ಎ. ಜೆ ಆಸ್ಪತ್ರೆಯಲ್ಲಿ ಡಾ. ಅರ್ಥಿಕಾ ಶೆಟ್ಟಿ ನೇತೃತ್ವದ ವೈದ್ಯರ ತಂಡದಿಂದ ಯಶಸ್ವಿ ಅಪರೂಪದ ಶಸ್ತ್ರಚಿಕಿತ್ಸೆ

ಮಂಗಳೂರು: ಎಂಡೋಮೆಟ್ರಿಯೊಸಿಸ್ ಸಮಸ್ಯೆಯಿಂದ ಬಳಲುತ್ತಿದ್ದ ಇಬ್ಬರು ಮಹಿಳಾ ರೋಗಿಗಳಿಗೆ ಅಪರೂಪದ ಲ್ಯಾಪರೋಸ್ಕೋಪಿಕ್ (ಮಿನಿಮಲ್ ಇನ್ವೇಸಿವ್) ಸಂತಾನೋತ್ಪತ್ತಿ ಸಾಮರ್ಥ್ಯ ಉಳಿಸುವ ಶಸ್ತ್ರಚಿಕಿತ್ಸೆಗಳನ್ನು ಮಂಗಳೂರು ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸ್ತ್ರೀ ರೋಗ ತಜ್ಞೆ ಡಾ. ಅರ್ಥಿಕಾ ಶೆಟ್ಟಿ ಅವರ ನೇತೃತ್ವ ತಂಡವು ಯಶಸ್ವಿಯಾಗಿ ನಡೆಸಿದೆ ಎಂದು ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಅವರು ತಿಳಿಸಿದ್ದಾರೆ.

ಎಂಡೋಮೆಟ್ರಿಯೊಸಿಸ್ ಮತ್ತು ಅಡೆನೊಮಯೋಸಿಸ್ ಮಹಿಳೆಯರಲ್ಲಿ ಸಾಮಾನ್ಯ ಆಗಿದ್ದರೂ, ಹಲವು ಬಾರಿ ಸರಿಯಾದ ಸಮಯದಲ್ಲಿ ಪತ್ತೆ ಮಾಡಲಾಗದೇ ತೀವ್ರ ಹೊಟ್ಟೆ ಕೆಳಭಾಗದ ನೋವು, ನೋವಿನೊಂದಿಗೆ ಮಾಸಿಕ ಋತುಚಕ್ರ ಮತ್ತು ಸಂತಾನೋತ್ಪತ್ತಿ ಸಮಸ್ಯೆಗಳಿಗೆ ಕಾರಣ ಆಗುತ್ತದೆ. ಮೊದಲ ಪ್ರಕರಣದಲ್ಲಿ 36 ವರ್ಷದ ಮಹಿಳೆ 10 ವರ್ಷಗಳಿಂದ ತೀವ್ರ ಹೊಟ್ಟೆ ನೋವು, ಋತುಚಕ್ರ ಸಮಸ್ಯೆಯಿಂದಾಗಿ ರಕ್ತಸ್ರಾವ ಮತ್ತು ತೀವ್ರ ತರಹದ ನೋವಿನಿಂದ ಬಳಲುತ್ತಿದ್ದರು. ಪ್ರಾಥಮಿಕ ಹಂತದ ಪರೀಕ್ಷೆಗಳಲ್ಲಿ ಅವರಿಗೆ ಐಲಿಯೋಕೋಲಿಕ್ ಭಾಗವನ್ನು ಒಳಗೊಂಡ ನಾಲ್ಕನೇ ಹಂತದ ಎಂಡೋಮೆಟ್ರಿಯೊಸಿಸ್ ಇರುದು ಪತ್ತೆಯಾಯಿತು. ಅವರಿಗೆ ಲ್ಯಾಪರೋಸ್ಕೋಪಿಕ್ ಎಂಡೋಮೆಟ್ರಿಯೊಸಿಸ್ ಎಕ್ಸಿಷನ್ ಶಸ್ತ್ರಚಿಕಿತ್ಸೆ ಹಾಗೂ ಐಲಿಯೋಕೋಲಿಕ್ ನೊಡ್ಯೂಲ್ ತೆಗೆದು ಹಾಕುವಂತಹ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಯಿತು ಎಂದರು.

2ನೇ ಪ್ರಕರಣದಲ್ಲಿ, 34 ವರ್ಷದ ಮಹಿಳೆಗೆ ಡಿಫ್ಯೂಸ್ ಪೋಸ್ಟೀರಿಯರ್ ವಾಲ್ ಅಡೆನೊಮಯೋಸಿಸ್ ಜತೆಗೆ ನಾಲ್ಕನೇ ಹಂತದ ಎಂಡೋಮೆಟ್ರಿಯೊಸಿಸ್ ಪತ್ತೆ ಆಯಿತು. ಅವರಿಗೆ ಲ್ಯಾಪರೋಸ್ಕೋಪಿಕ್ ಎಂಡೋಮೆಟ್ರಿಯೊಸಿಸ್ ಎಕ್ಸಿಷನ್ ಶಸ್ತ್ರಚಿಕಿತ್ಸೆ ನಡೆಸಿ ನಂತರ ಮೈಕ್ರೋವೇವ್ ಅಬ್ಲೇಷನ್ ಮೂಲಕ ಚಿಕಿತ್ಸೆ ನೀಡಲಾಯಿತು. ಇದರಿಂದ ನೋವು ಕಡಿಮೆ ಆಗುವ ಜತೆಗೆ ಗರ್ಭಧಾರಣೆಯ ಭವಿಷ್ಯ ಅವಕಾಶವನ್ನು ಉಳಿಸಿಕೊಳ್ಳಲು ಸಹಾಯ ಆಯಿತು ಎಂದದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ನಡೆದ ಶಸ್ತ್ರಚಿಕಿತ್ಸಾ ತಂಡದ ನೇತೃತ್ವವನ್ನು ಡಾ. ಅರ್ಥಿಕಾ ಶೆಟ್ಟಿ ಅವರು ವಹಿಸಿದ್ದರು. ಶಸ್ತ್ರಚಿಕಿತ್ಸೆಯ ತಂಡದಲ್ಲಿ ಅರವಳಿಕೆ ತಜ್ಞ ಡಾ. ಟಿ.ವಿ. ತಂತ್ರಿ, ರೇಡಿಯಾಲಜಿ ಡಾ. ಭರತ್ ಶೆಟ್ಟಿ, ಉದರ ಶಸ್ತ್ರಚಿಕಿತ್ಸಕ ಡಾ. ರೋಹನ್ ಶೆಟ್ಟಿ ಅವರ ತಂಡವು ಇತ್ತು ಎಂದರು.

ಸ್ತ್ರೀ ರೋಗ ತಜ್ಞೆ ಡಾ. ಅರ್ಥಿಕಾ ಶೆಟ್ಟಿ ಅವರು ಮಾತನಾಡಿ, ಎಂಡೋಮೆಟ್ರಿಯೊಸಿಸ್ ಲಕ್ಷಣಗಳು ಇತರ ಸಾಮಾನ್ಯ ಸಮಸ್ಯೆಗಳ ಜತೆಗೆ ಹೊಂದಿಕೆ ಆಗುವುದರಿಂದ ಹಲವಾರು ಮಹಿಳೆಯರಿಗೆ ಸರಿಯಾದ ನಿರ್ಣಯ ತೆಗೆದುಕೊಳ್ಳಲು ವಿಳಂಬ ಆಗುತ್ತದೆ. ಎಕ್ಸಿಷನ್ ಶಸ್ತ್ರಚಿಕಿತ್ಸೆ ಎಂಡೋಮೆಟ್ರಿಯೊಸಿಸ್‌ಗೆ ಅತ್ಯುತ್ತಮ ಚಿಕಿತ್ಸೆ ವಿಧಾನ ಆಗಿದ್ದು, ಸಮಯೋಚಿತ ನಿರ್ಣಯ ಮತ್ತು ಮಿನಿಮಲ್ ಇನ್ವೇಸಿವ್ ಶಸ್ತ್ರಚಿಕಿತ್ಸೆಯಿಂದ ನೋವು ಕಡಿಮೆ ಆಗುವುದರ ಜತೆಗೆ ಸಂತಾನೋತ್ಪತ್ತಿ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಸಂಕೀರ್ಣ ಸ್ತ್ರೀರೋಗ ಸಮಸ್ಯೆಗಳಿಗೆ ಸಂತಾನೋತ್ಪತ್ತಿ ಸಾಮರ್ಥ್ಯ ಉಳಿಸುವ ಅತ್ಯಾಧುನಿಕ ಚಿಕಿತ್ಸೆ ಸೌಲಭ್ಯಗಳು ಎ.ಜೆ ಆಸ್ಪತ್ರೆಯಲ್ಲಿ ಲಭ್ಯ ಇವೆ ಎಂದು ತಿಳಿಸಿದ್ದಾರೆ.

Mangaluru: A team led by Dr. Arthika Shetty, a gynecologist at AJ Hospital and Research Centre, Mangaluru, has successfully performed a rare laparoscopic (minimally invasive) fertility-preserving surgery on two female patients suffering from endometriosis, said Dr. Prashant Marla, Medical Director.

Endometriosis and adenomyosis, although common in women, often go undiagnosed at the right time, leading to severe lower abdominal pain, painful menstrual periods and reproductive problems. In the first case, a 36-year-old woman had been suffering from severe abdominal pain, bleeding and severe pain due to menstrual problems for 10 years. Initial tests revealed that she had stage four endometriosis involving the ileocolic region. She underwent laparoscopic endometriosis excision surgery and ileocolic nodule removal surgery successfully, he said.

Leave a Reply

Your email address will not be published. Required fields are marked *