ಸಿಎಂ ಸಿದ್ದರಾಮಯ್ಯ 17ನೇ ಬಾರಿ ಬಜೆಟ್ ಮಂಡನೆ, ಸಂಪೂರ್ಣ ಬಜೆಟ್ ವೀಕ್ಷಣೆಗೆ ಲಿಂಕ್ ಕ್ಲಿಕ್ ಮಾಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರು 2026-27ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದು, ಬಜೆಟ್‌ನ ಒಟ್ಟು ಗಾತ್ರ (ಸಂಚಿತ ನಿಧಿ) ಬರೋಬ್ಬರಿ 4.48 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. 1.32 ಲಕ್ಷ ಕೋಟಿ ರೂಪಾಯಿ ಸಾಲದ ಮೊರೆ ಹೋಗಿದ್ದಾರೆ.
22,957 ಕೋಟಿ ರೂ. ರಾಜಸ್ವ ಕೊರತೆ ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ವಿವಿಧ ಇಲಾಖೆಗೆ ಅನುದಾನ

ಶಿಕ್ಷಣ ಇಲಾಖೆಗೆ ದಾಖಲೆಯ 47,224 ಕೋಟಿ ರೂಪಾಯಿ ಅನುದಾನ
ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಗೆ 22,203 ಕೋಟಿ ಅನುದಾನ
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,929 ಕೋಟಿ ಅನುದಾನ

(ಕೃಪೆ: ವಾರ್ತಾ ಇಲಾಖೆ)

ಗ್ಯಾರಂಟಿಗಳಿಗೆ ಅನುದಾನ ಮೀಸಲು:

ಗೃಹ ಲಕ್ಷಿ ಯೋಜನೆಗೆ 28,608 ಕೋಟಿ ಘೋಷಣೆ
ಗೃಹ ಜ್ಯೋತಿ ಯೋಜನೆಗೆ 10578 ಕೋಟಿ ಮೀಸಲು
ಶಕ್ತಿ ಯೋಜನೆಗೆ 5300 ಕೋಟಿ ರೂಪಾಯಿ ಘೋಷಣೆ
ಅನ್ನಭಾಗ್ಯ ಯೋಜನೆಗೆ 6200 ಕೋಟಿ ಮೀಸಲು

ಕಳೆದ 2025-26ನೇ ಸಾಲಿನಲ್ಲಿ ಸಿಎಂ ಸಿದ್ದರಾಮಯ್ಯ 4.09 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. ಸುಮಾರು 19,262 ಕೋಟಿ ಅಂದಾಜು ಆದಾಯ ಕೊರತೆಯ ಬಜೆಟ್ ಮಂಡನೆ ಮಾಡಿದ್ದರು. ಸುಮಾರು 1,16,000 ಕೋಟಿ ರೂ. ಸಾಲದ ಮೊರೆ ಹೋಗಿದ್ದರು.

Leave a Reply

Your email address will not be published. Required fields are marked *