ಪಿವಿಎಸ್ ಸಂಸ್ಥೆ ಆಡಳಿತ ಸ್ವತಂತ್ರವಾಗಿ ನಾನೇ ನಿಭಾಯಿಸುತ್ತಿರುವೆ, ಅನಗತ್ಯ ಗೊಂದಲ ಬೇಡ: ಸರೋಜಿನಿ ಎಂ. ಕುಶೆ

ಮಂಗಳೂರು: ಪಿವಿಎಸ್ ಸಂಸ್ಥೆಯ ಆಡಳಿತವನ್ನು ಸ್ವತಂತ್ರವಾಗಿ ನಾನೇ ನಿಭಾಯಿಸುತ್ತಿದ್ದು, ಯಾರದೇ ವ್ಯಕ್ತಿಯ ಸುಪರ್ಧಿಗೆ ನೀಡಿಲ್ಲ, ಜತೆಗೆ ಆಡಳಿತ ವ್ಯವಸ್ಥೆಯಲ್ಲಿ ಯಾವುದೇ ವ್ಯಕ್ತಿಯ ಹಸ್ತಕ್ಷೇಪವಿಲ್ಲ ಎಂದು ಪಿವಿಎಸ್ ಗ್ರೂಪ್ ಅಧ್ಯಕ್ಷೆ ಹಾಗೂ ಆಡಳಿತ ನಿರ್ದೇಶಕಿ ಸರೋಜಿನಿ ಎಂ. ಕುಶೆ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಮ್ಮ ಜತೆಯಲ್ಲಿ ಇದ್ದು, ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದ ಕೆಲ ವ್ಯಕ್ತಿಗಳು ನಮ್ಮ ಸಂಸ್ಥೆ ಹಾಗೂ ಆಸ್ತಿಪಾಸ್ತಿ ಕಬಳಿಸುವ ದುರುದ್ದೇಶದ ಹುನ್ನಾರದಿಂದ ಕೃಷ್ಣದತ್ತ ಎಂಬ ವ್ಯಕ್ತಿ ದತ್ತು ಪುತ್ರ ಎಂದು ಸುಳ್ಳು ಹೇಳಿಕೊಂಡು ನಮಗೆ ತೊಂದರೆ ಉಂಟು ಮಾಡುತ್ತಿದ್ದು, ನ್ಯಾಯಾಲಯದ ಮೊರೆ ಹೋಗಿದ್ದು, ಕೃಷ್ಣದತ್ತ ಯಾವುದೇ ಕಾರಣಕ್ಕೂ ನನ್ನ ಮಗನಲ್ಲ ಎಂದು ತಡೆಯಾಜ್ಞೆ ತಂದಿದ್ದೇನೆ. ಸರಕಾರ, ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರು ಕೃಷ್ಣದತ್ತ ಹಾಗೂ ಆತನ ಸಹಚರರ ಸುಳ್ಳು ಸುದ್ದಿಗಳಿಗೆ ಯಾವುದೇ ಒತ್ತು ನೀಡಬೇಡಿ, ಆತನ ಜತೆಗೆ ಯಾವುದೇ ವ್ಯವಹಾರ ಮಾಡಿದರೆ ಸಂಸ್ಥೆ ಹೊಣೆಯಾಗಲ್ಲ. ನನ್ನ ನ್ಯಾಯಯುತ ಹೋರಾಟದಲ್ಲಿ ಸಹಕಾರ ನೀಡಬೇಕು ಎಂದು ತಿಳಿಸಿದರು.

ನನ್ನ ಅಜ್ಜ ದಿವಂಗತ ಪುತ್ತು ವೈಕುಂಠ ಶೇಟ್ ಅವರ ಪತ್ನಿ ತಂಗಿ ಮಗಳು ವಸಂತಿ ಎಚ್. ಅವರ ಬಾಲ್ಯದಿಂದ ನಮ್ಮ ಜತೆಯಲ್ಲಿದ್ದು, ನನ್ನ ಪತಿ ಮೃತಪಟ್ಟ ನಂತರ ತನ್ನ ಹೆಗಲಿಗ ಹೆಗಲು ನೀಡಿ ಪಿವಿಎಸ್ ಕಂಪನಿಗಳನ್ನು ನಾವಿಬ್ಬರೂ ಜತೆಯಾಗಿ ಮುನ್ನಡೆಸುತ್ತಾ ಬರುತ್ತಿದ್ದೇವೆ ಎಂದು ತಿಳಿಸಿದರು.

ವೈಶ್ಯ ಎಜುಕೇಷನ್ ಸೊಸೈಟಿ ಸಂತೋಷ್ ಚಂದ್ರ ಅವರು ಮಾತನಾಡಿ, ಪಿವಿಎಸ್ ಸಂಸ್ಥೆಯ ಆಡಳಿತವು ಸಾಮಾಜಿಕ ಹಾಗೂ ಶೈಕ್ಷಣಕ ಸೇವೆಗಳನ್ನು ಟ್ರಸ್ಟ್ ಮೂಲಕ ಬಹಳ ಅಚ್ಚುಕಟ್ಟಾಗಿ ಮಾಡುತ್ತಿದ್ದು, ಇದರಲ್ಲಿ ಯಾವುದೇ ಅನುಮಾನ ಇಲ್ಲ. ಕೆಲ ವ್ಯಕ್ತಿಗಳು ಬೇಕಂತಲೇ ಸಂಸ್ಥೆಯ ಹೆಸರು ಹಾಳು ಮಾಡುವ ಉದ್ದೇಶದಿಂದ ಹಾಗೂ ಆಸ್ತಿಪಾಸ್ತಿ ಹೊಡೆಯ ಹುನ್ನಾರದಿಂದ ದತ್ತು ಮಗ ಎಂದು ಹೇಳಿಕೊಂಡು ಗೊಂದಲ ಉಂಟು ಮಾಡುತ್ತಿದ್ದು, ಇದು ಸತ್ಯಕ್ಕೆ ದೂರ ಆಗಿದೆ. ಕಾನೂನು ಪ್ರಕಾರ ಯಾವುದೇ ವ್ಯಕ್ತಿಯನ್ನು ದತ್ತು ಪಡೆದಿಲ್ಲ. ಈ ಪ್ರಕರಣದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುತ್ತಿದೆ ಎಂದರು.

ಅರ್ಚಕರಾದ ಜಯರಾಂ ಭಟ್, ಅಶೋಕ್ ಭಟ್, ಗೋಪಿ ಶೇಟ್, ಪ್ರವೀಣ್ ನಾಗ್ವೇಕರ್ ಇದ್ದರು.

Mangaluru: I am handling the administration of PVS independently and have not given it to any person’s superior, and there is no interference in the administrative system, PVS Group President and Managing Director Sarojini M. Kushe said at a press conference.

Some people who were with us and were looking after the accounts, with the malicious intent of grabbing our organization and property, are causing us trouble by falsely claiming that a person named Krishnadatta is my adopted son. I have approached the court and brought a restraining order stating that Krishnadatta is not my son for any reason. The government, police department and the public should not give any weight to the false news of Krishnadatta and his associates, the organization will not be held responsible if you do any business with him. I should cooperate in my just struggle, he said.

Leave a Reply

Your email address will not be published. Required fields are marked *