ಬೈಂದೂರು: ಎಂಸಿಸಿ ಬ್ಯಾಂಕ್ – ಬೈಂದೂರು ಶಾಖೆಯು ಪ್ರಾರಂಭಗೊಂಡ ಆರು ತಿಂಗಳೊಳಗೆ ರೂಪಾಯಿ 10 ಕೋಟಿ ವಹಿವಾಟು ದಾಟಿದ ಗಮನಾರ್ಹ ಸಾಧನೆಯ ಸ್ಮರಣಾರ್ಥವಾಗಿ, ಬೈಂದೂರು ಶಾಖೆಯ ಆವರಣದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನ ಹಾಗೂ ಉಚಿತ ವೈದ್ಯಕೀಯ ಆರೋಗ್ಯ ಶಿಬಿರರ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ಬೈಂದೂರು ಶಾಖೆಯು ಆರು ತಿಂಗಳೊಳಗೆ ರೂ.10 ಕೋಟಿ ವಹಿವಾಟು ಸಾಧಿಸಿರುವುದು ಎಂಸಿಸಿ ಬ್ಯಾಂಕ್ ನ ಐತಿಹಾಸಿಕ ಮೈಲುಗಲ್ಲು ಎಂದರು.
ಬ್ಯಾಂಕ್ ಸಾಮಾನ್ಯವಾಗಿ ಅಂತರ ರಾಷ್ಟ್ರೀಯ ಮಹಿಳಾ ದಿನವನ್ನು ಪ್ರಧಾನ ಕಚೇರಿ ಯಲ್ಲಿ ಆಚರಿಸಲಾಗುತ್ತದೆ, ಆದರೆ ಈ ವರ್ಷ ಬೈಂದೂರು ಶಾಖೆ ಕಡಿಮೆ ಅವಧಿಯಲ್ಲಿ ಶಾಖೆಯು ರೂ. 10 ಕೋಟಿ ಮೈಲುಗಲ್ಲು ತಲುಪಲು ಸಹಕಾರ ನೀಡಿದ ಬೈಂದೂರು ಶಾಖೆಯ ಎಲ್ಲ ಗ್ರಾಹಕರಿಗೆ ಧನ್ಯವಾದ ಸಲ್ಲಿಸುವೆ ಎಂದರು.

ತಮ್ಮ ಭಾಷಣದಲ್ಲಿ, ವಂ. ಧರ್ಮಗುರು ವಿನ್ಸೆಂಟ್ ಕುವೆಲ್ಲೊ ಬೈಂದೂರು ಶಾಖೆಯು ಅಲ್ಪಾವಧಿಯಲ್ಲಿಯೇ ರೂ. 10 ಕೋಟಿ ವಹಿವಾಟು ಸಾಧಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದರು. ಗ್ರಾಹಕರು ಮತ್ತು ಬೈಂದೂರು ಪ್ರದೇಶದ ಜನರ ನಂಬಿಕೆ ಮತ್ತು ಬೆಂಬಲ ಹಾಗೂ ಬ್ಯಾಂಕಿನ ನಿಯಮಗಳು ಬ್ಯಾಂಕಿನ ಸ್ಥಿರ ಬೆಳವಣಿಗೆ ಮತ್ತು ಪ್ರಗತಿಗೆ ಅಧ್ಯಕ್ಷರು ಮತ್ತು ಆಡಳಿತ ಮಂಡಳಿಯನ್ನು ಅವರು ಶ್ಲಾಘಿಸಿದರು.
ಮುಖ್ಯ ಅತಿಥಿಗಳಾಗಿ ಬೈಂದೂರು ಹೋಲಿ ಕ್ರಾಸ್ ಚರ್ಚ್ ಧರ್ಮಗುರು ವಂ. ವಿನ್ಸೆಂಟ್ ಕುವೆಲ್ಲೊ, ರಂಗಭೂಮಿ ಕಲಾವಿದ ಗಣೇಶ್ ಕಾರಂತ್; ಸಮಾಜ ಸೇವಕ ಫಯಾಜ್ ಅಲಿ; ಮತ್ತು ಬೈಂದೂರು ಯೆಡ್ಥರೆ ಯಲ್ಲಿರುವ ಧರ್ಮಸ್ಥಳ ಸ್ವಸಹಾಯ ಗುಂಪಿನ ಅಧ್ಯಕ್ಷೆ ಶೈಲಾ ಇದ್ದರು.
ಫಾ. ಮುಲ್ಲರ್ ಮೆಡಿಕಲ್ ಕಾಲೇಜು ಅಸ್ಪತೆಯ ಡಾ. ಎಲ್ರೊಯ್ ಸಲ್ಡಾನ್ಹಾ, ಶಾಖಾ ನಿರ್ದೇಶಕ ಎಲ್ರಾಯ್ ಕೆ. ಕ್ರಾಸ್ಟೊ, ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ಮತ್ತು ಬೈಂದೂರ್ ಶಾಖೆಯ ಹಿರಿಯ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಸ್ ಇದ್ದರು.
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಬೈಂದೂರು ಶಾಖೆಯ ಮಹಿಳಾ ಗ್ರಾಹಕರಿಗೆ ಬ್ಯಾಂಕಿನೊಂದಿಗಿನ ಅವರ ಅಮೂಲ್ಯ ಸಂಬಂಧ ಮತ್ತು ಶಾಖೆಯ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶಾಲು, ಉಡುಗೊರೆ ಮತ್ತು ಗುಲಾಬಿ ಹೊದಿಕೆ ನೀಡಿ ಗೌರವಿಸಲಾಯಿತು. ಹಾಜರಿದ್ದ ಮಹಿಳಾ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಸನ್ಮಾಸಿಸಲಾಯಿತು. ಬೈಂದೂರು ಶಾಖೆಯ ಹಿರಿಯ ಪ್ರಬಂಧಕರು ಮತ್ತು ಸಿಬ್ಬಂದಿ ಹಾಗೂ ಶಾಖಾ ನಿರ್ದೇಶಕ ಎಲ್ರೊಯ್ ಕೆ ಕ್ರಾಸ್ಟೊ ಅವರನ್ನೂ ಸನ್ಮಾನಿಸಲಾಯಿತು.
ಶಾಖಾ ನಿರ್ದೇಶಕ ಎಲ್ರೊಯ್ ಕೆ. ಕ್ರಾಸ್ಟೊ ಸ್ವಾಗತಿಸಿ, ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ನಿರೂಪಿಸಿ ವಂದಿಸಿದರು.



