Breaking News

ಸಾಮಾಜಿಕ ಮುಂದಾಳು, ಉದ್ಯಮಿ ಬಿ.ಎಂ. ಮುಮ್ತಾಜ್ ಅಲಿ ನಾಪತ್ತೆ, ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲು

 

ಮಂಗಳೂರು: ಸಾಮಾಜಿಕ ಮುಂದಾಳು, ಉದ್ಯಮಿ ಬಿ.ಎಂ. ಮುಮ್ತಾಜ್ ಅಲಿ (52) ಅವರು ನಾಪತ್ತೆ ಆಗಿರುವ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ಯಾಮಿಲಿ ಗ್ರೂಪ್ ನಲ್ಲಿ ನಸುಕಿನ 3.30 ಗಂಟೆಗೆ ಕೂಡಲೇ ತಂದೆ ಅವರನ್ನು ಹುಡುಕಲು ಮನೆಯವರ ಜತೆಗೆ ಕಾರಿನಲ್ಲಿ ಹೊರಟೆವು. ಕೂಳೂರು ಸೇತುವೆ ಬಳಿ ತಂದೆ ತೆಗೆದುಕೊಂಡು ಬಂದಿದ್ದ ಕಾರು ಪತ್ತೆಯಾಗಿದ್ದು, ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿತ್ತು. ಈ ವೇಳೆ ತಂದೆ ಅವರು ಕಾರಿನಲ್ಲಿ ಇರಲಿಲ್ಲ ಎಂದು ಮುಮ್ತಾಜ್  ಅಲಿ ಅವರ ಪುತ್ರಿ ದೂರಿನಲ್ಲಿ ತಿಳಿಸಿದ್ದಾರೆ.

ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಅಗ್ನಿಶಾಮಕದಳ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದೆ. ಎಫ್ಎಸ್‌ಎಲ್ ಅಧಿಕಾರಿಗಳು ಕೂಡ ಶೋಧ ಕಾರ್ಯ ನಡೆಸುತ್ತಿದ್ದಾರೆ.

  1.  

 

 

 

  1.  

Leave a Reply

Your email address will not be published. Required fields are marked *