Breaking News

ಹೀಗಿದೆ ನಿಮ್ಮ ಗುರುವಾರದ ರಾಶಿಫಲ

 

ಕುಂಭ: ಮನೆಯಲ್ಲಿ ಯಾವುದೇ ಜಗಳವಿದ್ದರೆ ಇಂದು ತಂದೆಯ ಸಹಾಯದಿಂದ ಕೊನೆಗೊಳ್ಳಲಿದೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. 

ಮೀನ: ಹೊಸ ಹೂಡಿಕೆ ಇಂದು ಹೆಚ್ಚು ಲಾಭವನ್ನು ತಂದುಕೊಡಲಿದೆ. ಮನೆಗೆ ಅತಿಥಿಗಳ ಆಗಮನದಿಂದ ಹೆಚ್ಚು ಸಂತಸ. ಕೌಟುಂಬಿಕವಾಗಿ ಹೊಂದಾಣಿಕೆ.

ಧನಸ್ಸು: ನಿಮ್ಮ ಖರ್ಚು ವೆಚ್ಚಗಳು ಹೆಚ್ಚಳ ಆಗುವ ಸಾಧ್ಯತೆಯಿದೆ. ಸಂಗಾತಿ ಜತೆಗೆ ಹೆಚ್ಚು ಅನ್ಯೋನ್ಯತೆಯಿಂದ ಇರಲು ಪ್ರಯತ್ನಿಸಿ.

ಮಕರ: ಸಹೋದರನ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಿ.ಪ್ರಯಾಣಕ್ಕೆ ಪ್ರಶಸ್ತ ದಿನ. ವಾಹನಕ್ಕೆ ಸಂಬಂಧಿಸಿದ ಖರ್ಚು ವಿಪರೀತ ಏರಿಕೆ ಕಾಣಲಿದೆ.

ಕನ್ಯಾ: ಕುಟುಂಬ ಸದಸ್ಯರ ಜತೆಗೆ ಸುಂದರ ಸಂಜೆ ಕಳೆಯುವಿರಿ. ಸಾಮಾಜಿಕವಾಗಿ ಸ್ಥಾನಮಾನ ವೃದ್ದಿಯಾಗಲಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಇದ್ದ ಅಡೆತಡೆಗಳು ಇಂದು ನಿವಾರಣೆ ಆಗಲಿದೆ.

ತುಲಾ: ಯಾವುದೇ ವ್ಯವಹಾರವನ್ನು ಪೂರ್ಣಗೊಳಿಸಲು ಸಕಾಲವಾದ ದಿನ. ಬಾಕಿ ಉಳಿಕೆ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ.

  1.  

ವೃಶ್ಚಿಕ: ದೇವರ ದರ್ಶನದಿಂದ ಮನಸ್ಸಿಗೆ ನೆಮ್ಮದಿ. ಕುಟುಂಬಸ್ಥರ ಜತೆಗೆ ದೂರ ಪ್ರಯಾಣ ಸಾಧ್ಯತೆ. ರಾಜಕೀಯ ಕ್ಷೇತ್ರದಲ್ಲಿ ಇರುವವರ ಖ್ಯಾತಿ ಹೆಚ್ಚಲಿದೆ.

ಮೇಷ: ಸಹೋದ್ಯೋಗಿಗಳ ಜತೆಗೆ ಜಗಳವಾಡುವುದನ್ನು ತಪ್ಪಿಸಿ. ಅರ್ಧಕ್ಕೆ ನಿಂತಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಯತ್ನಿಸುವಿರಿ.

ವೃಷಭ: ಆತ್ಮವಿಶ್ವಾಸದಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ದೊರೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಸೂಕ್ತ ವೈದ್ಯರನ್ನು ಭೇಟಿ ಮಾಡುವುದು ಒಳಿತು.

ಮಿಥುನ: ಕುಟುಂಬದ ಸದಸ್ಯರ ಜತೆಗಿನ ವಿವಾದಗಳು ಇಂದು ಬಗೆ ಹರಿಯಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚು ಅನುಕೂಲಕರ.

ಕರ್ಕಾಟಕ: ಹಿರಿಯ ಮಾತನ್ನು ಆಲಿಸಿ, ಪ್ರೇಮ ಜೀವನ ಒತ್ತಡದಿಂದ ಕೂಡಿರಲಿದೆ. ಮಾಡುವ ಕೆಲಸ ಕಾರ್ಯಗಳಲ್ಲಿ ಇಂದು ಯಶಸ್ಸನ್ನು ಪಡೆಯುತ್ತಾರೆ.

ಸಿಂಹ; ಯಾವುದೇ ವ್ಯವಹಾರ ಮಾಡುವ ಮೊದಲು ಯೋಚಿಸಿ. ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾದಿತು. ಕೌಟುಂಬಿಕ ಜೀವನದಲ್ಲಿ ಅಶಾಂತಿ ಉಂಟಾಗಲಿದೆ.

  1.  

Leave a Reply

Your email address will not be published. Required fields are marked *