Breaking News

ಹೀಗಿದೆ ನಿಮ್ಮ ಬುಧವಾರದ ರಾಶಿಫಲ

 

ವೃಶ್ಚಿಕ ರಾಶಿಯವರಿಗೆ ಗಂಡನ ಮನೆಯವರ ನಡವಳಿಕೆ ಕೋಪ ತರಿಸಲಿದೆ, ವೃಷಭ ರಾಶಿಯ ಮಧುಮೇಹಿಗಳ ಆರೋಗ್ಯದಲ್ಲಿ ಇಂದು ಕೊಂಚ ಏರುಪೇರು ಉಂಟಾಗಲಿದೆ.

ಸಿಂಹ: ನಿಮ್ಮ ಯಶಸ್ಸು ಮತ್ತು ಭರವಸೆಯು ನಿಮ್ಮ ಕಂಡ ಕನಸುಗಳನ್ನು ನನಸು ಮಾಡಲಿದೆ.

ಕನ್ಯಾ: ವಾಹನ ಖರೀದಿ ಮಾಡುವವರಿಗೆ ಶೀಘ್ರದಲ್ಲಿಯೇ ಶುಭ ದಿನ ಕೂಡಿ ಬರಲಿದೆ.ಇತರರ ನೋವು ಹಾಗೂ ಸಂಕಷ್ಟಗಳಿಗೆ ನೀವು ನೆರವಾಗಲಿದ್ದೀರಿ.

ತುಲಾ : ಆದಾಯದ ಜೊತೆ ಖರ್ಚಿನ ಸ್ಥಿತಿಯು ಇಳಿಮುಖವಾಗಲಿದೆ. ನಿಮ್ಮ ಮುಂದಿನ ಯೋಜನೆಗಳ ಬಗ್ಗೆ ಎಲ್ಲಿಯೂ ಬಹಿರಂಗಪಡಿಸಬೇಡಿ.

ವೃಶ್ಚಿಕ : ಕೆಲವೊಂದು ಸಕಾರಾತ್ಮಕ ಯೋಜನೆಗಳು ನಿಮ್ಮ ದಿನವನ್ನು ಚೆನ್ನಾಗಿ ಇಡಲಿದೆ. ಗಂಡನ ಮನೆಯವರ ನಡವಳಿಕೆ ಕೋಪ ತರಿಸಲಿದೆ.

ಧನು : ಕುಟುಂಬದ ಜೊತೆಯಲ್ಲಿ ಇಂದು ಶಾಪಿಂಗ್​ಗೆ ಉತ್ತಮ ಸಮಯ ಕಳೆಯಲಿದ್ದೀರಿ. ಮನೆ ಹಾಗೂ ವ್ಯಾಪಾರದ ನಡುವೆ ಉತ್ತಮ ಸಾಮರಸ್ಯವನ್ನು ಕಾಪಾಡಿಕೊಳ್ಳಲಿದ್ದೀರಿ.

  1.  

ಮಕರ : ನಿಮ್ಮ ಪ್ರಭಾವಶಾಲಿ ಮಾತಿನಿಂದ ಎಲ್ಲರ ಗಮನ ಸೆಳೆಯಲಿದ್ದೀರಿ. ಕೌಟುಂಬಿಕ ಜೀವನದಲ್ಲಿ ಆಸಕ್ತಿ ಹೆಚ್ಚಲಿದೆ.

ಕುಂಭ : ಇಂದಿನ ನಿಮ್ಮ ದಿನವು ಅತ್ಯಂತ ಆಹ್ಲಾದಕರವಾಗಿ ಇರಲಿದೆ. ಶಾಂತವಾಗಿ ಮೇಲಾಧಿಕಾರಿಗಳ ಜೊತೆ ವರ್ತಿಸಿ.

ಮೀನ: ಯಾವುದೇ ಸಮಸ್ಯೆಯಿದ್ದರೂ ಕುಟುಂಬ ಸದಸ್ಯರನ್ನು ಸಂಪರ್ಕಿಸುವುದು ಸೂಕ್ತ. ಮಾರ್ಕೆಂಟಿಂಗ್​ ಕೆಲಸಗಾರರಿಗೆ ಈ ದಿನ ಶುಭದಿನವಾಗಲಿದೆ.

ಮೇಷ: ಉತ್ತಮ ಜೀವನ ಮಟ್ಟವನ್ನು ಕಾಪಾಡಿಕೊಳ್ಳಲು ನೀವು ಕೆಲವು ಸಂಕಲ್ಪಗಳನ್ನು ನಿಮ್ಮೊಂದಿಗೆ ಮಾಡಿಕೊಳ್ಳಲಿದ್ದೀರಿ.

ವೃಷಭ :ಯಾವುದೇ ಕಾರಣಕ್ಕೂ ಚಿಲ್ಲರೆ ಸಾಲವನ್ನೆಲ್ಲ ಮಾಡಲು ಹೋಗಬೇಡಿ. ಇದರಿಂದ ನಿಮ್ಮ ಸಂಬಂಧಗಳು ಹಾಳಾಗಲಿದೆ.  ಮಧುಮೇಹಿಗಳ ಆರೋಗ್ಯದಲ್ಲಿ ಇಂದು ಕೊಂಚ ಏರುಪೇರು ಉಂಟಾಗಲಿದೆ.

ಮಿಥುನ: ಇಂದು ಧಾರ್ಮಿಕ ಕಾರ್ಯಗಳಲ್ಲಿ ನೀವು ಭಾಗಿಯಾಗಲಿದ್ದೀರಿ. ಆಸ್ತಿಗೆ ಸಂಬಂಧಿಸಿದ ಯಾವುದೇ ಯೋಜನೆಗಳಲ್ಲಿ ನೀವು ಯಶಸ್ವಿಯಾಗಿ ಇರಲಿದ್ದೀರಿ.

ಕಟಕ : ನಿಮ್ಮ ಶತ್ರುಗಳ ಚಲನವಲನವನ್ನು ನಿರ್ಲಕ್ಷಿಸಬೇಡಿ. ಇಲ್ಲದಿದ್ದರೆ ನೀವು ತೊಂದರೆಗೆ ಸಿಲುಕಬಹುದು.

  1.  

Leave a Reply

Your email address will not be published. Required fields are marked *