Breaking News

ವಿಶ್ವ ಹಿರಿಯ ನಾಗರೀಕರ ದಿನವೇ ಕಪ್ಪುಪಟ್ಟಿ ಧರಿಸಿ ನಿವೃತ್ತ ಸರಕಾರಿ ನೌಕರರ ಪ್ರತಿಭಟನೆ

 

ಮಂಗಳೂರು: ಹಿರಿಯ ನಾಗರಿಕರ ದಿನಾಚರಣೆ ದಿನದಂದು ನಿವೃತ್ತ ಸರಕಾರಿ ನೌಕರರು ಪ್ರತಿಭಟನೆಗೆ ಇಳಿಸುವುದು ಸರಿಯಲ್ಲ. ನಾವೇನೂ ಸಾಲ ಕೇಳ್ತಾ ಇಲ್ಲ. ಸುದೀರ್ಘ ವರ್ಷಗಳ ಕಾಲ ಕೆಲಸ ಮಾಡಿದ್ದಕ್ಕೆ ನ್ಯಾಯ ಕೊಡಬೇಕು. ಇನ್ನಾದರೂ ಹಿರಿಯರಾದ ನಮ್ಮನ್ನು ಬೀದಿಗೆ ಇಳಿಯುವಂತೆ ಮಾಡಬೇಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯ ಜಿಲ್ಲಾ ಪ್ರಧಾನ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಹೇಳಿದರು.

ಮಂಗಳವಾರ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ವೇದಿಕೆ ವತಿಯಿಂದ ನಡೆದ ನಿವೃತ್ತ ಸರಕಾರಿ ನೌಕರರು ಕಪ್ಪು ಪಟ್ಟಿ ಧರಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ನಿವೃತ್ತ ನೌಕರರಿಗೆ 7ನೇ ವೇತನ ಆಯೋಗದಲ್ಲಿ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಿ.  ಕೋವಿಡ್ ಸಮಯದಲ್ಲಿ ಸರಕಾರ ತುರ್ತು ಸೇವೆಗಳನ್ನು ಮಾಡಿದವರು ಸರಕಾರಿ ನೌಕರರು ಈಗಾಗಲೇ ನಮ್ಮ ಬೇಡಿಕೆಗಳನ್ನು ತಹಶೀಲ್ದಾರ್  ಮೂಲಕ ಆರ್ಥಿಕ ಇಲಾಖೆಯವರೆಗೂ ಗಮನ ಸೆಳೆವ ಕೆಲಸ ಮಾಡಿದ್ದೇವೆ. ಜಿಲ್ಲೆಯಲ್ಲಿ ಮಾತ್ರವಲ್ಲ ರಾಜ್ಯ ವ್ಯಾಪಿ ಹಿರಿಯ ನಿವೃತ್ತ ನೌಕರರು ಬೀದಿಗೆ ಇಳಿದು ಪ್ರತಿಭಟನೆ ನಡೆಸುವ ಸ್ಥಿತಿ ನಿರ್ಮಾಣ ಮಾಡಿದೆ. ಇದು ಮುಂದುವರಿಯದೇ ನಮಗೆ ನ್ಯಾಯ ದೊರಕಿಸಿ ಕೊಡಬೇಕು ಎಂದರು.

  1.  

ಜಿಲ್ಲಾ ಸಂಚಾಲಕ ಸ್ಟ್ಯಾನಿ ತಾವ್ರೋ ಅವರು ಮಾತನಾಡಿ, ನಿವೃತ್ತ ಸರಕಾರಿ ನೌಕರರು ಬೀದಿಗೆ ಇಳಿದು ಪ್ರತಿಭಟನೆ ಮಾಡುವಂತದ್ದು, ವಿಷಾದನೀಯ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಕೊಡಬೇಕು ಎಂದರು.

ನಿವೃತ್ತ  ಹಿರಿಯ ಸರಕಾರಿ ನೌಕರರ ವಿಠಲ ಶೆಟ್ಟಿಗಾರ್ ಮಾತನಾಡಿ, ನಾನು ನಿವೃತ್ತನಾಗಿ ಬಹಳ ವರ್ಷಗಳು ಆಗಿದೆ. ಆದರೆ ನಿವೃತ್ತ ಸರಕಾರಿ ನೌಕರರಿಗೆ ಅನ್ಯಾಯ ಆಗುತ್ತಿರುವುದನ್ನು ನೋಡಿ ಸುಮ್ಮನೆ ಇರಲು ಸಾಧವಾಗದೇ ಪ್ರತಿಭಟನೆಗೆ ಬಂದಿದ್ದೇನೆ ಎಂದರು.

ಜಿಲ್ಲಾ ಸಂಚಾಲಕ ನಾರಾಯಣ ಪೂಜಾರಿ ಅವರು ಮಾತನಾಡಿ, ಸರಕಾರಕ್ಕೆ ಇದು ಶೋಭೆ ತರುವ ಕೆಲಸವಲ್ಲ. ನವೇನೂ ಹೆಚ್ಚುವರಿ ಬೇಕು ಅನ್ನುತ್ತಿಲ್ಲ. ಹಕ್ಕಿನಲ್ಲಿ ಇರುವ ಸವಲತ್ತನ್ನು ನ್ಯಾಯಯುತವಾಗಿ ನೀಡಿ ಎನ್ನುವುದು ನಮ್ಮ ಮನವಿ. ಸರಕಾರದ ಯೋಜನೆಗಳನ್ನು ಜಾರಿಗೊಳಿಸುವ ಬಹಳಷ್ಟು ಕೆಲಸಗಳಲ್ಲಿ ನಮ್ಮ ಪಾತ್ರವಿದೆ ಆದರೆ ನಮ್ಮನ್ನು ಕಡೆಗಣಿಸುವುದು ಸರಿಯಲ್ಲ. ಸಮಸ್ಯೆಗೆ ಪರಿಹಾರ ನೀಡಲು ತಕ್ಷಣವೇ ಆದೇಶ ಮಾಡಬೇಕು. ಸಂಧ್ಯಾ ಕಾಲದಲ್ಲಿ ನಮಗೆ ಪ್ರತಿಭಟನೆಗೆ ಇಳಿಸುವುದು ಸರಿಯಲ್ಲ ಎಂದರು.

ಸಂಚಾಲಕರಾದ ಮಂಜುಳಾ ಜಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರತಿಭಟನೆ ಬಳಿಕ ಸಂಚಾಲಕರು ಮನವಿ ಪತ್ರವನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಹಿರಿಯ ಸರಕಾರಿ ನೌಕರರಾದ ವಿಜಯ ಪೈ, ಮೋಹನ ಬಂಗೇರ, ಎನ್. ಆನಂದ ನಾಯ್ಕ್, ಹೇಮನಾಥ, ಜೆರಾಲ್ಡ್, ಭಾರತಿ ಪಿ.ವಿ ಇದ್ದರು.

  1.  

Leave a Reply

Your email address will not be published. Required fields are marked *