Breaking News

ಮಂಗಳೂರು ದಸರಾ ವೈಭವದ ಶೋಭಾಯಾತ್ರೆಗೆ ಚಾಲನೆ, ವೀಕ್ಷಣೆಗೆ ಬಾರಿ ಜನಸ್ತೋಮ

 

ಮಂಗಳೂರು: ಮಂಗಳೂರು ದಸರಾ ಮೆರವಣೆಗೆಯ ಶೋಭಾಯಾತ್ರೆಗೆ ಕೇಂದ್ರ ಮಾಜಿ ಸಚಿವ ಹಾಗೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ರೂವಾರಿ ಬಿ. ಜನಾರ್ದನ ಪೂಜಾರಿ ಅವರು ಭಾನುವಾರ ಚಾಲನೆ ನೀಡಿದರು.

ಗೋಕರ್ಣನಾಥ ದೇವಸ್ಥಾನದಿಂದ ಮಹಾಗಣಪತಿ, ಬ್ರಹ್ಮಶ್ರೀ ನಾರಾಯಣ ಗುರುಗಳ ವಿಗ್ರಹ ಬಳಿಕ ನವದುರ್ಗೆಯರ ವಿಗ್ರಹದ ಪೂಜೆ ನಂತರ ಶಾರದಾ ದೇವಿ ವಿಗ್ರಹದ ಮೆರವಣಿಗೆಗೆ ಚಾಲನೆ ನೀಡಲಾಯಿತು.

ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್ , ಮಾಜಿ ಸಚಿವ ರಮಾನಾಥ ರೈ, ಮಾಜಿ ಮೇಯರ್ ಶಶಿಧರ ಹೆಗ್ಡೆ, ದೇವಸ್ಥಾನದ ಕ್ಷೇತ್ರಾಡಳಿತ ಮಂಡಳಿ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಖಜಾಂಜಿ ಪದ್ಮರಾಜ್ ಆರ್, ಆಡಳಿತ ಮಂಡಳಿಯ ಸದಸ್ಯರಾದ ರವಿಶಂಕರ್ ಮಿಜಾರ್, ಎಂ ಶೇಖರ ಪೂಜಾರಿ, ಸಂತೋಷ್ ಕುಮಾರ್,ಜಗದೀಪ್ ಡಿ ಸುವರ್ಣ, ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಸಹ ಅಧ್ಯಕ್ಷ  ಡಾ.ಅನಸೂಯ ಬಿ.ಟಿ. ಸಾಲ್ಯಾನ್ , ಉಪಾಧ್ಯಕ್ಷ ಡಾ.ಬಿ.ಜೆ. ಸುವರ್ಣ ಸದಸ್ಯರಾದ ಚಿತ್ತರಂಜನ್ ಗರೋಡಿ , ಕೃತೀನ್ ಡಿ ಅಮೀನ್ , ಎಚ್.ಎಸ್. ಜಯರಾಜ್, ಹರಿಕೃಷ್ಣ ಬಂಟ್ವಾಳ್, ರಾಧಾಕೃಷ್ಣ, ಶೈಲೇಂದ್ರ ವೈ ಸುವರ್ಣ, ಜತೀನ್ ಅತ್ತಾವರ, ರಮಾನಾಥ ಕಾರಂದೂರು, ಚಂದನ್ ದಾಸ್, ಪಿ.ಕೆ.ಗೌರವಿ ರಾಜಶೇಖರ್ ಜಯ ಕುಮಾರ್, ಲೀಲಾಕ್ಷ ಕರ್ಕೇರಾ, ಕಿಶೋರ್ ಡೊಂಗರಕೇರಿ, ಬಿ. ವಾಸುದೇವ ಕೋಟ್ಯಾನ್ ಈ ವೇಳೆ ಇದ್ದರು.

ಕುದ್ರೋಳಿ ಕ್ಷೇತ್ರದಿಂದ ಹೊರಡುವ ದಸರಾ ಶೋಭಾಯಾತ್ರೆ ಮಣ್ಣಗುಡ್ಡ ಮಾರ್ಗವಾಗಿ, ನಾರಾಯಣ ಗುರು ವೃತ್ತ -ಲಾಲ್‌ಬಾಗ್, ಬಲ್ಲಾಳ್‌ ಬಾಗ್, ಪಿವಿಎಸ್ ವೃತ್ತ, ನವಭಾರತ್ ಸರ್ಕಲ್, ಕೆ.ಎಸ್‌. ರಾವ್ ರಸ್ತೆ, ಹಂಪನಕಟ್ಟೆ ವಿವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್ ಮಾರ್ಗವಾಗಿ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್, ಚಿತ್ರಾ ಟಾಕೀಸ್, ಅಳಕೆ ಮಾರ್ಗ ವಾಗಿ ಕ್ಷೇತ್ರ ಕುದ್ರೋಳಿಗೆ ಮರಳಲಿದೆ. ಅ. 14 ರಂದು ಬೆಳಿಗ್ಗೆ ಪೂಜೆಯ ಪ್ರಾತಃಕಾಲ ಮಂಟಪ ಪೂಜೆ ಬಳಿಕ ದೇವಳದ ಪುಷ್ಕರಣಿಯಲ್ಲಿ ಶಾರದೆಯ ವಿಸರ್ಜನೆ ಕಾರ್ಯವು ನಡೆಯಲಿದೆ.

  1.  

Leave a Reply

Your email address will not be published. Required fields are marked *