ಮಂಗಳೂರು: ನಗರದ ಸಂಗೀತ ಭಾರತಿ ಫೌಂಡೇಷನ್ ಆಶ್ರಯದಲ್ಲಿ ಉರ್ವ ಅಂಬೇಡ್ಕರ್ ಸಭಾಂಗಣದಲ್ಲಿ ನಡೆದ ಸ್ತ್ರೀ ವಿಶಿಷ್ಟ ಪರಿಕಲ್ಪನೆಯ ಸಂಗೀತ ಕಾರ್ಯಕ್ರಮವನ್ನು ಸಂಗೀತ ಗುರುಗಳಾದ ಬಸ್ತಿ ಕವಿತಾ ಶೆಣೈ, ವಿಭಾ ನಾಯಕ್, ಶ್ರೀಲತಾ ಪ್ರಭು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಸಂಗೀತ ಭಾರತಿ ಫೌಂಡೇಶನ್ ಅಧ್ಯಕ್ಷ ಉಸ್ತಾದ್ ರಫೀಕ್ ಖಾನ್, ಉಪಾಧ್ಯಕ್ಷ ನರೇಂದ್ರ ಎಲ್ ನಾಯಕ್, ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್, ಟ್ರಸ್ಟಿ ರಮೇಶ್ ಕೆ. ಜಿ, ಖಚಾಂಚಿ ಕರುಣಾಕರ ಬಳ್ಕೂರು, ಸದಸ್ಯೆ ಸೌಮ್ಯ ಕಾಮತ್ ಇದ್ಧರು.

ವಿಭಾ ಹೆಗ್ಡೆ ಮತ್ತು ಶಿವಾನಿ ಮಿರಾಜ್ ಕರ್ ಅವರಿಂದ ಶಾಸ್ತ್ರೀಯ ಜುಗಲ್ ಬಂಧಿ ಕಾರ್ಯಕ್ರಮ ನಡೆಯಿತು. ಅವರಿಗೆ ಹಾರ್ಮೋನಿಯಂ ನಲ್ಲಿ ಮೇಧಾ ಭಟ್, ತಬಲಾದಲ್ಲಿ ವಿಜೇತಾ ಹೆಗ್ಡೆ, ತಂಬೂರದಲ್ಲಿ ಪ್ರತೀಕ್ಷಾ ಪ್ರಭು, ಶ್ರಾವರಿ ಎಸ್ ಸಾಥ್ ನೀಡಿದರು.
ಉತ್ತರಾರ್ಧದಲ್ಲಿ ವಯೋಲಿನ್ ಟ್ರಯೋ ಕಾರ್ಯಕ್ರಮವನ್ನು ಸಂಗೀತಾ ಶಂಕರ್ ಮತ್ತು ನಂದಿನಿ ಶಂಕರ್ , ರಾಗಿಣಿ ಶಂಕರ್ ನಡೆಸಿಕೊಟ್ಟರು. ಅವರಿಗೆ ತಬಲಾದಲ್ಲಿ ಅನುರಾಧ ಪಾಲ್ ಸಾಥ್ ನೀಡಿದರು. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ , ಪ್ರವಾಸೋದ್ಯಮ ಇಲಾಖೆ, ಕೆನರಾ ಬ್ಯಾಂಕ್, ಡಾ ದಯಾನಂದ ಫೈ, ಕರ್ಣಾಟಕ ಬ್ಯಾಂಕ್ , ಎಕ್ಸ್ ಪರ್ಟ್ ಸಮೂಹ ಶಿಕ್ಷಣ ಸಂಸ್ಥೆ, ಮುದ್ರಾ ಪ್ರಿಂರ್ಟಸ್ ಸಹ ಪ್ರಾಯೋಜಕತ್ವವನ್ನು ನೀಡಿದ್ದಾರೆ.




