೆ. ಪ್ರಥಮ್ – 92.1364, ಪಾರ್ವತಿ ಸುರೇಶ್ – 91.7086 ದಾಖಲಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ವಿನಾಯಕ್ ತಿಳಿಸಿದ್ದಾರೆ.
ಈ ವಿದ್ಯಾರ್ಥಿಗಳ ಗಮನಾರ್ಹ ಪರ್ಸೆಂಟೈಲ್ ಅಂಕಗಳು ಕಾಲೇಜಿನ ಕೀರ್ತಿ ಹೆಚ್ಚಿಸಿದ್ದು, ಜೆಇಇ ಮುಖ್ಯ ಪರೀಕ್ಷೆಯಲ್ಲಿ ಶಾರದಾ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಶಾರದಾ ಕುಟುಂಬದ ಹೆಮ್ಮೆಯ ಕ್ಷಣ. ಅವರ ಯಶಸ್ಸು ಶಿಸ್ತಿನ ಸಿದ್ಧತೆ, ಉತ್ತಮ ಮೌಲ್ಯಗಳು ಮತ್ತು ಶೈಕ್ಷಣಿಕ ಬದ್ಧತೆಯ ಪ್ರತಿಬಿಂಬ. ವಿದ್ಯಾರ್ಥಿಗಳು, ಪೋಷಕರು ಹಾಗೂ ಉಪನ್ಯಾಸಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶಾರದಾ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ತಿಳಿಸಿದ್ದಾರೆ.



