ಶ್ರೀಲಂಕಾ ಕರಾವಳಿ ಸಮೀಪ ಇರಾನ್‌ ಯುದ್ಧನೌಕೆ ಮೇಲೆ ಅಮೆರಿಕ ದಾಳಿ

ಕೊಲಂಬೊ: ಅಮೆರಿಕ–ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದಲ್ಲಿ ಶ್ರೀಲಂಕಾ ಕರಾವಳಿ ಸಮೀಪ ಇರಾನ್‌ ಯುದ್ಧನೌಕೆ ಮೇಲೆ ಅಮೆರಿಕ ದಾಳಿ ನಡೆಸಿದ ಪರಿಣಾಮ 87 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆ ಆಗಿರುವ ಘಟನೆ ವರದಿ ಆಗಿದೆ.

ದಾಳಿಗೆ ಗುರಿಯಾದ ನೌಕೆಯನ್ನು ಇರಾನ್ ನೌಕಾಪಡೆಯ ಐಆರ್‌ಐಎಸ್ ಡೆನಾ ಎಂದು ಗುರುತಿಸಲಾಗಿದೆ. ಅಮೆರಿಕದ ಸಬ್‌ಮರೀನ್‌ನಿಂದ ಹಾರಿಸಲಾದ ಟಾರ್ಪೆಡೋ ಕ್ಷಿಪಣಿಯಿಂದ ಈ ನೌಕೆಯನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಹೇಳಿಕೆ ನೀಡಿದೆ.

ದಾಳಿಯ ತೀವ್ರತೆಗೆ ನೌಕೆ ಸಂಪೂರ್ಣವಾಗಿ ಮುಳುಗಿದ್ದು, ಅದರಲ್ಲಿದ್ದ ಸಿಬ್ಬಂದಿಯಲ್ಲಿ 32 ಮಂದಿ ಮಾತ್ರ ರಕ್ಷಣೆ ಮಾಡಲಾಗಿದೆ. 61 ಮಂದಿ ನಾಪತ್ತೆ ಆಗಿದ್ದು, ಅವರು ಸಾವಿಗೀಡಾಗಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ 87 ಕ್ಕೂ ಹೆಚ್ಚು ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಶ್ರೀಲಂಕಾ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ 2ನೇ ವಿಶ್ವಯುದ್ಧದ ನಂತರ ಅಮೆರಿಕ ಸಬ್‌ಮರೀನ್‌ನಿಂದ ಶತ್ರು ರಾಷ್ಟ್ರದ ನೌಕೆಯನ್ನು ಟಾರ್ಪೆಡೋ ಮೂಲಕ ಹೊಡೆದುರುಳಿಸಿದ ಅಪರೂಪದ ಘಟನೆ ಎನ್ನಲಾಗಿದೆ.

Leave a Reply

Your email address will not be published. Required fields are marked *